ಹ್ಯೂಸ್ಟನ್(ಅಮೆರಿಕ): ಮುಂದಿನ ದಿನಗಳಲ್ಲಿ ಕೈಗೊಳ್ಳುವ ಕಾರ್ಯಾಚರಣೆಗಳಿಗೆ 10 ಮಂದಿ ಹೊಸ ಗಗನಯಾತ್ರಿಗಳನ್ನು ನಾಸಾ ಘೋಷಿಸಿದ್ದು, ಈ 10 ಮಂದಿಯಲ್ಲಿ ಭಾರತ ಮೂಲದ ಪ್ರತಿಭೆಯೊಬ್ಬರು ಆಯ್ಕೆಯಾಗಿದ್ದಾರೆ.
ಕೆಲವು ದಿನಗಳ ಹಿಂದೆ ನಾಸಾದ ಭವಿಷ್ಯದ ಕಾರ್ಯಾಚರಣೆಗಳಲ್ಲಿ ಭಾಗವಹಿಸಲು ಅರ್ಹರಿಂದ ಅರ್ಜಿಗಳನ್ನು ಆಹ್ವಾನ ಮಾಡಲಾಗಿತ್ತು. ಸುಮಾರು 12 ಸಾವಿರಕ್ಕೂ ಹೆಚ್ಚು ಅರ್ಜಿಗಳು ನಾಸಾಗೆ ಬಂದಿದ್ದವು. ಇವುಗಳಲ್ಲಿ ಭಾರತೀಯ ಮೂಲದ ವ್ಯಕ್ತಿಯಾದ ಡಾ.ಅನಿಲ್ ಮೆನನ್ ಎಂಬುವವರು ಸೇರಿದಂತೆ 10 ಮಂದಿಯನ್ನು ನಾಸಾ ಆಯ್ಕೆ ಮಾಡಿದೆ.
ಈ ಗಗನಯಾತ್ರಿಗಳಿಗೆ ಎರಡು ವರ್ಷಗಳ ಆರಂಭಿಕ ಗಗನಯಾನ ತರಬೇತಿ ನೀಡಲಾಗುತ್ತದೆ. ಈ ತರಬೇತಿ ಜನವರಿ 2022ರಿಂದ ಆರಂಭವಾಗಲಿದ್ದು, ನಂತರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ನಾಸಾದ ಚಂದ್ರಯಾನ ಯೋಜನೆಯಾದ ಆರ್ಟೆಮಿಸ್ ಮಿಷನ್ ಮತ್ತು ಇತರ ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ ನಿಯೋಜನೆ ಮಾಡಲಾಗುತ್ತದೆ ಎಂದು ನಾಸಾ ತನ್ನ ವರದಿಯಲ್ಲಿ ತಿಳಿಸಿದೆ.
-
Our @NASA_Astronauts are the embodiment of big dreams. They may be headed for missions to the Moon and Mars.
— NASA (@NASA) December 6, 2021 " class="align-text-top noRightClick twitterSection" data="
What else could be in store? 🤔 Only time (and ingenuity) will tell! pic.twitter.com/UmXMFZkWu2
">Our @NASA_Astronauts are the embodiment of big dreams. They may be headed for missions to the Moon and Mars.
— NASA (@NASA) December 6, 2021
What else could be in store? 🤔 Only time (and ingenuity) will tell! pic.twitter.com/UmXMFZkWu2Our @NASA_Astronauts are the embodiment of big dreams. They may be headed for missions to the Moon and Mars.
— NASA (@NASA) December 6, 2021
What else could be in store? 🤔 Only time (and ingenuity) will tell! pic.twitter.com/UmXMFZkWu2
ಇನ್ನು ಭಾರತ ಮೂಲದ ಅನಿಲ್ ಮೆನನ್ 1976ರಲ್ಲಿ ಮಿನ್ನೆಸೋಟದಲ್ಲಿ ಜನಿಸಿದ್ದು, ಅಮೆರಿಕ ಏರ್ಫೋರ್ಸ್ನಲ್ಲಿ ಕೂಡಾ ಲೆಫ್ಟಿನೆಂಟ್ ಕರ್ನಲ್ ಆಗಿ ಕಾರ್ಯ ನಿರ್ವಹಿಸಿದ್ದರು. ಸ್ಪೇಸ್ ಎಕ್ಸ್ನ ಮೊದಲ ಫ್ಲೈಟ್ ಸರ್ಜನ್ ಆಗಿಯೂ ಇವರು ಆಯ್ಕೆಯಾಗಿ ಕಾರ್ಯನಿರ್ವಹಿಸಿದ್ದರು.
ಈ ವೇಳೆ ಸ್ಪೇಸ್ ಎಕ್ಸ್ ಮೊದಲಿಗೆ ಮಾನವನನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ಸಾಹಸ ಮಾಡಿತ್ತು. ಸ್ಪೇಸ್ ಎಕ್ಸ್ನಲ್ಲಿ ಲೀಡ್ ಸ್ಪೇಸ್ ಆಪರೇಷನ್ಸ್ ಇಂಜಿನಿಯರ್ ಆಗಿರುವ ಅನ್ನಾ ಅವರನ್ನು ವಿವಾಹವಾಗಿರುವ ಅನಿಲ್ ಮೆನನ್ ಈಗ ನಾಸಾದ ಗಗನಯಾತ್ರಿಯಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: NASA Seeks Ideas: ಚಂದ್ರನ ಮೇಲೆ ಪರಮಾಣು ವಿದ್ಯುತ್ ಸ್ಥಾವರ ಇಳಿಸಲು ಐಡಿಯಾ ಕೇಳಿದ ನಾಸಾ..