ETV Bharat / international

ಡೊನಾಲ್ಡ್ ಟ್ರಂಪ್​ಗೆ ಮತ್ತೊಂದು ಶಾಕ್​​: ವಿಚ್ಛೇದನ ನೀಡಲು ಮುಂದಾದ್ರಾ ಮೆಲಾನಿಯಾ ಟ್ರಂಪ್!? - ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ವಿಚ್ಛೇದನ ನೀಡಲು ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಸಿದ್ಧ

ಮೆಲಾನಿಯಾ ಡೊನಾಲ್ಡ್ ಟ್ರಂಪ್ ಅವರ ಮೂರನೇ ಹೆಂಡತಿಯಾಗಿದ್ದು, ಅವರಿಗೆ 14 ವರ್ಷದ ಒಬ್ಬ ಮಗ ಕೂಡ ಇದ್ದಾನೆ. ಚುನಾವಣೆಯಲ್ಲಿ ಸೋತ ಹಿನ್ನೆಲೆ ಇಬ್ಬರ ನಡುವೆ ಉಂಟಾಗಿರುವ ಆಂತರಿಕ ಭಿನ್ನಾಭಿಪ್ರಾಯದ ಮೇಲೆ ಈ ನಿರ್ಧಾರ ಮಾಡಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

Melania to seek divorce from Donald: British media
ವಿಚ್ಛೇದನ ನೀಡಲು ಮುಂದಾಗಿದ್ದಾರಂತೆ ಮೆಲಾನಿಯಾ ಟ್ರಂಪ್!?
author img

By

Published : Nov 10, 2020, 4:13 AM IST

Updated : Nov 10, 2020, 6:26 AM IST

ನ್ಯೂಯಾರ್ಕ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ವಿಚ್ಛೇದನ ನೀಡಲು ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಸಿದ್ಧರಾಗಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಮೆಲಾನಿಯಾ ತಮ್ಮ ಕೆಲಸದಿಂದ ಹೊರಬರಲು ಪ್ರತಿ ನಿಮಿಷವನ್ನು ಎಣಿಸುತ್ತಿದ್ದಾರೆ. ಆಕೆ ವಿಚ್ಛೇದನ ಪಡೆಯಬಹುದು ಎಂದು ಪತ್ರಿಕೆಯೊಂದು ಹೇಳಿದೆ. ಮೆಲಾನಿಯಾ ಏನಾದರೂ ಕಚೇರಿಯಲ್ಲಿದ್ದಾಗ ಹೊರಹೋಗಲು ಪ್ರಯತ್ನಿಸಿದರೆ, ಟ್ರಂಪ್​ ಆಕೆಯನ್ನು ಶಿಕ್ಷಿಸಲು ಏನಾದರೂ ಮಾರ್ಗವನ್ನು ಕಂಡುಕೊಳ್ಳುತ್ತಾರೆ ಎಂದು ಟ್ಯಾಬ್ಲಾಯ್ಡ್ ಪತ್ರಿಕೆ ಕೂಡ ವರದಿ ಮಾಡಿದೆ.

ಮೆಲಾನಿಯಾ ಡೊನಾಲ್ಡ್ ಟ್ರಂಪ್ ಅವರ ಮೂರನೇ ಹೆಂಡತಿಯಾಗಿದ್ದು, ಅವರಿಗೆ 14 ವರ್ಷದ ಒಬ್ಬ ಮಗ ಕೂಡ ಇದ್ದಾನೆ. ಟ್ರಂಪ್ ಅವರ ಮೊದಲ ಪತ್ನಿ ಇವಾನಾ ಮಾಡೆಲ್ ಆಗಿದ್ದವರು. ಅವರೊಂದಿಗೆ 15 ವರ್ಷಗಳ ಜೀವನ ನಡೆಸಿದ್ದರು ಡೊನಾಲ್ಡ್ ಟ್ರಂಪ್​, ಇವರಿಗೆ ಮೂವರು ಮಕ್ಕಳಿದ್ದಾರೆ.

ಹಾಗೆಯೇ ಎರಡನೇ ಪತ್ನಿ ಮಾರ್ಲಾ ಮ್ಯಾಪಲ್ಸ್ ನಟಿಯಾಗಿದ್ದು, ಆರು ವರ್ಷಗಳ ವೈವಾಹಿಕ ಜೀವನವನ್ನು ಟ್ರಂಪ್​ವೊಂದಿಗೆ ಕಳೆದಿದ್ದಾರೆ. ಇವರಿಗೆ ಓರ್ವ ಮಗಳಿದ್ದಾಳೆ.

Last Updated : Nov 10, 2020, 6:26 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.