ಸ್ಯಾನ್ ಫ್ರಾನ್ಸಿಸ್ಕೋ: 2022 ರ ವೇಳೆಗೆ ಮೈಕ್ರೋ ಚಿಪ್ಗಳ ಕೊರತೆ ನೀಗಿಸಲಾಗುವುದು ಎಂದು ಟೆಸ್ಲಾ ಸಿಇಒ ಎಲಾನ್ ಮಸ್ಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೋವಿಡ್, ಎಲೆಕ್ಟ್ರಾನಿಕ್ ಮತ್ತು ಕಂಪ್ಯೂಟರ್ಗಳಿಗೆ ಬೇಕಾದ ಕಚ್ಚಾವಸ್ತುಗಳ ಪೂರೈಕೆ ಮೇಲೆ ಭಾರಿ ಪರಿಣಾಮ ಬೀರಿದೆ. ಈ ಹಿನ್ನೆಲೆ ಸೆಮಿ ಕಂಡಕ್ಟರ್ ಉದ್ಯಮ ನೆಲಕಚ್ಚಿದೆ ಎಂದು ಹೇಳಿದ್ದಾರೆ. ಮೈಕ್ರೋ ಚಿಪ್ಗಳ ದೊಡ್ಡ ಗ್ರಾಹಕರಾದ ಆಟೋಮೋಟಿವ್ ಉದ್ಯಮದ ಮೇಲೆ ಮೈಕ್ರೋಚಿಪ್ ಕೊರತೆಯು ಗಾಢವಾದ ಪರಿಣಾಮ ಬೀರಿದೆ.
ಆಟೋ-ಟೆಕ್ ವೆಬ್‌ಸೈಟ್ ಈ ಹಿಂದೆ ಚಿಪ್ ಕೊರತೆಯು ಎಲೆಕ್ಟ್ರಿಕ್ ವಾಹನ ಉತ್ಪಾದನೆಯ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂಬುದರ ಕುರಿತು ವರದಿಯನ್ನು ಬಿಡುಗಡೆ ಮಾಡಿತ್ತು. ಹಲವಾರು ವಾಹನ ತಯಾರಕರು ಚಿಪ್ ಪೂರೈಕೆಯಾಗುವವರೆಗೂ ಉತ್ಪಾದನೆ ನಿಲ್ಲಿಸಬೇಕಾಗಿತ್ತು. ಇಂಟೆಲ್‌ನ ಸಿಇಒ ಪ್ಯಾಟ್ ಗೆಲ್ಸಿಂಗರ್ (Pat Gelsinger) ಪ್ರಕಾರ, ಹೆಚ್ಚುತ್ತಿರುವ ಬೇಡಿಕೆ ಪೂರೈಸಲು ಒಂದೆರಡು ವರ್ಷ ಬೇಕಾಗಬಹುದು ಎಂದಿದ್ದಾರೆ.
ಮೈಕ್ರೋಕಂಟ್ರೋಲರ್ ಚಿಪ್ ಪೂರೈಕೆಯಾಗದೆ ಇರೋದು ದೀರ್ಘಕಾಲಿಕ ಸಮಸ್ಯೆಯಲ್ಲ. ಪೂರೈಕೆ ಸರಪಳಿಯೇ ಸಮಸ್ಯೆ ಎಂದು ಮಸ್ಕ್ ಹೇಳಿದ್ದಾರೆ.
ಇಟಲಿಯಲ್ಲಿ ನಡೆದ ಟೆಕ್ ಕಾನ್ಫರೆನ್ಸ್ನಲ್ಲಿ ಮಾತನಾಡಿದ ಅವರು, ಮುಂದಿನ ವರ್ಷದ ವೇಳೆಗೆ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಬಹಳಷ್ಟು ಚಿಪ್ ಫ್ಯಾಬ್ರಿಕೇಷನ್ ಪ್ಲಾಂಟ್ಗಳನ್ನು ನಿರ್ಮಿಸುತ್ತಿದ್ದೇವೆ. 2022 ರ ವೇಳೆಗೆ ಪೂರೈಕೆ ಸರಪಳಿ ಯಥಾಸ್ಥಿತಿಯಾಗುವ ಭರವಸೆಯಿದೆ ಎಂದರು.
ಇದನ್ನೂ ಓದಿ: ಸೆಪ್ಟೆಂಬರ್ ಅಂತ್ಯಕ್ಕೆ Ford ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಹುದ್ದೆ ತೊರೆಯಲಿರುವ ಅನುರಾಗ್