ವಾಷಿಂಗ್ಟನ್ (ಅಮೆರಿಕ): ಆಂತರಿಕ ಕಾರ್ಯದರ್ಶಿಯಾಗಿ ನ್ಯೂ ಮೆಕ್ಸಿಕೊ ಕಾಂಗ್ರೆಸ್ ವುಮನ್ ಡೆಬ್ ಹಾಲೆಂಡ್ ಅಧಿಕೃತವಾಗಿ ನೇಮಕಗೊಂಡಿದ್ದಾರೆ.
ಆಂತರಿಕ ಕಾರ್ಯದರ್ಶಿ ಸ್ಥಾನಕ್ಕೆ ಅವರ ನಾಮ ನಿರ್ದೇಶನವನ್ನು ಅಮೆರಿಕ ಸೆನೆಟ್ ಸೋಮವಾರ 51-40ರ ಮತದಿಂದ ಅಂಗೀಕರಿಸಿತು. 60 ವರ್ಷದ ಹಾಲೆಂಡ್, ಕ್ಯಾಬಿನೆಟ್ ಏಜೆನ್ಸಿಯನ್ನು ಮುನ್ನಡೆಸಿದ ಮೊದಲ ಸ್ಥಳೀಯ ಅಮೆರಿಕನ್ ಆಗಿದ್ದಾರೆ.
ಆಂತರಿಕ ಕಾರ್ಯದರ್ಶಿಯಾಗಿ ಡೆಬ್ ಹಾಲೆಂಡ್ ನೇಮಕ ಸ್ಥಳೀಯ ಅಮೆರಿಕನ್ ಇತಿಹಾಸದಲ್ಲಿ ಒಂದು ಮೈಲಿಗಲ್ಲು ಪ್ರತಿನಿಧಿಸುತ್ತದೆ ಎಂದು ಸುಕ್ವಾಮಿಶ್ ಬುಡಕಟ್ಟಿನ ಅಧ್ಯಕ್ಷ ಲಿಯೊನಾರ್ಡ್ ಫೋರ್ಸ್ಮನ್ ಹೇಳಿದ್ದಾರೆ.