ವಾಷಿಂಗ್ಟನ್(ಅಮೆರಿಕ): ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಓರ್ವ ಇಂಡೋ-ಅಮೆರಿಕನ್ ಸೇರಿದಂತೆ ಇಬ್ಬರ ಮೇಲೆ ಅಮೆರಿಕ ನ್ಯಾಯಾಲಯ ದೋಷಾರೋಪಣೆ ಮಾಡಿದೆ ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ.
ವರ್ಜೀನಿಯಾದ ಲೊಯಿಸ್ ಬಾಯ್ಡ್ ಮತ್ತು ಇಂಡೋ ಅಮೆರಿಕನ್ ಮಾಣಿಕ್ ಮೆಹ್ತಾನಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಇವರು 20 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ತಿಳಿದು ಬಂದಿದೆ. ದೋಷಾರೋಪಣೆ ಪ್ರಕಾರ, ಬಾಯ್ಡ್ ಮತ್ತು ಮೆಹ್ತಾನಿ ಅವರು ವಿವಿಧ ಯೋಜನೆಗಳಲ್ಲಿ ವಂಚಿಸಿ ಪಡೆದು ಕ್ರಿಪ್ಟೋಕರೆನ್ಸಿಯಾಗಿ ಬದಲಾಯಿಸಿಕೊಂಡಿದ್ದಾರೆ. ವಂಚನೆಯ ಮೂಲಕ ಪಡೆದ ಆದಾಯದ ಸ್ವರೂಪವನ್ನು ಮರೆಮಾಚಲು ಅನೇಕ ಠೇವಣಿಗಳನ್ನು ಹೊಂದಿದ್ದಾರೆ. ಎಂದು ನ್ಯಾಯಾಂಗ ಇಲಾಖೆ ಹೇಳಿದೆ.
ಆಗಸ್ಟ್ 2020ರಲ್ಲಿ, ಬಾಯ್ಡ್ ಮತ್ತು ಮೆಹ್ತಾನಿ ಅವರು ಟೆಕ್ಸಾಸ್‌ನ ಲಾಂಗ್‌ವ್ಯೂಗೆ ಪ್ರಯಾಣಿಸಿ, 4,50,000 ಅಮೆರಿಕನ್ ಡಾಲರ್ ಅನ್ನು ಬಿಟ್ ಕಾಯಿನ್ಗೆ ವಿನಿಮಯ ಮಾಡಿಕೊಳ್ಳಲು ಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ ಹಣವನ್ನು ವಶಪಡಿಸಿಕೊಳ್ಳಲಾಗಿತ್ತು. ತನಿಖೆ ಮುಂದುವರೆದಂತೆ ಬಾಯ್ಡ್ ಮತ್ತು ಮೆಹ್ತಾನಿ ಅವರು 7,50,000 ಅಮೆರಿಕನ್ ಡಾಲರ್ಗಿಂತ ಹೆಚ್ಚಿನ ಕರೆನ್ಸಿಯನ್ನು ವಿನಿಮಯ ಮಾಡಿಕೊಂಡಿದ್ದಾರೆ ಎಂದು ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ.
ಇದನ್ನೂ ಓದಿ: ಹಠ ಬಿಡದ ಕಿಮ್.. ಮತ್ತೆರೆಡು ಕ್ಷಿಪಣಿ ಪರೀಕ್ಷೆ ನಡೆಸಿದ ಉತ್ತರ ಕೊರಿಯಾ