ವಾಷಿಂಗ್ಟನ್ : ಅತ್ಯಾಧುನಿಕ S-400 ಮಿಸೈಲ್ ವ್ಯವಸ್ಥೆಯನ್ನು ರಷ್ಯಾದಿಂದ ಖರೀದಿಸಲು ಭಾರತ ಮುಂದಾಗಿದ್ದು, ಸದ್ಯ ಇದು ವಿಶ್ವದ ದೊಡ್ಡಣ್ಣನ ಕೆಂಗಣ್ಣಿಗೆ ಗುರಿಯಾಗಿದೆ. ಈ ಒಪ್ಪಂದಕ್ಕೆ ಟ್ರಂಪ್ ಆಡಳಿತ ಭಾರಿ ಆಕ್ಷೇಪ ವ್ಯಕ್ತಪಡಿಸಿದ್ದು, ಭಾರತದ ನಿರ್ಧಾರವು ಉಭಯ ದೇಶಗಳ ರಕ್ಷಣಾ ಸಂಬಂಧಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದೆ.
ರಷ್ಯಾ ದೇಶದ ಅತ್ಯಾಧುನಿಕ ತಂತ್ರಜ್ಞಾನವುಳ್ಳ, ಕ್ಷಿಪ್ರ ವೇಗದಲ್ಲಿ ವಾಯು ದಾಳಿ ಎದುರಿಸಿ ತಡೆಯುವ S-400 ಕ್ಷಿಪಣಿ ವ್ಯವಸ್ಥೆ ಖರೀದಿಸಲು ಭಾರತ ಮುಂದಾಗಿದೆ. ಈ ಹಿಂದೆ ಈ ಕ್ಷಿಪಣಿ ವ್ಯವಸ್ಥೆಯನ್ನು ಚೀನಾ ದೇಶ ತನ್ನದಾಗಿಸಿಕೊಂಡಿತ್ತು. ದೇಶದ ಬಾಹ್ಯ ಭದ್ರತೆಯ ಹಿನ್ನೆಲೆಯಲ್ಲಿ ಮೋದಿ ಸರ್ಕಾರ ಇಂಥದ್ದೊಂದು ಮಹತ್ವದ ನಿರ್ಧಾರವನ್ನು ಕೈಗೊಂಡಿತ್ತು. ಆದ್ರೆ, ಈ ಒಪ್ಪಂದಕ್ಕೆ ಅಮೆರಿಕದ ಟ್ರಂಪ್ ಆಡಳಿತ ಅಡ್ಡಗಾಲು ಹಾಕುತ್ತಿದ್ದು, ತೀವ್ರ ಸ್ಪರೂಪದ ಪರಿಣಾಮ ಎದುರಿಸಬೇಕಾದೀತು ಎಂದು ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಮಾತುಕತೆಯ ನಂತರ ಕಳೆದ ಅಕ್ಟೋಬರ್ ತಿಂಗಳಲ್ಲಿ 5 ಶತಕೋಟಿ ಡಾಲರ್ ಮೊತ್ತದ ಈ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.
ಈ ಕುರಿತಾಗಿ ರಾಜ್ಯದ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ಈ ವ್ಯಾಪಾರವನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ. ಯಾಕಂದರೆ ಅಂತಾರಾಷ್ಟ್ರೀಯ ಮಟ್ಟದ ರಕ್ಷಣಾ ನಿರ್ಬಂಧಗಳನ್ನು ನಾವು ಮೀರಿದಂತಾಗುತ್ತದೆ ಮತ್ತು ಅಮೇರಿಕಾದ ಜೊತೆ ನಿಕಟ ಸಂಬಂಧ ವಹಿಸುವಲ್ಲಿ ಅಡ್ಡಿಯಾಗಬಹುದು ಎಂದು ಹೇಳಿದರು.
ಅಮೇರಿಕಾ ಎದುರಾಳಿಗಳ ನಿರ್ಬಂಧ ಕಾಯ್ದೆಯ ಪ್ರಕಾರ (CAATSA) ಉಲ್ಲಂಘಿಸುವ ರಾಷ್ಟ್ರಗಳ ಮೇಲೆ ಕಠಿಣ ನಿರ್ಬಂಧ ಹೇರುವ ಕಾರ್ಯನಿರ್ವಾಹಕ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದು, ಒಂದು ವೇಳೆ ಭಾರತ ಎಸ್ - 400 ಡೀಲ್ ಮಾಡಿಕೊಂಡರೆ ಅಮೆರಿಕದ ನಿರ್ಬಂಧ ಎದುರಿಸುವ ಸಾಧ್ಯತೆ ಇದೆ.
ಒಂದು ವೇಳೆ ಭಾರತ ಅಮೇರಿಕಾದ ಮಾತನ್ನು ಉಲ್ಲಂಘಿಸಿ ಶಸ್ತ್ರಾಸ್ತ್ರ ಖರೀದಿ ಮಾಡಿದ್ದೇ ಆದರೆ ಮುಂದೆ ಸಂಯುಕ್ತ ರಾಷ್ಟ್ರದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಅಮೇರಿಕಾದ ವೈರಿಗಳ ಸಾಲಿನಲ್ಲಿ ಭಾರತವು ನಿಲ್ಲುವ ಸಂದರ್ಭ ಬರುತ್ತದೆ ಎಂದು ಟ್ರಂಪ್ ಆಡಳಿತ ಮಂಡಳಿ ಎಚ್ಚರಿಕೆಯನ್ನು ನೀಡಿದೆ.
ಅಮೇರಿಕಾ ಮತ್ತು ಟರ್ಕಿಯ ನಡುವಿನ ಸಂಬಂಧದ ಬಗ್ಗೆ ನಿಮಗೆ ಹೆಚ್ಚು ತಿಳಿದಿರಬಹುದು ಭಾರತದ ದೇಶದ ಬಗ್ಗೆ ನಮಗೆ ಕಾಳಜಿ ಇದೆ. ಆದರೆ ರಷ್ಯಾದೊಂದಿಗಿನ ಈ ವ್ಯಾಪಾರದಿಂದ ಅದು ಕೂಡ ಹಾಳಾಗಬಹುದು ಎಂದು ಟರ್ಕಿಯ ಉದಾಹರಣೆಯನ್ನಾಗಿ ನೀಡುವ ಮೂಲಕ ರಷ್ಯಾ ಮತ್ತು ಭಾರತದ ಈ ವ್ಯವಹಾರಕ್ಕೆ ಕಡಿವಾಣ ಹಾಕಿದ್ದಾರೆ.