ETV Bharat / international

New Year Firing: ಹೊಸ ವರ್ಷಾಚರಣೆ ವೇಳೆ ಶೂಟೌಟ್: ನಾಲ್ವರ ದುರ್ಮರಣ, ಹಲವರಿಗೆ ಗಾಯ

ಹೊಸ ವರ್ಷಾಚರಣೆ ವೇಳೆಯಲ್ಲಿ ಗುಂಡಿನ ದಾಳಿ ನಡೆದಿದ್ದು, ಅಮೆರಿಕದಲ್ಲಿ ಮೂವರು ಯುವಕರು ಹಾಗೂ ಪಾಕಿಸ್ತಾನದಲ್ಲಿ ಓರ್ವ ಬಾಲಕ ಮೃತಪಟ್ಟಿದ್ದಾನೆ.

NEW YEAR PARTY FIRING SEVERAL PEOPLE DIE AND SOME WERE WOUNDED
New Year Party Firing: ಹೊಸ ವರ್ಷಾಚರಣೆ ವೇಳೆ ಶೂಟೌಟ್ ನಾಲ್ವರ ದುರ್ಮರಣ, ಹಲವರಿಗೆ ಗಾಯ
author img

By

Published : Jan 2, 2022, 4:45 AM IST

ಮಿಸ್ಸಿಸ್ಸಿಪ್ಪಿ, ಅಮೆರಿಕ: ಹೊಸ ವರ್ಷಾಚರಣೆ ವೇಳೆ ನಡೆದ ಶೂಟೌಟ್​​ನಲ್ಲಿ ಮೂವರು ಸಾವನ್ನಪ್ಪಿ, ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದ್ದು, ಅವರಲ್ಲಿ ಓರ್ವನ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಿಸ್ಸಿಸ್ಸಿಪ್ಪಿ ರಾಜ್ಯದ ಗಲ್ಫ್​ಪೋರ್ಟ್ ಪ್ರದೇಶದಲ್ಲಿ ಹೊಸ ವರ್ಷಾಚರಣೆ ಕೆಲವು ನಿಮಿಷಗಳಷ್ಟೇ ಬಾಕಿಯಿರುವಾಗ ಶೂಟೌಟ್​ ನಡೆದಿದೆ. ಡಿಸೆಂಬರ್ 31ರ ಮಧ್ಯರಾತ್ರಿ 11.58ಕ್ಕೆ ಘಟನೆ ನಡೆದಿದ್ದು, ಜಗಳದಿಂದ ಪರಸ್ಪರ ಗುಂಡುಹಾರಿಸಿಕೊಂಡಿದ್ದಾರೆ ಎನ್ನಲಾಗಿದೆ.

ಘಟನೆಯಲ್ಲಿ ಮೃತಪಟ್ಟವರನ್ನು ಡಿ'ಐಬರ್‌ವಿಲ್ಲೆಯ ಕೋರೆ ಡುಬೋಸ್ (23), ಗಲ್ಫ್‌ಪೋರ್ಟ್‌ನ ಸೆಡ್ರಿಕ್ ಮೆಕ್‌ಕಾರ್ಡ್ (28), ಬೇ ಸೇಂಟ್ ಲೂಯಿಸ್‌ನ ಆಬ್ರೆ ಲೆವಿಸ್ (22) ಎಂದು ಗುರ್ತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ ಎಂದು ತಿಳಿದುಬಂದಿದೆ.

ಪಾಕಿಸ್ತಾನದಲ್ಲೂ ಬಾಲಕ ಸಾವು: ಹೊಸ ವರ್ಷಾಚರಣೆಯನ್ನು ಸಂಭ್ರಮಿಸಲು ಮಾಡಿದ ಫೈರಿಂಗ್ 11 ವರ್ಷದ ಬಾಲಕನನ್ನು ಬಲಿ ತೆಗೆದುಕೊಂಡಿರುವುದು ಮಾತ್ರವಲ್ಲದೇ, 18 ಮಂದಿ ಗಾಯಗೊಂಡಿರುವ ಘಟನೆ ಪಾಕಿಸ್ತಾನ ಕರಾಚಿಯಲ್ಲಿ ನಡೆದಿದೆ.

ಕರಾಚಿಯ ಅಜ್ಮೀರ್ ನಗ್ರಿ ಪ್ರದೇಶದಲ್ಲಿ ಘಟನೆ ನಡೆದಿದ್ದು, ಗಾಯಗೊಂಡಿದ್ದ ಬಾಲಕ ರೆಜಾ ಎಂಬಾತನನ್ನು ಜಿನ್ನಾಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರೆಜಾ ಮೃತಪಟ್ಟಿದ್ದಾನೆ.

ಇದನ್ನೂ ಓದಿ: Vaishno Devi Stampede: ತನಿಖೆಗೆ ತ್ರಿಸದಸ್ಯ ಸಮಿತಿ ರಚನೆ, ವಾರದೊಳಗೆ ವರದಿ ನೀಡಲು ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.