ETV Bharat / international

ಭಾರತ ಮೂಲದ ಗೌತಮ್ ರಾಘವನ್ ಶ್ವೇತಭವನದ ಉನ್ನತ ಹುದ್ದೆಗೆ ಆಯ್ಕೆ

ಅಮೆರಿಕ ಅಧ್ಯಕ್ಷರ ಉಪ ಸಹಾಯಕರಾಗಿ ಮತ್ತು ಶ್ವೇತಭವನದ ಅಧ್ಯಕ್ಷೀಯ ಸಿಬ್ಬಂದಿ ಕಚೇರಿಯ ಉಪ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಗೌತಮ್ ಶ್ರೀನಿವಾಸ್ ಅವರಿಗೆ ಬಡ್ತಿ ನೀಡಲಾಗಿದೆ.

Indian American Raghavan elevated to a new WH position
ಭಾರತ ಮೂಲದ ಗೌತಮ್ ರಾಘವನ್ ಶ್ವೇತಭವನದ ಉನ್ನತ ಹುದ್ದೆಗೆ ಆಯ್ಕೆ
author img

By

Published : Dec 11, 2021, 7:08 AM IST

ವಾಷಿಂಗ್ಟನ್(ಅಮೆರಿಕ): ಭಾರತ ಮೂಲದ ವ್ಯಕ್ತಿಗಳು ವಿಶ್ವದಾದ್ಯಂತ ತಮ್ಮ ಪಾರಮ್ಯ ಮೆರೆಯುತ್ತಿದ್ದಾರೆ. ಈಗ ಅಮೆರಿಕದ ಶ್ವೇತಭವನದ ಅಧ್ಯಕ್ಷರ ಸಿಬ್ಬಂದಿಯ ಮುಖ್ಯಸ್ಥರ ಸ್ಥಾನಕ್ಕೆ ಭಾರತೀಯ ಮೂಲದ ಅಮೆರಿಕನ್ ಗೌತಮ್ ರಾಘವನ್ ಆಯ್ಕೆಯಾಗಿದ್ದು, ಕೆಲವೇ ದಿನಗಳಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಪ್ರಸ್ತುತ ಕ್ಯಾಥಿ ರಸೆಲ್ ಎಂಬುವರು ಈ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಯುನಿಸೆಫ್‌ನ ಮುಂದಿನ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿ ಕ್ಯಾಥಿ ರಸೆಲ್ ಅನ್ನು ವಿಶ್ವಸಂಸ್ಥೆಯ ಮಹಾನಿರ್ದೇಶಕ ಆ್ಯಂಟೋನಿಯೋ ಗುಟೆರಸ್ ಆಯ್ಕೆ ಮಾಡಿದ್ದ ಕಾರಣದಿಂದ ಗೌತಮ್ ರಾಘವನ್ ಅವರನ್ನು ಈ ಹುದ್ದೆಗೆ ನಿಯೋಜಿಸಲಾಗಿದೆ. ಇದಕ್ಕೂ ಮೊದಲು ಗೌತಮ್ ರಾಘವನ್ ಶ್ವೇತಭವನದಲ್ಲೇ ಬೇರೊಂದು ಹುದ್ದೆಯಲ್ಲಿದ್ದು, ಈಗ ಅವರಿಗೆ ಬಡ್ತಿ ನೀಡಲಾಗಿದೆ.

ಕ್ಯಾಥಿ ಅವರ ನಾಯಕತ್ವದಲ್ಲಿ, ಅಧ್ಯಕ್ಷೀಯ ಸಿಬ್ಬಂದಿಯ ಶ್ವೇತಭವನದ ಕಚೇರಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಣೆ ಮಾಡಿದೆ ಎಂದು ಅಧ್ಯಕ್ಷ ಜೋ ಬೈಡನ್ ಶ್ಲಾಘಿಸಿದ್ದು, ಕ್ಯಾಥಿ ಜೊತೆಯಲ್ಲಿ ಕೆಲಸ ಮಾಡಿದ ಗೌತಮ್ ರಾಘವನ್ ಶ್ವೇತಭವನದ ಅಧ್ಯಕ್ಷರ ಸಿಬ್ಬಂದಿಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಗೌತಮ್ ರಾಘವನ್ ಭಾರತದಲ್ಲಿ ಜನಿಸಿ, ಪೋಷಕರೊಂದಿಗೆ ಅಮೆರಿಕದ ಸಿಯಾಟಲ್‌ಗೆ ತೆರಳಿ ಅಲ್ಲಿಯೇ ನೆಲೆಯೂರಿದರು. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಅವರು 'ವೆಸ್ಟ್ ವಿಂಗರ್ಸ್: ಸ್ಟೋರಿಸ್​ ಫ್ರಮ್ ದಿ ಡ್ರೀಮ್ ಚೇಸರ್ಸ್, ಚೇಂಜ್ ಮೇಕರ್ಸ್ ಮತ್ತು ಹೋಪ್ ಕ್ರಿಯೇಟರ್ಸ್ ಇನ್ಸೈಡ್ ದಿ ಒಬಾಮಾ ವೈಟ್ ಹೌಸ್' ಎಂಬ ಪುಸ್ತಕದ ಸಂಪಾದಕರಾಗಿದ್ದಾರೆ. ಈಗ ಅವರು ವಾಷಿಂಗ್ಟನ್​ನಲ್ಲಿ ತಮ್ಮ ಪತ್ನಿ ಮತ್ತು ಮಗಳೊಂದಿಗೆ ವಾಸ ಮಾಡುತ್ತಿದ್ದಾರೆ.

ಈ ಹಿಂದೆ ಗೌತಮ್ ರಾಘವನ್ ಅವರು ಅಮೆರಿಕ ಅಧ್ಯಕ್ಷರ ಉಪ ಸಹಾಯಕರಾಗಿ ಮತ್ತು ಶ್ವೇತಭವನದ ಅಧ್ಯಕ್ಷೀಯ ಸಿಬ್ಬಂದಿ ಕಚೇರಿಯ ಉಪ ನಿರ್ದೇಶಕರಾಗಿ ಜನವರಿ 20, 2020ರಿಂದ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಹೊಸ ಹುದ್ದೆಗೆ ಬಡ್ತಿ ಹೊಂದಲಿದ್ದು, ಕೆಲವೇ ದಿನಗಳಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ: ಹೆಲಿಕಾಪ್ಟರ್​ ಪತನ: ಶೌರ್ಯಚಕ್ರ ಪುರಸ್ಕೃತ ಕ್ಯಾ.​​ವರುಣ್​​ ಸಿಂಗ್​​​ ಆರೋಗ್ಯ ಸ್ಥಿತಿ ಸ್ಥಿರ, ಆದ್ರೂ ಗಂಭೀರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.