ETV Bharat / international

ವಿಶ್ವಸಂಸ್ಥೆ​ ಪ್ರಧಾನಕಾರ್ಯದರ್ಶಿ ಹುದ್ದೆಗೆ ಉಮೇದುದಾರಿಕೆ ಘೋಷಿಸಿದ ಭಾರತೀಯ ಮೂಲದ ಉದ್ಯೋಗಿ

author img

By

Published : Feb 13, 2021, 1:32 PM IST

ಯುಎನ್‌ನಲ್ಲಿ ಭಾರತೀಯ ಮೂಲದ ಉದ್ಯೋಗಿಯಾಗಿರುವ 34 ವರ್ಷದ ಅರೋರಾ ಅಕಾಂಕ್ಷಾ ನಾನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ ಎಂದು ತಮ್ಮ ಉಮೇದುವಾರಿಕೆ ಘೋಷಿಸಿದ್ದಾರೆ.

Indian-origin employee at UN announces her candidacy for its Secretary
ಆಂಟೋನಿಯೋ ಗುಟೆರೆಸ್

ಯುನೈಟೆಡ್​​ ನೇಷನ್ಸ್​: ಯುಎನ್‌ನಲ್ಲಿ ಭಾರತೀಯ ಮೂಲದ ಉದ್ಯೋಗಿಯೊಬ್ಬರು ನಾನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ ಎಂದು ತಮ್ಮ ಉಮೇದುವಾರಿಕೆ ಘೋಷಿಸಿದ್ದಾರೆ.

ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ (ಯುಎನ್‌ಡಿಪಿ) ಲೆಕ್ಕಪರಿಶೋಧಕ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿರುವ ಅರೋರಾ ಅಕಾಂಕ್ಷಾ (34) ಅವರು ವಿಶ್ವದ ಉನ್ನತ ರಾಜತಾಂತ್ರಿಕ ಹುದ್ದೆಯಾದ ವಿಶ್ವಸಂಸ್ಥೆಯ ಪ್ರಧಾನಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಅವರು ವಿಡಿಯೋ ಸಹ ಬಿಡುಗಡೆ ಮಾಡಿದ್ದಾರೆ. ನಾನು ಬದಲಾವಣೆಯ ಪೀಳಿಗೆಯ ಭಾಗವಾಗಿದ್ದೇನೆ, ಅಲ್ಲಿ ನಾವು ಬದಲಾವಣೆಯ ಬಗ್ಗೆ ಮಾತನಾಡುವುದಿಲ್ಲ, ನಾವು ಬದಲಾವಣೆಗೆ ಕಾರಣವಾಗುತ್ತೇವೆ ಎಂದು ಅರೋರಾ ಹೇಳಿದ್ದಾರೆ. ಇತ್ತೀಚೆಗಷ್ಟೇ ಅವರು ಆನ್​ಲೈನ್​ನಲ್ಲಿ #AroraForSG ಎಂಬ ಅಭಿಯಾನ ಕೂಡ ಆರಂಭಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅರೋರಾ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಯುಎನ್ ಪ್ರಧಾನ ಕಚೇರಿಯೊಳಗೆ ಅಕಾಂಕ್ಷಾ ನಡೆದುಕೊಂಡು ಹೋಗುವುದನ್ನು ಕಾಣಬಹುದು. ಹಾಗೆಯೇ ಆಕೆ ಮೊದಲು ಬಂದ ಜನರು ಯುಎನ್ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಿರುವ ಅವರ ಧ್ವನಿಮುದ್ರಿಕೆ ವಿಡಿಯೋದಲ್ಲಿ ಕೇಳುತ್ತದೆ.

75 ವರ್ಷಗಳಿಂದ, ವಿಶ್ವಸಂಸ್ಥೆ ಜಗತ್ತಿಗೆ ನೀಡಿದ ಭರವಸೆಯನ್ನು ಈಡೇರಿಸಿಲ್ಲ - ನಿರಾಶ್ರಿತರನ್ನು ರಕ್ಷಿಸಲಾಗಿಲ್ಲ, ಮಾನವೀಯ ನೆರವು ಕಡಿಮೆ ಇದೆ, ಮತ್ತು ತಂತ್ರಜ್ಞಾನ ಮತ್ತು ಆಧುನಿಕತೆಯಲ್ಲಿ ಹಿಂದೆಬಿದ್ದಿದೆ. ಅದಕ್ಕಾಗಿಯೇ ನಾನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ. ನಾನು ಬೈ-ಸ್ಟ್ಯಾಂಡರ್ ಆಗಲು ನಿರಾಕರಿಸುತ್ತೇನೆ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.

ಭಾರತ ಮೂಲದ ಅರೋರಾ ಅಕಾಂಕ್ಷಾ ಭಾರತದ ಸಾಗರೋತ್ತರ ಪೌರತ್ವ ಮತ್ತು ಕೆನಡಾದ ಪಾಸ್‌ಪೋರ್ಟ್ ಹೊಂದಿದೆ ಎಂದು ನ್ಯೂಸ್​ ಚಾನೆಲ್​ವೊಂದು ವರದಿ ತಿಳಿಸಿದೆ. ಅವರ ವೆಬ್‌ಸೈಟ್ UNOW.org ನಲ್ಲಿನ ಅರೋರಾ ಆಕಾಂಕ್ಷಾ ಪ್ರೊಫೈಲ್ ಪ್ರಕಾರ, ಅಕಾಂಕ್ಷಾ ಟೊರೊಂಟೊದ ಯಾರ್ಕ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ ಹಾಗೂ ಸಾರ್ವಜನಿಕ ಆಡಳಿತ ವಿಷಯದಲ್ಲಿ ಪದವಿ ಪಡೆದಿದ್ದಾರೆ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆಡಳಿತದಲ್ಲಿ ಮಾಸ್ಟರ್ ಸಹ ಮುಗಿಸಿದ್ದಾರೆ.

ಸದ್ಯ ವಿಶ್ವಸಂಸ್ಥೆಯ ಪ್ರಧಾನಕಾರ್ಯದರ್ಶಿಯಾಗಿರುವ ಆಂಟೋನಿಯೋ ಗುಟೆರೆಸ್ ಅವರ ಮೊದಲ ಅವಧಿ ಈ ವರ್ಷದ ಡಿಸೆಂಬರ್ 31 ರಂದು ಕೊನೆಗೊಳ್ಳುತ್ತದೆ ಮತ್ತು ಮುಂದಿನ ಪ್ರಧಾನ ಕಾರ್ಯದರ್ಶಿ ಅವಧಿಯು ಜನವರಿ 1, 2022 ರಿಂದ ಪ್ರಾರಂಭವಾಗಲಿದೆ.

ಇದನ್ನೂ ಓದಿ:ಭಾರತ್ ಬಯೋಟೆಕ್’ಗೆ ಒಲಿದ ‘ಜೀನೋಮ್ ವ್ಯಾಲಿ ಟ್ಯಾಲೆಂಟ್’ ಪ್ರಶಸ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.