ETV Bharat / international

'Love where you work..' ಟ್ವಿಟರ್‌ ಸಿಇಒ ಪರಾಗ್‌ ಅಗರ್ವಾಲ್‌ ಉದ್ಯೋಗಿಗಳಿಗೆ ಕಳುಹಿಸಿದ ಮೊದಲ ಇಮೇಲ್‌ ಹೀಗಿದೆ..

ಟ್ವಿಟರ್‌ ಸಂಸ್ಥೆಯ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನಿನ್ನೆಯಷ್ಟೇ ನೇಮಕವಾಗಿದ್ದ ಭಾರತೀಯ ಮೂಲದ ಪರಾಗ್‌ ಅಗರ್ವಾಲ್‌, ಸಂಸ್ಥೆಯ ಉದ್ಯೋಗಿಗಳಿಗೆ ಮೊದಲ ಇಮೇಲ್‌ ರವಾನಿಸಿದ್ದು, ಉಪಯುಕ್ತ ಮಾರ್ಗದರ್ಶನ ನೀಡಿದ್ದಾರೆ.

CEO Parag Agrawal's First Email To Twitter Employees
ಟ್ವಿಟ್ಟರ್‌ ನೂತನ ಸಿಇಒ ಪರಾಗ್‌ ಅಗರ್ವಾಲ್‌ ತಮ್ಮ ಉದ್ಯೋಗಿಗಳಿಗೆ ಮೊದಲ ಇ-ಮೇಲ್‌ ಪತ್ರ...
author img

By

Published : Nov 30, 2021, 4:53 PM IST

ನವದೆಹಲಿ: ಭಾರತೀಯ ಮೂಲದ ಪರಾಗ್‌ ಅಗರ್ವಾಲ್‌ ಅವರು ಟ್ವಿಟರ್‌ನ ನೂತನ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ತಮ್ಮ ಸಂಸ್ಥೆಯ ಉದ್ಯೋಗಿಗಳಿಗೆ ಇಮೇಲ್‌ ಕಳುಹಿಸಿದ್ದು, ಸ್ಫೂರ್ತಿದಾಯಕ ವಾಕ್ಯಗಳನ್ನು ಬರೆದಿದ್ದಾರೆ.

ಇಮೇಲ್‌ ಸಾರಾಂಶ:

'ಪ್ರಪಂಚದಲ್ಲಿ ಜನ, ಸಂಸ್ಕೃತಿ ಭಿನ್ನವಾಗಿದೆ. ನಾವು ಒಟ್ಟಾಗಿ ಏನು ಮಾಡಬಹುದು ಎಂಬುದಕ್ಕೆ ಯಾವುದೇ ಮಿತಿ ಇಲ್ಲ. ಮಹತ್ವಾಕಾಂಕ್ಷೆಯ ಗುರಿಗಳನ್ನು ಮುಟ್ಟಲು ನಾವು ಇತ್ತೀಚೆಗೆ ಹಲವು ಕಾರ್ಯತಂತ್ರಗಳನ್ನು ರೂಪಿಸಿದ್ದೇವೆ. ಆ ಕಾರ್ಯತಂತ್ರವು ತುಂಬಾ ಬಲಿಷ್ಠ ಹಾಗೂ ಸರಿಯಾಗಿರಬೇಕೆಂದು ನಾನು ನಂಬುತ್ತೇನೆ. ಆದರೆ ಇದನ್ನು ಕಾರ್ಯಗತಗೊಳಿಸಲು ಮತ್ತು ಒಳ್ಳೆಯ ಫಲಿತಾಂಶ ನೀಡಲು ನಾವು ಹೇಗೆ ಕೆಲಸ ಮಾಡುತ್ತೇವೆ ಎಂಬುದು ನಮ್ಮು ಮುಂದಿರುವ ನಿರ್ಣಾಯಕ ಸವಾಲು'.

'ನಮ್ಮ ಗ್ರಾಹಕರು, ಷೇರುದಾರರು ಹಾಗೂ ಪ್ರತಿಯೊಬ್ಬರಿಗೂ ನಾವು ಟ್ವಿಟರ್‌ ಅನ್ನು ಅತ್ಯುತ್ತಮವಾಗಿ ಮಾಡಿ ನೀಡುತ್ತಿದ್ದೇವೆ. ನೀವು ನಿಮ್ಮ ಕೆಲಸವನ್ನು ಪ್ರೀತಿಸಿ' ಎಂದು ಪರಾಗ್‌ ತಮ್ಮ ಉದ್ಯೋಗಿಗಳಿಗೆ ಹೇಳಿದ್ದಾರೆ.

ಪರಾಗ್‌ ಅಗರ್ವಾಲ್‌ ಹಿನ್ನೆಲೆ ಏನು?

ಮುಂಬೈ ಐಐಟಿಯ ಹಳೆ ವಿದ್ಯಾರ್ಥಿಯಾಗಿರುವ ಪರಾಗ್‌, ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ. ಬಳಿಕ ಉನ್ನತ ಶಿಕ್ಷಣಕ್ಕಾಗಿ ಅಮೆರಿಕೆಗೆ ತೆರಳಿ ಕ್ಯಾಲಿಫೋರ್ನಿಯಾದ ಸ್ಟ್ಯಾನ್‌ಫರ್ಡ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. ಇವರು ಮುಂದೆ ಟ್ವಿಟರ್‌ ಸಿಟಿಒ ಆಗಿ ನೇಮಕವಾಗಿದ್ದರು.

ಇದನ್ನೂ ಓದಿ: ಟ್ವಿಟರ್‌ ಸಿಇಒ ಸ್ಥಾನಕ್ಕೆ ಜಾಕ್​ ಡಾರ್ಸಿ ರಾಜೀನಾಮೆ: ಭಾರತೀಯ ಪರಾಗ್‌ ಅಗರ್ವಾಲ್‌ಗೆ ಮಹತ್ವದ ಹುದ್ದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.