ಮರಿಲ್ಯಾಂಡ್ (ಅಮೆರಿಕ): ಚಂದ್ರ ಮೇಲೆ ನೀರಿದೆಯೇ? ಎಂಬ ಬಗ್ಗೆ ನಿರಂತರ ಸಂಶೋಧನೆಗಳು ನಡೆಯುತ್ತಲೇ ಇದ್ದು, ಈಗಾಗಲೆ ಹಲವು ಕುತೂಹಲಕಾರಿ ಸಂಗತಿಗಳು ಸಹ ಹೊರಬಂದಿವೆ. ಇದೀಗ ಉಲ್ಕಾಪಾತಗಳು ಸಂಭವಿಸಿದಾಗ ಚಂದ್ರ ಮೇಲೆ ನೀರು ಬಿಡುಗಡೆಯಾಗುತ್ತದೆ ಎಂದು ನಾಸಾದ ಹೊಸ ಸಂಶೋಧನೆಯೊಂದು ಹೇಳಿದೆ.
ಲೂನರ್ ಅಟ್ಮಾಸ್ಫಿಯರ್ ಅಂಡ್ ಡಸ್ಟ್ ಎನ್ವಿರಾನ್ಮೆಂಟ್ ಎಕ್ಸ್ಪ್ಲೋರರ್ (LADEE) ಬಾಹ್ಯಾಕಾಶ ಏಜೆನ್ಸಿಯು ಉಪಗ್ರಹದ ಮೂಲಕ ಈ ಮಾಹಿತಿಯನ್ನು ಕಲೆಹಾಕಿದೆ.
ಏಜೆನ್ಸಿಯ ವಿಜ್ಞಾನಿ ರೆಚರ್ಡ್ ಎಲ್ಫಿಕ್ ಹೇಳಿದಂತೆ, ಚಂದ್ರನಲ್ಲಿ H2O ಅಥವಾ OH ಆಗಲಿ ಸಾಕಷ್ಟು ಪ್ರಮಾಣದಲ್ಲಿ ಇಲ್ಲ. ಆದರೆ ಉಲ್ಕಾ ಶಿಲೆಗಳ ಮೂಲಕ ಚಂದ್ರನಡೆಗೆ ಸಾಗಿ ಬಂದಾಗ ಚಂದ್ರನಲ್ಲಿ ಆವಿ ಕಾಣಿಸಿಕೊಳ್ಳುತ್ತದೆ. ಈ ಪ್ರಕ್ರಿಯೆ ಮುಗಿದ ನಂತರ H2O ಅಥವಾ OH ಹೊರಟು ಹೋಗುತ್ತವೆ ಎಂದು ಹೇಳಿದ್ದಾರೆ.
ಈ ಮಾಹಿತಿಯಿಂದಾಗಿ ವಿಜ್ಞಾನಿಗಳಿಗೆ ಚಂದ್ರನಲ್ಲಿ ನೀರಿರುವುದರ ಇತಿಹಾಸ, ಚಂದ್ರ ಭೂವೈಜ್ಞಾನಿಕತೆ ಹಾಗೂ ಅದರ ಪ್ರಗತಿಯ ಸಂಶೋಧನೆಗಳನ್ನು ಹೆಚ್ಚಿಸಲು ಸಹಾಯಕವಾಗುತ್ತದೆ ಎಂದು ನಾಸಾ ಹೇಳಿದೆ.