ವಿಶ್ವಸಂಸ್ಥೆ: ಭಾರತದ ಅಭಿವೃದ್ಧಿ ಪಥವು ಜಾಗತಿಕ ಪಾಲುದಾರಿಕೆಯ ಶಕ್ತಿಯಾಗಿದ್ದು, ಮೂಲಭೂತ ಸೌಕರ್ಯ ಹಾಗೂ ತಂತ್ರಜ್ಞಾನದ ಸಹಯೋಗದಿಂದ ಅದನ್ನು ಸ್ಥಾಪಿಸುವ ಸಾಮರ್ಥ್ಯ ಹೊಂದಿದೆ ಎಂಬ ಭರವಸೆಯನ್ನು ವಿಶ್ವ ಸಂಸ್ಥೆಯಲ್ಲಿನ ಭಾರತದ ಕೌನ್ಸಿರಲ್ ಆಶಿಶ್ ಸಿನ್ಹಾ ವಿಶ್ವ ಸಮುದಾಯದ ಮುಂದಿಟ್ಟಿದ್ದಾರೆ.
ದೇಶದ ಬೆಳವಣಿಗೆಯನ್ನು ಗರಿಷ್ಠ ಸಂಖ್ಯೆಯ ಜನರನ್ನು ಬಡತನದಿಂದ ಹೊರಗಿಟ್ಟು ಮತ್ತು ಅವರ ಜೀವನ ಮಟ್ಟವನ್ನು ಸಮಗ್ರ ರೀತಿಯಲ್ಲಿ ಸುಧಾರಿಸಲು ಯಾಂತ್ರಿಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಭಾರತ ಬಯಸಿದೆ ಎಂದು ಹೇಳಿದ್ದಾರೆ.
ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕ ರಾಷ್ಟ್ರಗಳಲ್ಲಿ ಭಾರತ ಸಹ ತನ್ನ ಸ್ಥಾನ ಉಳಿಸಿಕೊಂಡಿದೆ. ಭಾರತದ ಆರ್ಥಿಕತೆಯು ಹಲವು ವರ್ಷಗಳಿಂದ ಶೇ. 7ರ ದರಲ್ಲಿ ಏರಿಕೆ ಕಾಣುತ್ತಿದೆ. ಭವಿಷ್ಯದ ಆರ್ಥಿಕತೆಯ ಮುನ್ಸೂಚನೆ ಸದೃಢವಾಗಿರಲಿದೆ ಎಂಬುದನ್ನು ಇದು ಸೂಚಿಸುತ್ತದೆ ಎಂದಿದ್ದಾರೆ.
ಕಳೆದ ವರ್ಷ ವಿಶ್ವ ಬ್ಯಾಂಕಿನ ಸುಲಭ ವ್ಯಾಪಾರ ಶ್ರೇಯಾಂಕದಲ್ಲಿ ಭಾರತ 23ನೇ ಸ್ಥಾನ ಪಡೆದಿದೆ. ವಿಶ್ವ ಬ್ಯಾಂಕ್ನ 'ಸುಲಭ ವ್ಯವಹಾರ' ವರದಿಯಲ್ಲಿ ಭಾರತದ ಶ್ರೇಯಾಂಕ ಏರುಗತಿಯಲ್ಲಿದೆ. ದಿವಾಳಿತನ, ತೆರಿಗೆ ಸರಳೀಕರಣ ಮತ್ತು ಇತರ ವಾಣಿಜ್ಯ ವಿಷಯಗಳಿಗೆ ಸಂಬಂಧಿಸಿದ ಸುಧಾರಣೆಗಳು 23ನೇ ಸ್ಥಾನದಿಂದ 77ನೇ ಸ್ಥಾನಕ್ಕೆ ಏರಿದೆ ಎಂದು ಸಿನ್ಹಾ ಹೇಳಿದ್ದಾರೆ.