ವಾಷಿಂಗ್ಟನ್: ಪೆಗಾಸಸ್ ಬೇಹುಗಾರಿಕೆಯ ಕೇಂದ್ರ ಸ್ಥಾನ ಸೈಬರ್ ಸೆಕ್ಯೂರಿಟಿ ಕಂಪನಿ ಎಸ್ಎಸ್ಒ ಗ್ರೂಪ್ ತನ್ನ ಸಾಫ್ಟವೇರ್ ಬಳಕೆ ಮಾಡುತ್ತಿದ್ದ ಕೆಲ ಸರ್ಕಾರಿ ಕ್ಲೈಂಟ್ಗಳನ್ನ ತಾತ್ಕಾಲಿಕವಾಗಿ ನಿರ್ಬಂಧಿಸಿದೆ ಎಂದು ಅಮೆರಿಕ ಮೂಲದ ಮಾಧ್ಯಮವೊಂದು ವರದಿ ಮಾಡಿದೆ. ಸಾಫ್ಟವೇರ್ ಅನ್ನು ದುರುಪಯೋಗ ಪಡಿಸಿಕೊಳ್ಳುವುದು ಸೇರಿದಂತೆ ತನಿಖೆಗೆ ಆಗ್ರಹ ಕೇಳಿ ಬಂದ ಬೆನ್ನಲ್ಲೆ ಈ ಕ್ರಮಕ್ಕೆ ಮುಂದಾಗಲಾಗಿದೆ ಎಂದು ತಿಳಿದುಬಂದಿದೆ.
ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಪತ್ರಕರ್ತರು, ಮಾನವ ಹಕ್ಕುಗಳ ಹೋರಾಟಗಾರರು, ರಾಜಕಾರಣಿಗಳು ಮತ್ತು ಇತರರ ಮೇಲೆ ಕಣ್ಣಿಡಲು ಪೆಗಾಸಸ್ ಸಾಫ್ಟ್ವೇರ್ ಬಳಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ತನ್ನ ಕೆಲ ಬಳಕೆದಾರರ ವಿರುದ್ಧವೇ ತನಿಖೆ ಆದೇಶ ಕೇಳಿಬಂದಿದ್ದು, ಸಾಫ್ಟವೇರ್ ಅನ್ನು ಬೇಹುಗಾರಿಕೆಗೆ ಬಳಸಿರುವ ಆರೋಪ ಎದುರಿಸುತ್ತಿರುವ ಚಂದಾದಾರಿಕೆಯನ್ನ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ ಎಂದು ಸಂಸ್ಥೆಯು ಮಾಹಿತಿ ನೀಡಿದೆ ಎಂದು ವರದಿಯಾಗಿದೆ.
ಆದರೆ, ಬಳಕೆದಾರರ ಹೆಸರು ಬಹಿರಂಗಪಡಿಸಲು ಸಂಸ್ಥೆ ನಿರಾಕರಿಸಿದ್ದು, ಇಸ್ರೇಲಿ ರಕ್ಷಣಾ ನಿಯಮಗಳು ಬಳಕೆದಾರರ ಹೆಸರು ಬಹಿರಂಗಪಡಿಸದಂತೆ ನಿಯಮ ಪ್ರತಿಪಾದಿಸಲಾಗಿದೆ ಎಂದು ತಿಳಿಸಿದೆ. ಸಾಫ್ಟ್ವೇರ್ ಬಳಸುತ್ತಿರುವ ಪ್ರತಿ ಕ್ಲೈಂಟ್ ಜೊತೆಗೂ ಸಂಸ್ಥೆ ಸಂಪರ್ಕದಲ್ಲಿದ್ದು, ಪರಿಶೀಲನೆ ವೇಳೆ ಕೆಲ ಬಳಕೆದಾರರ ವಿರುದ್ಧ ತನಿಖೆ ಆರೋಪ ಇರುವುದರಿಂದ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಓದಿ: ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ರಾಯಭಾರಿಯಾಗಿ ಭಾರತೀಯ-ಅಮೆರಿಕನ್ ರಶಾದ್ ಹುಸೇನ್ ನೇಮಕ