ನ್ಯೂಯಾರ್ಕ್: ಜಾಗತಿಕ ವ್ಯಾಕ್ಸಿನೇಷನ್ ಅಭಿಯಾನದಲ್ಲಿ ಭಾರತ ಪ್ರಮುಖ ಪಾತ್ರ ವಹಿಸಬೇಕೆಂದು ಕರೆ ನೀಡಿದ್ದ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ಭಾರತದ ಲಸಿಕೆ ಉತ್ಪಾದನಾ ಸಾಮರ್ಥ್ಯವು 'ವಿಶ್ವದ ಅತ್ಯುತ್ತಮ ಆಸ್ತಿ' ಎಂದು ಬಣ್ಣಿಸಿದ್ದಾರೆ.
"ಭಾರತದಲ್ಲಿ ಭಾರತೀಯ ಅಭಿವೃದ್ಧಿ ಹೊಂದಿದ ಲಸಿಕೆಗಳ ಉತ್ಪಾದನೆ ಬಹಳ ಉನ್ನತ ಮಟ್ಟದಲ್ಲಿದೆ. ಹೀಗಾಗಿ ನಾವು ಭಾರತೀಯ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಭಾರತವು ಎಲ್ಲ ಸಾಧನಗಳನ್ನು ಹೊಂದಿದ್ದು, ಜಾಗತಿಕ ವ್ಯಾಕ್ಸಿನೇಷನ್ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸುವುದು ಅವಶ್ಯಕ. ಅಲ್ಲಿನ ಲಸಿಕೆ ಉತ್ಪಾದನಾ ಸಾಮರ್ಥ್ಯವು ಇಂದು ಜಗತ್ತು ಹೊಂದಿರುವ ಅತ್ಯುತ್ತಮ ಆಸ್ತಿಯಾಗಿದೆ. ಅದನ್ನು ಜಗತ್ತು ಸದ್ಬಳಕೆ ಮಾಡಿಕೊಳ್ಳಲಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಭಾರತವು ನೆರೆಯ ರಾಷ್ಟ್ರಗಳಿಗೆ 55 ಲಕ್ಷ ಡೋಸ್ ಕೊರೊನಾ ವೈರಸ್ ಲಸಿಕೆ ನೀಡಿದ ಹಿನ್ನೆಲೆ ಗುಟೆರೆಸ್ ಅವರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಇದೇ ವೇಳೆ, ಮಾತನಾಡಿದ ವಿದೇಶಾಂಗ ಸಚಿವಾಲಯದ (ಇಎಎಂ) ವಕ್ತಾರ ಅನುರಾಗ್ ಶ್ರೀವಾಸ್ತವ, ಓಮನ್, ಕ್ಯಾರಿಕೊಮ್ ದೇಶಗಳು, ನಿಕರಾಗುವಾ, ಪೆಸಿಫಿಕ್ ದ್ವೀಪ ರಾಷ್ಟ್ರಗಳಿಗೆ ಲಸಿಕೆ ಕಳುಹಿಸಲು ಭಾರತ ಯೋಜನೆ ರೂಪಿಸಿದೆ. ಜಿಎವಿಐ (ಗ್ಲೋಬಲ್ ಅಲೈಯನ್ಸ್ ಫಾರ್ ಲಸಿಕೆಗಳು ಮತ್ತು ರೋಗನಿರೋಧಕ) ಕೋವ್ಯಾಕ್ಸ್ ಸೌಲಭ್ಯದಡಿ ಆಫ್ರಿಕಾಕ್ಕೆ 1 ಕೋಟಿ ಅಥವಾ 10 ಮಿಲಿಯನ್ ಲಸಿಕೆ ಪ್ರಮಾಣವನ್ನು ಪೂರೈಸಲು ಯೋಚಿಸಲಾಗಿದೆ ಎಂದು ಶ್ರೀವಾಸ್ತವ ಹೇಳಿದ್ದಾರೆ.
ಅಲ್ಲದೆ, ಭಾರತದಿಂದ ಲಸಿಕೆ ಪಡೆಯಲು ಅನೇಕ ದೇಶಗಳಲ್ಲಿ ಆಸಕ್ತಿ ತೋರಿವೆ. ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತವು ಅಂತಾರಾಷ್ಟ್ರೀಯ ಸಹಕಾರವನ್ನು ಎದುರು ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಗೆ ಅನುಗುಣವಾಗಿ, ನೆರೆಹೊರೆಯವರ ಪ್ರತಿಕ್ರಿಯೆಗೆ ನಾವು ಕಾರ್ಯ ನಿರ್ವಹಿಸಿದ್ದೇವೆ ಎಂದು ಶ್ರೀವಾಸ್ತವ ಹೇಳಿದರು
.