ವಾಷಿಂಗ್ಟನ್ : ಗ್ರಾಹಕ ಉತ್ಪನ್ನಗಳ ಮತ್ತು ವ್ಯಾಪಾರ ವಹಿವಾಟುಗಳ ಮಾರಾಟವನ್ನು ಸುಧಾರಿಸುವ ಮೂಲಕ ಕಳೆದ ದಿನಗಳಿಂದ ಹೆಚ್ಚಿನ ಲಾಭ ಗಳಿಸುತ್ತಿರುವುದಾಗಿ ಅಮೆರಿಕ ಮೂಲಕ ಜಾಗತಿಕ ತಂತ್ರಜ್ಞಾನ ದಿಗ್ಗಜ ಮೈಕ್ರೋಸಾಫ್ಟ್ ಸಂಸ್ಥೆ ತಿಳಿಸಿದೆ.
ಕಳೆದ ವರ್ಷ ಡಿಸೆಂಬರ್ 31 ರ ವರೆಗೆ ಶೇ 14 % ರಷ್ಟು ಆದಾಯದಲ್ಲಿ ಏರಿಕೆಯಾಗಿ 36.9 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ ಎಂದು ಕಂಪನಿ ತಿಳಿಸಿದೆ.
ಈ ಕುರಿತು ಮೈಕ್ರೋಸಾಫ್ಟ್ನ ಮುಖ್ಯ ಕಾರ್ಯ ನಿರ್ವಾಹಕ ಸತ್ಯ ನಾಡೆಲ್ಲಾ ಪ್ರತಿಕ್ರಿಯಿಸಿ, ನಾವು ಪ್ರತಿ ಬಾರಿಯೂ ಮೈಕ್ರೋಸಾಫ್ಟ್ ತಂತ್ರಜ್ಞಾನದಲ್ಲಿ ಹೊಸತನವನ್ನು ತರಲು ಪ್ರಯತ್ನಿಸುತ್ತೇವೆ. ಆದರ ಪ್ರತಿಫಲವೇ ಇಂದು ಆದಾಯ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.
ನಾವು ನಿರ್ಮಿಸುವ ತಂತ್ರಜ್ಞಾನವು ವಿಶ್ವಾಸಾರ್ಹ ಮತ್ತು ಹೆಚ್ಚು ಸುಸ್ಥಿರವಾಗಿರುವಂತೆ ನೋಡಿಕೊಂಡು ಬಂದಿದ್ದೇವೆ. ಹಾಗಾಗಿ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಮತ್ತು ಸರ್ಫೇಸ್ ಸಾಧನಗಳನ್ನು ಒಳಗೊಂಡಿರುವ ವೈಯಕ್ತಿಕ ಕಂಪ್ಯೂಟಿಂಗ್ ವಿಭಾಗದಲ್ಲಿ ಶೇ 2 ರಷ್ಟು ಹೆಚ್ಚಳ ಕಂಡುಬಂದಿದೆ. ಆಫೀಸ್ ಸಾಫ್ಟ್‌ವೇರ್ ಸೂಟ್ ಮತ್ತು ಲಿಂಕ್ಡ್‌ಇನ್ ಸಾಮಾಜಿಕ ನೆಟ್‌ವರ್ಕ್ ಸೇರಿದಂತೆ ಉತ್ಪಾದಕತೆ ಮತ್ತು ವ್ಯವಹಾರ ವಿಭಾಗದಲ್ಲಿ ಕೂಡ ಶೇ 17 ರಷ್ಟು ಆದಾಯ ಹೆಚ್ಚಿದೆ. ಜೊತೆಗೆ ಮೈಕ್ರೋಸಾಫ್ಟ್ ಷೇರುಗಳ ವ್ಯಾಪಾರವೂ ಸಹ ಹೆಚ್ಚಾಗುತ್ತಿದೆ ಎಂದರು.