ETV Bharat / international

ಆಫ್ಘನ್ ಸದ್ಯದ ಪರಿಸ್ಥಿತಿಗೆ ಅಲ್ಲಿನ ನಾಯಕರೇ ಕಾರಣ, ನಾವಲ್ಲ: ಜೋ ಬೈಡನ್ ಸಮರ್ಥನೆ - ಆಫ್ಘಾನಿಸ್ತಾನದಲ್ಲಿ ತಾಲಿಬಾನ್

ಅಮೆರಿಕ ಸೇನೆಯೊಂದಿಗೆ ಕೆಲಸ ಮಾಡಿದ ಅಮೆರಿಕದ ನಾಗರಿಕರು ಮತ್ತು ಆಫ್ಘನ್ ನಾಗರಿಕರನ್ನು ಕೆಲವೇ ದಿನಗಳಲ್ಲಿ ನಮ್ಮ ದೇಶಕ್ಕೆ ಕರೆಸಿಕೊಳ್ಳುವ ಕೆಲಸ ಮಾಡಲಾಗುತ್ತದೆ ಎಂದು ಬೈಡನ್ ತಿಳಿಸಿದ್ದಾರೆ.

Joe Biden blames Afghan leaders for Taliban takeover
ಆಫ್ಘನ್ ಸದ್ಯದ ಪರಿಸ್ಥಿತಿ ಅಲ್ಲಿನ ನಾಯಕರೇ ಕಾರಣ, ನಾವಲ್ಲ: ಜೋ ಬೈಡನ್ ಸಮರ್ಥನೆ
author img

By

Published : Aug 17, 2021, 3:53 AM IST

ವಾಷಿಂಗ್ಟನ್, ಅಮೆರಿಕ : ಅಫ್ಘಾನಿಸ್ತಾನದಿಂದ ಸೈನ್ಯ ಹಿಂತೆಗೆದುಕೊಂಡಿದ್ದನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತೊಮ್ಮೆ ಸಮರ್ಥನೆ ಮಾಡಿಕೊಂಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ಈಗಿನ ಪರಿಸ್ಥಿತಿಗೆ ಅಲ್ಲಿನ ನಾಯಕರೇ ಹೊಣೆ ಎಂದು ಈ ವೇಳೆ ಆರೋಪಿಸಿದ್ದಾರೆ.

ಅಫ್ಘಾನಿಸ್ತಾನ ತಾಲಿಬಾನ್ ವಶವಾದ ನಂತರ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜೋ ಬೈಡನ್ ಅಫ್ಘಾನಿಸ್ತಾನದಲ್ಲಿ ನಾವು ಇಂಥಹ ಪರಿಸ್ಥಿತಿಯನ್ನು ನಿರೀಕ್ಷೆ ಮಾಡಿದ್ದೆವು. ಆದರೆ ಆ ಪರಿಸ್ಥಿತಿ ಇಷ್ಟು ಬೇಗ ಬರುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಆಫ್ಘನ್ ನಾಯಕರೇ ಆ ದೇಶವನ್ನು ತಾಲಿಬಾನಿಗಳಿಗೆ ಬಿಟ್ಟುಕೊಟ್ಟು, ದೇಶವನ್ನು ತೊರೆದಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಅಫ್ಘಾನಿಸ್ತಾನದಿಂದ ಸೇನೆಯನ್ನು ಹಿಂಪಡೆದ ನಿರ್ಧಾರವನ್ನು ನಾನು ಸಮರ್ಥನೆ ಮಾಡಿಕೊಳ್ಳುತ್ತೇನೆ ಎಂದು ಬೈಡನ್ 20 ವರ್ಷಗಳ ನಂತರ ಅಮೆರಿಕ ಪಡೆಗಳನ್ನು ಹಿಂತೆಗೆದುಕೊಳ್ಳಲು ಕಠಿಣ ಕ್ರಮ ಕೈಗೊಂಡಿದ್ದೇನೆ ಎಂದು ಅಭಿಪ್ರಾಯಪಟ್ಟರು.

ಆಫ್ಘನ್​ಗೆ ಅಮೆರಿಕದ ಸೇನೆ ತೆರಳಿದ್ದು, ಆ ರಾಷ್ಟ್ರವನ್ನು ಕಟ್ಟುವ ಕೆಲಸಕ್ಕೆ ಅಲ್ಲ ಎಂದಿರುವ ಬೈಡನ್, ಸೇನೆ ಅಲ್ಲಿಂದ ವಾಪಸ್ಸಾದರೂ ಭಯೋತ್ಪಾದನೆಯ ವಿರುದ್ಧದ ಹೋರಾಟ ಮುಂದುವರೆಯಲಿದೆ ಎಂದಿದ್ದಾರೆ. ​

ಅಮೆರಿಕ ಸೇನೆಯೊಂದಿಗೆ ಕೆಲಸ ಮಾಡಿದ ಅಮೆರಿಕದ ನಾಗರಿಕರು ಮತ್ತು ಆಫ್ಘನ್ ನಾಗರಿಕರನ್ನು ಕೆಲವೇ ದಿನಗಳಲ್ಲಿ ನಮ್ಮ ದೇಶಕ್ಕೆ ಕರೆಸಿಕೊಳ್ಳುವ ಕೆಲಸ ಮಾಡಲಾಗುತ್ತದೆ ಎಂದಿರುವ ಬೈಡನ್ ಈ ವೇಳೆ ತಾಲಿಬಾನಿಗಳು ಅಮೆರಿಕನ್ ಪ್ರಜೆಗಳ ಮೇಲೆ ದಾಳಿ ಮಾಡಿದರೆ, ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಅಫ್ಘಾನಿಸ್ತಾನದಲ್ಲಿ ಜಾಗತಿಕ ಭಯೋತ್ಪಾದನೆ ಬೆದರಿಕೆ ನಿಗ್ರಹಿಸಲು ವಿಶ್ವದ ಎಲ್ಲ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡುವಂತೆ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಕರೆ ನೀಡಿದ್ದಾರೆ.

ಆಫ್ಘನ್ನರಿಗೆ ತಲೆಮಾರುಗಳ ಯುದ್ಧ ಮತ್ತು ಕಷ್ಟಗಳು ತಿಳಿದಿವೆ. ಅವರೆಲ್ಲರೂ ಸಂಪೂರ್ಣ ಬೆಂಬಲಕ್ಕೆ ಅರ್ಹರಾಗಿದ್ದಾರೆ. ಮುಂದಿನ ದಿನಗಳು ನಿರ್ಣಾಯಕವಾಗಿರಲಿದ್ದು, ಇಡೀ ಜಗತ್ತು ಅವರೊಂದಿಗೆ ನಿಲ್ಲಬೇಕಿದೆ ಎಂದು ಆಂಟೋನಿಯೊ ಗುಟೆರಸ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಆಫ್ಘನ್​ನಲ್ಲಿ ಜಾಗತಿಕ ಭಯೋತ್ಪಾದನೆ ನಿಗ್ರಹಕ್ಕೆ ಎಲ್ಲ ದೇಶಗಳು ಒಂದಾಗಬೇಕಿದೆ: ವಿಶ್ವಸಂಸ್ಥೆ ಕರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.