ಮೆಕ್ಸಿಕೊ : ಮೆಕ್ಸಿಕನ್ ಸರ್ಕಾರದ ವೈದ್ಯಕೀಯ ಸುರಕ್ಷತಾ ಆಯೋಗವು ಫೈಜರ್-ಬಯೋಎನ್ಟೆಕ್ ಕೊರೊನಾ ವೈರಸ್ ಲಸಿಕೆಯ ತುರ್ತು ಬಳಕೆ ಅನುಮೋದಿಸುವ ಮೂಲಕ ಲಸಿಕೆ ಬಳಕೆಗೆ ಒಪ್ಪಿಗೆ ಸೂಚಿಸಿದ ನಾಲ್ಕನೇ ದೇಶವಾಗಿದೆ.
ಬ್ರಿಟನ್, ಕೆನಡಾ ಮತ್ತು ಬಹ್ರೇನ್ ಬಳಿಕ ಇದೀಗ ಮೆಕ್ಸಿಕೊ ಕೂಡ ಫೈಜರ್ ಲಸಿಕೆಗೆ ಅನುಮೋದನೆ ನೀಡಿದೆ ಎಂದು ಸಹಾಯಕ ಆರೋಗ್ಯ ಕಾರ್ಯದರ್ಶಿ ಹ್ಯೂಗೋ ಎಲ್ಪೆಜ್-ಗ್ಯಾಟೆಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಮೊಡೆರ್ನಾದಿಂದ ಹೆಚ್ಚುವರಿ 100 ಮಿಲಿಯನ್ ಕೋವಿಡ್ -19 ಲಸಿಕೆ ಖರೀದಿಸಲು ಮುಂದಾದ ಯುಎಸ್
ಮೆಕ್ಸಿಕೊ 250,000 ಡೋಸ್ ಲಸಿಕೆಯನ್ನು ಸ್ವೀಕರಿಸಲು ಸಿದ್ಧವಾಗಿದೆ. ಇದು 125,000 ಜನರಿಗೆ ಸಾಕಾಗಲಿದೆ. ಪ್ರತಿಯೊಬ್ಬ ವ್ಯಕ್ತಿಗೆ ಎರಡು ಶಾಟ್ಸ್ ಬೇಕಾಗುತ್ತವೆ. ಆರೋಗ್ಯ ಕಾರ್ಯಕರ್ತರು ಮೊದಲು ಶಾಟ್ಸ್ ಪಡೆಯುತ್ತಾರೆ ಎಂದು ಎಲ್ಪೆಜ್-ಗ್ಯಾಟೆಲ್ ಹೇಳಿದ್ದಾರೆ.
ಮುಂದಿನ ವಾರದಲ್ಲಿ ಲಸಿಕೆ ನೀಡುವುದನ್ನು ಪ್ರಾರಂಭವಾಗುವ ನಿರೀಕ್ಷೆಯಿದೆ. ಮೆಕ್ಸಿಕೊದಲ್ಲಿ ಒಟ್ಟು 1,229,379 ಕೊರನಾ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು 1,13,019 ಸೋಂಕಿತರು ಮೃತಪಟ್ಟಿದ್ದಾರೆ.