ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಸಾಕು ನಾಯಿ ಮೇಜರ್ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವನಿಗೆ ಕಚ್ಚಿದ್ದು, ಇದೇ ತಿಂಗಳಲ್ಲಿ ಎರಡು ಬಾರಿ ಈ ರೀತಿಯ ಘಟನೆ ಸಂಭವಿಸಿದೆ ಎಂದು ಶ್ವೇತ ಭವನ ಮಾಹಿತಿ ನೀಡಿದೆ.
ಅಮೆರಿಕದ ಮೊದಲ ಪ್ರಜೆ ಜಿಲ್ ಬೈಡನ್ ಅವರ ಮಾಧ್ಯಮ ಕಾರ್ಯದರ್ಶಿ ಮೈಖೆಲ್ ಲಾರೋಸಾ ಈ ಬಗ್ಗೆ ಮಾಹಿತಿ ನೀಡಿದ್ದು, ಬೈಡನ್ ಅವರ ಸಾಕು ನಾಯಿ ಇನ್ನೂ ಹೊಸ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದೆ ಎಂದಿದ್ದಾರೆ.
ಮೇಜರ್ ಕಚ್ಚಿದ ನಂತರ ಗಾಯಾಳುವನ್ನು ಶ್ವೇತಭವನದ ಮೆಡಿಕಲ್ ಯುನಿಟ್ಗೆ ಸಾಗಿಸಲಾಗಿದೆ. ಯಾವುದೇ ಅಪಾಯವಿಲ್ಲದೇ ಆತ ಕೆಲಸಕ್ಕೆ ಹಿಂದಿರುಗಿದ್ದಾನೆ ಎಂದು ಲಾರೋಸಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: 'ಬಿಜೆಪಿ ವಿರುದ್ಧ ಒಂದಾಗಿ': ರಾಷ್ಟ್ರ ನಾಯಕರಿಗೆ ಮಮತಾ ಬ್ಯಾನರ್ಜಿ ಪತ್ರ
ಈ ಘಟನೆ ನಂತರ ಪ್ರತಿಕ್ರಿಯೆ ನೀಡಿರುವ ಬೈಡನ್, 'ಮೇಜರ್ ಒಳ್ಳೆಯ ನಾಯಿ ಎಂದು ಎಬಿಸಿ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಮೇಜರ್ ಯಾವ ರೀತಿ ಕಚ್ಚಿದೆ ಎಂದು ವಿವರಣೆ ನೀಡಿದ್ದಾರೆ.
ಮೇಜರ್ನನ್ನ ಶೇ.85ರಷ್ಟು ಮಂದಿ ಪ್ರೀತಿಸುತ್ತಾರೆ ಎಂದಿದ್ದಾರೆ. ಘಟನೆಯ ನಂತರ ಮೂರು ವರ್ಷದ ಸಾಕು ನಾಯಿ ಮೇಜರ್ ಮತ್ತು ಹನ್ನೆರಡು ವರ್ಷದ ಸಾಕುನಾಯಿ ಚಾಂಪ್‌ನ ಬೈಡನ್ ಅವರ ಡೆಲಾವೇರ್ನಲ್ಲಿರುವ ನಿವಾಸಕ್ಕೆ ರವಾನಿಸಲಾಗಿದೆ.
ಮಾರ್ಚ್ 8ರಂದು ಬೈಡನ್ ಅವರ ಜರ್ಮನ್ ಶಫರ್ಡ್ ತಳಿಯ ಸಾಕು ನಾಯಿ ಯುಎಸ್ ಸಿಕ್ರೆಟ್ ಸರ್ವೀಸ್ನ ಉದ್ಯೋಗಿಗೆ ಕಚ್ಚಿ ಗಾಯಗೊಳಿಸಿತ್ತು. ಇದಾದ ನಂತರ ಮತ್ತೊಂದು ಸಾಕು ನಾಯಿ ಮೇಜರ್ ವ್ಯಕ್ತಿಯೋರ್ವನಿಗೆ ಕಚ್ಚಿದೆ.