ETV Bharat / international

ಜಗತ್ತಿನ ವೇಗದ ಆರ್ಥಿಕ ಶಕ್ತಿಯಾಗಿ ಭಾರತ:   ಐಎಂಎಫ್​​​​ನಿಂದಲೇ ಘೋಷಣೆ​

author img

By

Published : Mar 22, 2019, 7:33 PM IST

ಏಪ್ರಿಲ್​​ನಲ್ಲಿ ನಡೆಯಲಿರುವ ವಿಶ್ವ ಬ್ಯಾಂಕ್ ವಾರ್ಷಿಕ ಸ್ಪ್ರಿಂಗ್ ಸಭೆಯ ಅಂಗವಾಗಿ ಭಾರತದ ಆರ್ಥಿಕ ವ್ಯವಸ್ಥೆ ಕುರಿತು ಮಾಹಿತಿ ಒಳಗೊಂಡ ಸಮೀಕ್ಷಾ ವರದಿ ಬಿಡುಗಡೆ ಆಗಲಿದೆ.

India

ವಾಷಿಂಗ್ಟನ್: ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕ ವ್ಯವಸ್ಥೆಗಳಲ್ಲಿ ಭಾರತವೂ ಕೂಡ ಸೇರಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ತಿಳಿಸಿದೆ.

ಕಳೆದ ಐದು ವರ್ಷಗಳ ಅವಧಿಯ ಭಾರತದ ಆರ್ಥಿಕ ಪ್ರಗತಿ ಕುರಿತು ಪ್ರತಿಕ್ರಿಯಿಸಿದ ಐಎಂಎಫ್ ಸಂವಹನ ನಿರ್ದೇಶಕ ಗೆರಿ ರೈಸ್, 'ಕಳೆದ ಐದು ವರ್ಷಗಳಲ್ಲಿ ಭಾರತ ಶೇ 7 ರಷ್ಟು ಜಿಡಿಪಿ ಕಾಯ್ದುಕೊಂಡು ಬಂದಿದೆ. ಅಲ್ಲದೇ ಅನೇಕ ಮಹತ್ವದ ಸುಧಾರಣೆಯೂ ಆಗಿದೆ. ಸುಸ್ಥಿರ ಬೆಳವಣಿಗೆ ಸೇರಿದಂತೆ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ರೀತಿಯಲ್ಲಿ ಇನ್ನೂ ಸಾಕಷ್ಟು ಅವಕಾಶಗಳು ಸೃಷ್ಟಿ ಆಗಬೇಕಾಗಿದೆ' ಎಂದು ಹೇಳಿದ್ದಾರೆ.

'ಅರ್ಧ ದಶಕದ ಅವಧಿಯಲ್ಲಿ ಭಾರತ ಶೇ 7ರ ಸರಾಸರಿಯಲ್ಲಿ ಬೆಳವಣಿಗೆ ದರ ಕಾಯ್ದುಕೊಂಡಿದೆ. ಹೀಗಾಗಿ, ಇದು ವಿಶ್ವದಲ್ಲಿನ ವೇಗವಾಗಿ ಬೆಳೆವಣಿಗೆ ಆಗುತ್ತಿರುವ ದೊಡ್ಡ ಆರ್ಥಿಕ ವ್ಯವಸ್ಥೆಗಳ ರಾಷ್ಟ್ರಗಳ ಸಾಲಿನಲ್ಲಿ ಭಾರತ ನಿಲ್ಲಲು ನೆರವಾಗಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.

'ಏಪ್ರಿಲ್​​ನಲ್ಲಿ ನಡೆಯಲಿರುವ ವಿಶ್ವ ಬ್ಯಾಂಕ್ ವಾರ್ಷಿಕ ಸ್ಪ್ರಿಂಗ್ ಸಭೆ ನಿಮಿತ್ತ ಭಾರತದ ಆರ್ಥಿಕ ವ್ಯವಸ್ಥೆಯ ಕುರಿತು ಮಾಹಿತಿ ಒಳಗೊಂಡ ಸಮೀಕ್ಷಾ ವರದಿ ಬಿಡುಗಡೆ ಮಾಡಲಾಗುವುದು. ಇದನ್ನು ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಅವರ ನೇತೃತ್ವದಲ್ಲಿ ತಯಾರಿಸಲಾಗಿದೆ' ಎಂದರು.

'ಏಕೀಕರಣ, ಸಾಂಸ್ಥಿಕ ಸಂಸ್ಥೆಗಳ ಆಯವ್ಯಯ, ಮಾರುಕಟ್ಟೆಯ ರಚನಾತ್ಮಕ ಸುಧಾರಣೆಯ ಕ್ರಮ, ಕಾರ್ಮಿಕರು, ಭೂ ಸುಧಾರಣೆ, ಆರ್ಥಿಕತೆಯ ಬಲವರ್ಧನೆ, ವೇಗವಾಗಿ ಬೆಳವಣಿಗೆಯಾಗುವ ಸುಸ್ಥಿರ ವ್ಯವಹಾರದ ಪ್ರಸ್ತುತ ಪರಿಸ್ಥಿತಿ ಸೇರಿದಂತೆ ಹಲವು ಮಾಹಿತಿಗಳು ಈ ವರದಿ ಒಳಗೊಂಡಿರಲಿದೆ' ಎಂದು ರೈಸ್ ತಿಳಿಸಿದ್ದಾರೆ.

Intro:Body:

1 IMF.txt  

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.