ETV Bharat / international

ಅಮೆರಿಕದಲ್ಲಿ ದೀಪಾವಳಿಗೆ ಸಾರ್ವತ್ರಿಕ ರಜೆ ಘೋಷಣೆಗೆ ಒತ್ತಾಯ; ಮಸೂದೆ ಮಂಡನೆ - ಅಮೆರಿಕದಲ್ಲಿ ದೀಪಾವಳಿಗೆ ಸಾರ್ವತ್ರಿಕ ರಜೆ

ಕತ್ತಲೆಯ ಅಂಧಕಾರವನ್ನು ಸರಿಸಿ ಜ್ಞಾನದ ಬೆಳಕಿನ ದೀಪಾವಳಿಯವನ್ನು ಇಂದು ನಾಡಿನಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ. ಜಗತ್ತಿನಾದ್ಯಂತ ಇರುವ ಭಾರತೀಯ ಈ ಹಬ್ಬವನ್ನು ಆಚರಿಸುತ್ತಾರೆ. ಆದರೆ ಹೆಚ್ಚು ಭಾರತೀಯರು ಇರುವ ಅಮೆರಿಕದಲ್ಲಿ ದೀಪಾವಳಿಗೆ ಸಾರ್ವಜನಿಕ ರಜೆ ನೀಡಬೇಕೆಂದು ಅಲ್ಲಿನ ಜನಪ್ರತಿನಿಧಿಗಳು ಪ್ರತಿಪಾದಿಸಿದ್ದು, ಇದಕ್ಕೆ ಮಸೂದೆನ್ನೂ ಮಂಡಿಸಿದ್ದಾರೆ.

legislation to make diwali a federal holiday in us
ಅಮೆರಿಕದಲ್ಲಿ ದೀಪಾವಳಿಗೆ ಸಾರ್ವತ್ರಿಕ ರಜೆ ಘೋಷಣೆಗೆ ಒತ್ತಾಯ; ಮಸೂದೆ ಮಂಡನೆ
author img

By

Published : Nov 4, 2021, 1:35 PM IST

ವಾಷಿಂಗ್ಟನ್‌(ಅಮೆರಿಕ): ಬೆಳಕಿನ ಹಬ್ಬ ದೀಪಾವಳಿಗೆ ದೇಶದಲ್ಲಿ ಸರ್ಕಾರಿ ರಜೆ ಇದೆ. ಆದರೆ ಅಮೆರಿಕದಲ್ಲೂ ಸಾರ್ವತ್ರಿಕ ರಜೆ ನೀಡಬೇಕು ಎಂದು ಅಲ್ಲಿನ ಜನಪ್ರತಿನಿಧಿಯಾಗಿರುವ ಕರೊಲಿನ್‌ ಬಿ.ಮಲೋನ್‌ ಅವರು ಒತ್ತಾಯಿಸಿದ್ದಾರೆ.

ಈ ಸಂಬಂಧ ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌ನಲ್ಲಿ ದೀಪಾವಳಿಯನ್ನು ಅಮೆರಿಕದಲ್ಲಿ ರಜಾದಿನವೆಂದು ಘೋಷಿಸುವ ಮಸೂದೆಯನ್ನು ಮಂಡಿಸಿದ್ದಾರೆ. ಕರೊಲಿನ್‌ ಬಿ.ಮಲೋನ್‌ ಅವರೇ ಈ ಮಾಹಿತಿ ಬಹಿರಂಗ ಪಡಿಸಿದ್ದು, ಸದನದಲ್ಲಿ ‘ದೀಪಾವಳಿ ದಿನದ ಕಾಯ್ದೆ’ ಮಸೂದೆ ಮಂಡನೆಯಾಗಿರುವುದು ಸಂತಸ ತಂದಿದೆ ಎಂದಿದ್ದಾರೆ. ಕತ್ತಲೆಯ ಮೇಲೆ ಬೆಳಕಿನ ಹಬ್ಬ ಮತ್ತು ಕೇಡಿನ ಮೇಲೆ ವಿಜಯವನ್ನು ಆಚರಿಸಲು ಇದು ವಿಶೇಷ ಸಂದರ್ಭವಾಗಿದೆ ಎಂದಿದ್ದಾರೆ.

ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ನಡೆಯುತ್ತಿರುವ ಹೋರಾಟದ ಸಂದರ್ಭದಲ್ಲಿ ಈ ಹಬ್ಬವು ಮಹತ್ವದ್ದಾಗಿದೆ ಎಂದು ಮಲೋನ್ ಹೇಳಿದರು. ದೀಪಾವಳಿಯನ್ನು ಅಧಿಕೃತವಾಗಿ ಫೆಡರಲ್ ಸಾರ್ವಜನಿಕ ರಜಾ ದಿನವೆಂದು ಘೋಷಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

  • I am so excited to introduce my Deepavali Day Act which would enshrine Diwali as a federal holiday. Let’s celebrate light over darkness, the triumph of good over evil, and the pursuit of knowledge over ignorance during this special time of year!https://t.co/NOHU1mCcWc

    — Carolyn B. Maloney (@RepMaloney) November 4, 2021 " class="align-text-top noRightClick twitterSection" data=" ">

ಭಾರತೀಯ ಮೂಲಕ ಅಮೆರಿಕನ್ ರಾಜಾ ಕೃಷ್ಣಮೂರ್ತಿ, ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಗ್ರೆಗೊರಿ ಮೀಕ್ಸ್ ಸೇರಿದಂತೆ ಯುಎಸ್ ಕಾಂಗ್ರೆಸ್‌ನ ಹಲವಾರು ಸದಸ್ಯರು ಈ ಮಸೂದೆಯನ್ನು ಬೆಂಬಲಿಸಿದ್ದಾರೆ. ಜಗತ್ತಿಗೆ ಮತ್ತು ಜನಜೀವನವನ್ನು ಬೆಳಗಿಸುವ ದೀಪಾವಳಿಯನ್ನು ಫೆಡರಲ್ ರಜಾ ದಿನವೆಂದು ಘೋಷಿಸುವುದು ಸೂಕ್ತ ಎಂದು ರಾಜಾ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.