ನ್ಯೂಯಾರ್ಕ್: ಅಫ್ಘಾನಿಸ್ತಾನದಿಂದ ಅಮೆರಿಕ ಸೇನೆಯನ್ನು ವಾಪಸ್ ಪಡೆದಿರುವ ಬಗ್ಗೆ ಯಾವುದೇ ಪ್ರತಿಕ್ರಿಯಯನ್ನು ನೀಡದ ಯುಎಸ್ ಉಪಾಧ್ಯಕ್ಷ ಕಮಲಾ ಹ್ಯಾರೀಸ್ ಅವರ ಜನಪ್ರಿಯತೆ ಕಡಿಮೆಯಾಗುತ್ತಿದೆ. ಅಫ್ಘಾನ್‌ನಿಂದ ಯುಎಸ್ ಸೇನೆಯನ್ನು ಹಿಂಪಡೆದ ಬಳಿಕ ನಡೆಸಿರುವ ಹೊಸ ಸಮೀಕ್ಷೆಯೊಂದರಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
ಕ್ಯಾಲಿಫೋರ್ನಿಯಾದ ಮಾಜಿ ಸೆನೆಟರ್ ಹಾಗೂ ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್, ಅಧ್ಯಕ್ಷರ ಕರ್ತವ್ಯಗಳನ್ನು ನಿರ್ವಹಿಸಲು ಅರ್ಹತೆ ಹೊಂದಿಲ್ಲ ಅಥವಾ ಎಲ್ಲ ಅರ್ಹತೆಗಳನ್ನು ಹೊಂದಿಲ್ಲ ಎಂದು ರಾಸ್ಮುಸೆನ್ ಸಮೀಕ್ಷೆಯ ವರದಿ ಹೇಳಿದೆ. ಶೇಕಡಾ 43 ರಷ್ಟು ಮಂದಿ ಕಮಲಾ ಅವರು ಅಧ್ಯಕ್ಷರ ಕರ್ತವ್ಯಗಳನ್ನು ನಿರ್ವಹಿಸಲು ಅರ್ಹತೆ ಹೊಂದಿದ್ದಾರೆ ಎಂದರೆ, ಶೇಕಡಾ 55 ರಷ್ಟು ಮಂದಿ ಅರ್ಹತೆ ಹೊಂದಿಲ್ಲ ಅಂತ ಮತ ಚಲಾಯಿಸಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಇದೇ ರೀತಿಯ ಸಮೀಕ್ಷೆಯನ್ನು ಏಪ್ರಿಲ್‌ನಲ್ಲಿ ನಡೆಸಿದ್ದಾಗ 49 ರಷ್ಟು ಮಂದಿ ಅವರ ಕರ್ತವ್ಯಕ್ಕೆ ಮೆಚ್ಚು ಸೂಚಿಸಿದ್ದರು. 51 ರಷ್ಟು ಮತದಾರರು ಕಮಲಾ ಅವರ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ನ.17 ರಿಂದ ಮೂರು ದಿನ ಬೆಂಗಳೂರು ಟೆಕ್ ಸಮಿಟ್: ಮೋದಿ, ಕಮಲಾ ಹ್ಯಾರಿಸ್ಗೆ ಆಹ್ವಾನ
ಪ್ರಸ್ತುತ ಬಿಡುಗಡೆಯಾಗಿರುವ ಸಮೀಕ್ಷೆ ಆಗಸ್ಟ್ 12 ರಿಂದ 15ರ ಅವಧಿಯಲ್ಲಿ ನಡೆಸಲಾಗಿದೆ. ಡೆಡ್ ಲೈನ್ ಮೂಲಕ ಆಫ್ಘಾನ್‌ನಿಂದ ಯುಎಸ್ ಸೇನೆಯನ್ನು ಹಿಂಪಡೆಯುವ ನಿರ್ಧಾರ ಕೈಗೊಂಡ ಬಳಿಕ ಈ ಸಮೀಕ್ಷೆ ನಡೆಸಲಾಗಿದೆ. ಕಮಲಾ ಹ್ಯಾರಿಸ್ ಕಳೆದ ವಾರದಿಂದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿಲ್ಲ. ಅಫ್ಘಾನಿಸ್ತಾನದ ಬಗ್ಗೆ ಗುಪ್ತಚರ ಮಾಹಿತಿಯನ್ನು ಪಡೆಯಲು ಜೋ ಬಿಡೆನ್ ಜೊತೆ ಚರ್ಚಿಸಲು ಸಿಇಒಗಳೊಂದಿಗಿನ ಸಭೆಯನ್ನು ಕಡಿತಗೊಳಿಸಿ ತೆರಳಿದ್ದರು. ಇದಾದ ಬಳಿಕ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.