ವಾಷಿಂಗ್ಟನ್ (ಯುಎಸ್): ಲಾಸ್ ಏಂಜಲೀಸ್ ಮೇಯರ್ ಎರಿಕ್ ಗಾರ್ಸೆಟ್ಟಿಯನ್ನು ಭಾರತದ ಹೊಸ ರಾಯಭಾರಿಯಾಗಿ ನೇಮಿಸಲು ಜೋ ಬೈಡನ್ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಎರಿಕ್ ಅವರು ಮೊದಲಿನಿಂದಲೂ ಬೈಡನ್ ಅವರ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅಷ್ಟೇ ಅಲ್ಲದೆ, ಬೈಡನ್ ಆಪ್ತರಲ್ಲಿ ಒಬ್ಬರಾಗಿದ್ದು, ಆಡಳಿತದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ.
ಎರಿಕ್ ನೇಮಕ ಚಿಂತನೆಗೆ ಕಾರಣಗಳು ಹಲವು:
- ಈ ಹಿಂದೆ ಕೊರೊನಾ ಸಂಕಷ್ಟವನ್ನು ಲಾಸ್ ಏಂಜಲೀಸ್ನಲ್ಲಿ ಉತ್ತಮವಾಗಿ ಇವರು ನಿಭಾಯಿಸಿದ್ದರು. ಅಂತೆಯೇ ಭಾರತಕ್ಕೆ ಅವರ ಸಲಹೆಗಳು ಅನುಕೂಲವಾಗಬಹುದು. ವೈದ್ಯಕೀಯ ಉಪಕರಣ ಪೂರೈಕೆಗೆ ಅವರ ಬೆಂಬಲ ಸಹಕಾರಿಯಾಗಹುದು.
- ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಮಹತ್ವಾಕಾಂಕ್ಷೆಗಳನ್ನು ಎದುರಿಸಲು ಭಾರತವು ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಭಾರತ-ಅಮೆರಿಕ ಸಂಬಂಧ ಸುಧಾರಣೆ ಮತ್ತು ದ್ವಿಪಕ್ಷೀಯ ಬೆಳವಣಿಗೆಗೆ ಸಹಕಾರಿಯಾಗಲಿದೆ.
- 1.4 ಶತಕೋಟಿ ಜನರಿರುವ ಭಾರತವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರಜಾಪ್ರಭುತ್ವವಾಗಿದೆ. ಇಲ್ಲಿನ ಭವಿಷ್ಯದ ರಾಜಕೀಯ ಮತ್ತು ಆರ್ಥಿಕ ಪಾಲನ್ನು ಪಡೆಯುವ ಉದ್ದೇಶದಿಂದ ಎರಿಕ್ರನ್ನು ಭಾರತದ ರಾಯಭಾರಿಯಾಗಿ ಸೂಚಿಸಲು ಚಿಂತನೆ ನಡೆಸಿರುವ ಸಾಧ್ಯತೆಗಳಿವೆ.
ಭಾರತದಲ್ಲಿ ಕೊರೊನಾ ಬಿಕ್ಕಟ್ಟು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇನ್ನೂ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.