ETV Bharat / international

ಮೈಕ್ರೋಸಾಫ್ಟ್‌ ಉದ್ಯೋಗಿಗಳಿಗೆ ಬಂಪರ್: ಪ್ರತಿ ಉದ್ಯೋಗಿಯ ಖಾತೆ ಸೇರಿದ ಬೋನಸ್ ಎಷ್ಟು ಗೊತ್ತೇ? - ಮೈಕ್ರೋಸಾಫ್ಟ್ ಕಂಪನಿ

ಕೊರೊನಾ ವೈರಸ್​ ಕಷ್ಟಕಾಲದಲ್ಲೂ ಮೈಕ್ರೋಸಾಫ್ಟ್​ ತನ್ನ ಸಿಬ್ಬಂದಿಗೆ ದಾಖಲೆಯ ಮಟ್ಟದಲ್ಲಿ ಬೋನಸ್​ ನೀಡಿದ್ದು, ಪ್ರತಿ ಉದ್ಯೋಗಿಗೆ 1.1 ಲಕ್ಷ ರೂ. ನೀಡಿದೆ.

Microsoft
Microsoft
author img

By

Published : Jul 9, 2021, 6:58 PM IST

ಸ್ಯಾನ್​ ಫ್ರಾನ್ಸಿಸ್ಕೋ: ಕೊರೊನಾ ವೈರಸ್​​ನಿಂದ ಲಕ್ಷಾಂತರ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದು, ನೂರಾರು ಕಂಪನಿಗಳು ಆರ್ಥಿಕ ಸಂಕಷ್ಟಕ್ಕೊಳಗಾಗಿವೆ. ಇದರ ಮಧ್ಯೆ ಅಮೆರಿಕದ ಮೈಕ್ರೋಸಾಫ್ಟ್​ ಕಂಪನಿ ತನ್ನ ಉದ್ಯೋಗಿಗಳಿಗೆ ಬಂಪರ್​​ ಗಿಫ್ಟ್​ ನೀಡಿದೆ.

ಅತ್ಯಂತ ಕಷ್ಟಕರವಾದ ಸಂದರ್ಭದಲ್ಲಿ ಎಲ್ಲ ಉದ್ಯೋಗಿಗಳು ಒಗ್ಗಟ್ಟಿನಿಂದ ಕೆಲಸ ಮಾಡಿದ್ದರ ಫಲವಾಗಿ ನಾವು ಈ ಆರ್ಥಿಕ ವರ್ಷದಲ್ಲಿ ಯಶಸ್ಸು ಸಾಧಿಸಿದ್ದೇವೆ. ಹೀಗಾಗಿ ಉಡುಗೊರೆ ನೀಡಲು ನಿರ್ಧರಿಸಲಾಗಿದೆ ಎಂದು ಕಂಪೆನಿ ಹೇಳಿದೆ.

ಕೊರೊನಾ ವೈರಸ್​ ಮಧ್ಯೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಉದ್ಯೋಗಿಗಳಿಗೆ ತಲಾ 1.1 ಲಕ್ಷ ರೂ. ಬೋನಸ್​ ನೀಡಲಾಗಿದೆ. ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಎಲ್ಲ ಉದ್ಯೋಗಿಗಳು ಒಗ್ಗಟ್ಟಿನಿಂದ ಕೆಲಸ ಮಾಡಿದ್ದಕ್ಕಾಗಿ ಈ ಬೋನಸ್​ ನೀಡುತ್ತಿರುವುದಾಗಿ ಕಂಪನಿ ಹೇಳಿಕೊಂಡಿದೆ. ಪ್ರಪಂಚದಾದ್ಯಂತ ಮೈಕ್ರೋಸಾಫ್ಟ್​ ಕಂಪನಿಯಲ್ಲಿ 175,508 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

Microsoft
ಸಾಂದರ್ಭಿಕ ಚಿತ್ರ

ಇದನ್ನೂ ಓದಿರಿ: ಕರ್ನಾಟಕದ 10 ಜಿಲ್ಲೆಗಳಲ್ಲಿ ಕೋವಿಡ್‌ ಹೆಚ್ಚಾಗಿದೆ: ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ

ಕಂಪನಿಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕಿಂತ ಕೆಳ​ ಮಟ್ಟದ ಸಿಬ್ಬಂದಿ ಹಾಗು ಪಾರ್ಟ್​ ಟೈಮ್​ ಕೆಲಸ ಮಾಡಿರುವ ಸಿಬ್ಬಂದಿಗೂ ಈ ಸೌಲಭ್ಯ ಸಿಗಲಿದೆ. ಸದ್ಯ ಪ್ರಪಂಚದ 21 ದೇಶಗಳಲ್ಲಿ ಮೈಕ್ರೋಸಾಫ್ಟ್​​ ಕೆಲಸ ಮಾಡ್ತಿದೆ. ಕೊರೊನಾ ವೈರಸ್ ಹಾವಳಿ ಸಂದರ್ಭದಲ್ಲೇ ಫೇಸ್​ಬುಕ್ ಸಂಸ್ಥೆಯೂ​ ತನ್ನ 45,000 ಸಿಬ್ಬಂದಿಗೆ ಬೋನಸ್​ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.