ವಾಷಿಂಗ್ಟನ್ (ಯುಎಸ್): ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಪಾಕಿಸ್ತಾನದ ಪ್ರಚೋದನೆಗಳಿಗೆ ಮಿಲಿಟರಿ ಬಲದಿಂದ ಪ್ರತಿಕ್ರಿಯಿಸುವ ಸಾಧ್ಯತೆ ಹೆಚ್ಚು ಎಂದು ಅಮೆರಿಕದ ಗುಪ್ತಚರ ಸಂಸ್ಥೆ ವರದಿಯಲ್ಲಿ ತಿಳಿಸಿದೆ.
ರಾಷ್ಟ್ರೀಯ ಗುಪ್ತಚರ ನಿರ್ದೇಶಕರ ಕಚೇರಿ (ಒಡಿಎನ್‌ಐ) ಯುಎಸ್ ಕಾಂಗ್ರೆಸ್‌ಗೆ ನೀಡಿದ ವಾರ್ಷಿಕ ಬೆದರಿಕೆ ಮೌಲ್ಯಮಾಪನ ವರದಿಯಲ್ಲಿ, ಭಾರತ ಮತ್ತು ಪಾಕಿಸ್ತಾನದ ನಡುವಿನ ಸಾಮಾನ್ಯ ಯುದ್ಧವು ಅಸಂಭವವಾಗಿದ್ದರೂ, ಇವೆರಡರ ನಡುವಿನ ಬಿಕ್ಕಟ್ಟುಗಳು ಹೆಚ್ಚು ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದೆ.
ಇದನ್ನೂ ಓದಿ: ಪರಮಾಣು ವಿಧ್ವಂಸಕ ಕ್ರಮಗಳು ಮಾತುಕತೆಗೆ ಅಸ್ತ್ರವಲ್ಲ: ಅಮೆರಿಕಕ್ಕೆ ಇರಾನ್ ಎಚ್ಚರಿಕೆ
ಭಾರತವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡ ನಂತರ ಮತ್ತು ಆಗಸ್ಟ್ 2019 ರಲ್ಲಿ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಬಿಗಡಾಯಿಸಿದೆ.
ಈ ವರದಿಯ ಪ್ರಕಾರ, ಅಫ್ಘಾನಿಸ್ತಾನ, ಇರಾಕ್ ಮತ್ತು ಸಿರಿಯಾದಲ್ಲಿನ ಹೋರಾಟವು ಯುಎಸ್ ಪಡೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಆದರೆ ಪರಮಾಣು ಶಸ್ತ್ರಸಜ್ಜಿತ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಪ್ರಪಂಚದ ಮೇಲೆ ಪರಿಣಾಮ ಬೀರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಕುಂಭಮೇಳವನ್ನು ನಿಜಾಮುದ್ದೀನ್ ಮರ್ಕಝ್ಗೆ ಹೋಲಿಸಬೇಡಿ: ಉತ್ತರಾಖಂಡ ಸಿಎಂ