ETV Bharat / international

ಮೊಟ್ಟ ಮೊದಲ ಬಾರಿಗೆ ಚಂದ್ರನ ಮೇಲೆ ನೀರು ಪತ್ತೆಹಚ್ಚಿದ ನಾಸಾ - NASA Discovers Water on Sunlit Surface of Moon

ವಾಷಿಂಗ್ಟನ್‌ನ ನಾಸಾ ಪ್ರಧಾನ ಕಚೇರಿಯಲ್ಲಿರುವ ಸೈನ್ಸ್ ಮಿಷನ್ ಡೈರೆಕ್ಟರೇಟ್‌ನಲ್ಲಿನ ಖಗೋಳ ಭೌತಶಾಸ್ತ್ರ ವಿಭಾಗದ ನಿರ್ದೇಶಕ ಪಾಲ್ ಹರ್ಟ್ಜ್, ನಮಗೆ ತಿಳಿದಿರುವ ಪರಿಚಿತ ನೀರು, ಚಂದ್ರನ ಮೇಲೆ ಸೂರ್ಯನ ಬೆಳಕು ಬೀಳುವ ಪ್ರದೇಶದಲ್ಲಿದೆ..

ಮೊಟ್ಟ ಮೊದಲ ಬಾರಿಗೆ ಚಂದ್ರನ ಮೇಲೆ ನೀರು ಪತ್ತೆಹಚ್ಚಿದ ನಾಸಾ

author img

By

Published : Oct 27, 2020, 4:53 PM IST

Updated : Oct 27, 2020, 5:02 PM IST

ವಾಷಿಂಗ್ಟನ್​: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಚಂದ್ರನ ಮೇಲೆ ಚಂದ್ರನ ಮೇಲೆ ಸೂರ್ಯನ ಕಿರಣ ಬೀಳುವ ಪ್ರದೇಶದಲ್ಲಿ ಮೊದಲ ಬಾರಿಗೆ ನೀರು ಪತ್ತೆಹಚ್ಚಿದೆ.

ಈ ಕುರಿತು ನಿನ್ನೆ ನೇಚರ್ ಅಸ್ಟ್ರಾನಮಿಯಲ್ಲಿ ಎರಡು ಸಂಶೋಧನಾ ಲೇಖನಗಳು ಪ್ರಕಟವಾಗಿದ್ದು, ಸೋಫಿಯಾ ಟೆಲಿಸ್ಕೋಪ್​ ಮೂಲಕ ವೀಕ್ಷಿಸುವಾಗ ಸೂರ್ಯನ ಕಿರಣಗಳು ಬೀಳುವ ಚಂದ್ರನ ಮೇಲ್ಮೈಯಲ್ಲಿ ನೀರಿನ ಕುರುಹು ಪತ್ತೆಯಾಗಿವೆ. ಚಂದ್ರನ ಮೇಲೆ ಸೂರ್ಯನ ಬೆಳಕು ಬೀಳುವ ಪ್ರದೇಶದಲ್ಲಿ ಮೊದಲ ಬಾರಿಗೆ ನೀರನ್ನು ಕಂಡುಕೊಂಡಿದ್ದೇವೆ. ಪೆನ್ಸಿಲ್​ ತುದಿಗಿಂತ ಚಿಕ್ಕದಾದ ಮಣ್ಣಿನೊಳಗೆ ಇರುವ ಗಾಜಿನ ಮಣಿಗಳಂತಹ ರಚನೆಗಳೊಳಗೆ ನೀರಿದೆ ಎಂದು ವಿಜ್ಞಾನಿಗಳು ಭಾವಿಸಿದ್ದಾರೆ ಎಂದು ನಾಸಾ ಹೇಳಿದೆ.

ವಾಷಿಂಗ್ಟನ್‌ನ ನಾಸಾ ಪ್ರಧಾನ ಕಚೇರಿಯಲ್ಲಿರುವ ಸೈನ್ಸ್ ಮಿಷನ್ ಡೈರೆಕ್ಟರೇಟ್‌ನಲ್ಲಿನ ಖಗೋಳ ಭೌತಶಾಸ್ತ್ರ ವಿಭಾಗದ ನಿರ್ದೇಶಕ ಪಾಲ್ ಹರ್ಟ್ಜ್, ನಮಗೆ ತಿಳಿದಿರುವ ಪರಿಚಿತ ನೀರು, ಚಂದ್ರನ ಮೇಲೆ ಸೂರ್ಯನ ಬೆಳಕು ಬೀಳುವ ಪ್ರದೇಶದಲ್ಲಿದೆ. ಈ ಆವಿಷ್ಕಾರವು ಆಳವಾದ ಬಾಹ್ಯಾಕಾಶ ಪರಿಶೋಧನೆಗೆ ಸಂಬಂಧಿಸಿದ ಸಂಪನ್ಮೂಲಗಳ ಬಗ್ಗೆ ಆಸಕ್ತಿದಾಯಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಹೇಳಿದ್ದಾರೆ.

ಸೋಫಿಯಾದ ಮುಂದಿನ ಯೋಜನೆಗಳು ಹೆಚ್ಚುವರಿ ಸೂರ್ಯನ ಬೆಳಕು ಇರುವ ಸ್ಥಳಗಳಲ್ಲಿ ಮತ್ತು ವಿವಿಧ ಚಂದ್ರನ ಹಂತಗಳಲ್ಲಿ ನೀರನ್ನು ಹೇಗೆ ಉತ್ಪಾದಿಸುತ್ತವೆ, ಸಂಗ್ರಹಿಸುತ್ತವೆ ಮತ್ತು ಚಂದ್ರನಾದ್ಯಂತ ಚಲಿಸುತ್ತವೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲಿವೆಯಂತೆ.

Last Updated : Oct 27, 2020, 5:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.