ನ್ಯೂಯಾರ್ಕ್(ಅಮೆರಿಕ): ನ್ಯೂಯಾರ್ಕ್‌ನ 27 ವರ್ಷದ ಕೇಟ್ ನಾರ್ಟನ್ ಎಂಬ ಮಹಿಳೆ ಮೈಕ್ರೋಸಾಫ್ಟ್ ಎಕ್ಸೆಲ್ (ಗೂಗಲ್ ಶೀಟ್) ಬಗ್ಗೆ ಟ್ರಿಕ್ಸ್ ಮತ್ತು ಟಿಪ್ಸ್ ಹೇಳುವ ಮೂಲಕ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದಾಳೆ. ಹಾಗಾಗಿ ಅವಳನ್ನು ಮಿಸ್ ಎಕ್ಸೆಲ್ ಎಂದೇ ಕರೆಯಲಾಗುತ್ತದೆ. ಸುದ್ದಿ ಇದಲ್ಲ.. ಅವಳು ತಿಂಗಳಿಗೆ ಎಷ್ಟು ಸಂಬಳ ತೆಗೆದುಕೊಳ್ಳುತ್ತಾರೆ ಅನ್ನೋದು ಗಮನಿಸಬೇಕಾದ ಅಂಶ.
ಕೇಟ್ ನಾರ್ಟನ್ ಟಿಕ್ಟಾಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಮೈಕ್ರೋಸಾಫ್ಟ್ ಎಕ್ಸೆಲ್ ಬಗ್ಗೆ ವಿಭಿನ್ನವಾಗಿ ಹಾಗೂ ತರಹೇವಾರಿಯಾಗಿ ವಿಡಿಯೋ ಮಾಡುವ ಮೂಲಕ ಸರಳವಾಗಿ ಮಾಹಿತಿ ನೀಡುವ ಕಾರ್ಯ ಮಾಡಿತ್ತಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕ್ರೇಜ್ ಹುಟ್ಟುಹಾಕಿದ್ದಾಳೆ.
ಮೈಕ್ರೋಸಾಫ್ಟ್ ಎಕ್ಸೆಲ್ ಬಗ್ಗೆ ಅಗಾಧವಾದ ಜ್ಞಾನ ಗಳಿಸಿಕೊಂಡಿರುವ ಈ ಮಹಿಳೆ ತಿಂಗಳಿಗೆ ಕೋಟಿ ರೂ.ಗೂ ಹೆಚ್ಚು ಹಣ ಗಳಿಸುತ್ತಿದ್ದಾಳಂತೆ. ಗೂಗಲ್ ಸ್ಪ್ರೆಡ್‌ಶೀಟ್‌ಗಳ ಬಗ್ಗೆ ಪಾಠ ಮಾಡಲೆಂದೇ ಕೇಟ್ ಕಾರ್ಪೊರೇಟ್ ಕಂಪನಿಯಲ್ಲಿ ತಮಗೆ ಒಲಿದುಬಂದ ಉತ್ತಮ ಕೆಲಸವನ್ನು ಸಹ ತ್ಯಜಿಸಿದ್ದಾರಂತೆ. ನಿರೀಕ್ಷೆಯಂತೆ ತಡವಾಗಿ ಕೆಲಸ ಆರಂಭಿಸಿದ ಕೇಟ್ ಸದ್ಯ ಬೇಡಿಕೆಯ ಮಾರ್ಗದರ್ಶಿಯಾಗಿದ್ದಾರೆ. ಕಡಿಮೆ ಸಮಯದಲ್ಲಿ ಅಗಾಧ ಜನಪ್ರಿಯಿತೆ ಗಳಿಸುವುದು ಹೇಗೆ ಸಾದ್ಯ ಎಂದು ಮಾಡಿ ತೋರಿಸಿಕೊಟ್ಟಿದ್ದಾರೆ.
ಇದು ಸಾದ್ಯವಾಗಿದ್ದು ಹೀಗೆ:
2020 ರಲ್ಲಿ ಇನ್ಸ್ಟಾಗ್ರಾಂ ಹಾಗೂ ಟಿಕ್ಟಾಕ್ನಲ್ಲಿ ಮಿಸ್ ಎಕ್ಸೆಲ್ (@miss.excel) ಹೆಸರಿನಲ್ಲಿ ಖಾತೆಯನ್ನು ತೆರೆದ ಕೇಟ್ ಆನ್‌ಲೈನ್ ಮೂಲಕ ಅಲ್ಲಿ ಪಾಠ ಮಾಡಲು ಆರಂಭಿಸಿದರು. ತಮಾಷೆಯ ನೃತ್ಯಗಳ ಜೊತೆಗೆ ವಿನೋದ ಮತ್ತು ಆಸಕ್ತಿದಾಯಕ ವಿಡಿಯೊಗಳ ಮೂಲಕ ಎಕ್ಸೆಲ್ ಹೇಳುತ್ತಾ ಕಲಿಕೆಗಾರರ ಗಮನ ಸೆಳೆದಳು.
ಸಾಲದೆಂಬಂತೆ ಎಕ್ಸೆಲ್ ಬಳಕೆಯ ಸಿಕ್ರೇಟ್ ಹಾಗೂ ಅದರ ಕಾರ್ಯವೈಖರಿ ಬಗ್ಗೆ ಮನರಂಜನಾತ್ಮಕವಾಗಿ ವಿವರಣೆ ನೀಡುತ್ತಾ ಬಂದರು. ಅವರ ಪಾಠವನ್ನು ಕೇಳುವವರ ಸಂಖ್ಯೆ ಕೆಲವೇ ದಿನಗಳಲ್ಲಿ ಗಮನಾರ್ಹವಾಗಿ ಹೆಚ್ಚಾಯಿತು. ಸದ್ಯ ಏಪ್ರಿಲ್ 2021ರ ಪ್ರಕಾರ ಈ ಮಹಿಳೆ ತಿಂಗಳಿಗೆ ಕೋಟಿಗೂ ಅಧಿಕ ಹಣ ಗಳಿಸುತ್ತಿದ್ದಾಳೆ ಎಂದು ಹೇಳಲಾಗುತ್ತಿದೆ.
ಆಕೆಯ ಗೆಳೆಯ ಕೂಡ ತಮ್ಮನ್ನು ಹುಡುಕಿಕೊಂಡು ಬಂದ ಕೆಲಸ ಬಿಟ್ಟು ಆಕೆಗೆ ಸಹಾಯ ಮಾಡುತ್ತಿದ್ದು ಇಬ್ಬರೂ ಈಗ ಆನ್ಲೈನ್ ತರಗತಿಗಳನ್ನು ತೆಗೆದುಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೇ ಮೈಕ್ರೋಸಾಫ್ಟ್ ಎಕ್ಸೆಲ್ ಬಗ್ಗೆ ತಮ್ಮಲ್ಲಿರುವ ಐಡಿಯಾಗಳನ್ನು ಮತ್ತಷ್ಟು ಜನರಿಗೆ ತಿಳಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ: ಲಡಾಖ್ನಲ್ಲಿ ಚೀನಾ ಮೇಲೆ ಹದ್ದಿನ ಕಣ್ಣಿಡಲು ಇಸ್ರೇಲಿ ಹೆರಾನ್ ಡ್ರೋನ್‌ಗಳನ್ನು ಖರೀದಿಸಿದ ಭಾರತ