ವಾಷಿಂಗ್ಟನ್: ಪ್ರಸಿದ್ಧ ಗಾಯಕ ದಿ. ಮೈಕೆಲ್ ಜಾಕ್ಸನ್ ಅವರ ಕಿರಿಯ ಮಗ ಬ್ಲಾಂಕೆಟ್ ಜಾಕ್ಸನ್ ಇತ್ತೀಚೆಗೆ ಹೊಸ ಮನೆಗೆ ಸ್ಥಳಾಂತ ಆಗಿದ್ದಾರೆ. ಈ ಮನೆ ಬರೋಬ್ಬರಿ 2 ಮಿಲಿಯನ್ ಡಾಲರ್ ಮೌಲ್ಯದ್ದಾಗಿದೆ.
ಕ್ಯಾಲಿಫೋರ್ನಿಯಾದ ಕ್ಯಾಲಬಾಸಸ್‌ನ ಐಷಾರಾಮಿ ಪ್ರದೇಶದಲ್ಲಿ ಜಾಕ್ಸನ್ ಪುತ್ರ ಈ ಹೊಸ ಮನೆ ಖರೀದಿಸಿದ್ದಾರೆ.
![jackson](https://etvbharatimages.akamaized.net/etvbharat/prod-images/6276693_gfea.jpg)
18 ವರ್ಷದ ಬ್ಲಾಂಕೆಟ್ ಜಾಕ್ಸನ್ನ ಹೊಸ ಮನೆ 6,382 ಚದರ ಅಡಿ ವಿಸ್ತೀರ್ಣದಲ್ಲಿದೆ. ಈ ಐಷಾರಾಮಿ ಬಂಗಲೆಯಲ್ಲಿ ಒಟ್ಟು ಆರು ಕೊಠಡಿಗಳಿವೆ.
ಈ ಬಂಗಲೆಯು ಈಜುಕೊಳ, ವಿಶಾಲವಾದ ಹಿತ್ತಲು ಹಾಗೂ ಹೊರಾಂಗಣ ಅಡುಗೆಮನೆಯನ್ನು ಹೊಂದಿದೆ. ಬ್ಲಾಂಕೆಟ್ ಜಾಕ್ಸನ್ ಅವರ ಹೊಸ ನಿವಾಸವು ಅಜ್ಜಿ ಕ್ಯಾಥರೀನ್ ಜಾಕ್ಸನ್ ಅವರ ಮನೆಯಿಂದ ಅನತಿ ದೂರದಲ್ಲಿದೆ.