ETV Bharat / international

ಇರಾನ್ ಅಲ್ - ಖೈದಾಗೆ ಆಶ್ರಯ ನೀಡಿದೆ: ಮೈಕ್ ಪೊಂಪಿಯೊ ಗಂಭೀರ ಆರೋಪ!

author img

By

Published : Jan 13, 2021, 9:11 AM IST

ಅಲ್- ಖೈದಾಗೆ ಇರಾನ್ ಹೊಸ ಭೌಗೋಳಿಕ ಕೇಂದ್ರವಾಗಿದೆ. ಕಳೆದ ವರ್ಷ ಟೆಹ್ರಾನ್‌ನಲ್ಲಿ ಅಲ್-ಖೈದಾದ ಎರಡನೇ ಕಮಾಂಡ್ ಅಬು ಮುಹಮ್ಮದ್ ಅಲ್-ಮಸ್ರಿ ಹತ್ಯೆಯಾಗಿದ್ದಾನೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿದ್ದಾರೆ.

pompeo
pompeo

ವಾಷಿಂಗ್ಟನ್ (ಯು.ಎಸ್): ಮಧ್ಯಪ್ರಾಚ್ಯ ದೇಶವಾದ ಇರಾನ್ ಭಯೋತ್ಪಾದಕ ಸಂಘಟನೆಗೆ ಹೊಸ ನೆಲೆಯಾಗಿದೆ ಎಂದು ಪ್ರತಿಪಾದಿಸಿರುವ ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ, ಇರಾನ್ ಅಲ್-ಖೈದಾಗೆ ಆಶ್ರಯ ನೀಡಿದೆ ಎಂದು ಆರೋಪಿಸಿದ್ದಾರೆ.

ಕಳೆದ ವರ್ಷ ಟೆಹ್ರಾನ್‌ನಲ್ಲಿ ಅಲ್- ಖೈದಾದ ಎರಡನೇ ಕಮಾಂಡ್ ಅಬು ಮುಹಮ್ಮದ್ ಅಲ್-ಮಸ್ರಿ ಹತ್ಯೆಯಾಗಿದ್ದಾನೆ ಎಂದು ಪೊಂಪಿಯೊ ದೃಢಪಡಿಸಿದರು.

ಇಲ್ಲಿನ ನ್ಯಾಷನಲ್ ಪ್ರೆಸ್ ಕ್ಲಬ್‌ನಲ್ಲಿ ಮಾಡಿದ ಭಾಷಣದಲ್ಲಿ ಪೊಂಪಿಯೊ, ಅಲ್-ಖೈದಾಗೆ ಹೊಸ ನೆಲೆ ಇದ್ದು, ಅದು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಎಂದು ಹೇಳಿದರು. ಇರಾನ್ ನಿಜಕ್ಕೂ ಹೊಸ ಅಫ್ಘಾನಿಸ್ತಾವಾಗಿದ್ದು, ಅಲ್-ಖೈದಾದ ಪ್ರಮುಖ ಭೌಗೋಳಿಕ ಕೇಂದ್ರವಾಗಿದೆ ಎಂದರು.

ನಾವು ಈ ಹಿಂದೆ ಇರಾನ್ ಹಾಗೂ ಅಲ್-ಖೈದಾ ಸಂಬಂಧವನ್ನು ನಿರ್ಲಕ್ಷಿಸಿದ್ದೆವು. ಅದರೀಗ ನಾವದನ್ನು ಗಂಭಿರವಾಗಿ ಪರಿಗಣಿಸಿದ್ದೇವೆ ಎಂದು ಮೈಕೆಲ್ ಪೊಂಪಿಯೊ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.