ನ್ಯೂಯಾರ್ಕ್(ಯುಎಸ್ಎ): ಹವಾಮಾನ ಸಂರಕ್ಷಣೆ ಯೋಜನೆಗಳಿಗಾಗಿ CARICOM ರಾಷ್ಟ್ರಗಳಿಗೆ ಸಾಲವಾಗಿ ಭಾರತದಿಂದ ನೀಡುವ ಅನುದಾನವನ್ನು 150 ಮಿಲಿಯನ್ ಡಾಲರ್ಗೆ ವಿಸ್ತರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಇಲ್ಲಿ ನಡೆದ ಭಾರತ ಹಾಗೂ CARICOM ನಾಯಕರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕೆರೆಬಿಯನ್ ರಾಷ್ಟ್ರಗಳ ಸಮುದಾಯ ಅಭಿವೃದ್ಧಿ ಯೋಜನೆಗಳಿಗಾಗಿ 14 ಮಿಲಿಯನ್ ಡಾಲರ್ ಅನುದಾನವನ್ನು ಸಹ ಘೋಷಣೆ ಮಾಡಿದ್ದಾರೆ.
-
Ministry of External Affairs: PM Narendra Modi announced a USD 14 million grant for community development projects in the Caribbean Community and Common Market (CARICOM) & another USD 150 million Line of Credit for solar, renewable energy & climate change related projects. https://t.co/9fLyqVv3gt
— ANI (@ANI) September 25, 2019 " class="align-text-top noRightClick twitterSection" data="
">Ministry of External Affairs: PM Narendra Modi announced a USD 14 million grant for community development projects in the Caribbean Community and Common Market (CARICOM) & another USD 150 million Line of Credit for solar, renewable energy & climate change related projects. https://t.co/9fLyqVv3gt
— ANI (@ANI) September 25, 2019Ministry of External Affairs: PM Narendra Modi announced a USD 14 million grant for community development projects in the Caribbean Community and Common Market (CARICOM) & another USD 150 million Line of Credit for solar, renewable energy & climate change related projects. https://t.co/9fLyqVv3gt
— ANI (@ANI) September 25, 2019
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದ ಹೊರತಾಗಿ ನಡೆದ ಸಭೆಯಲ್ಲಿ 14 CARICOM ರಾಷ್ಟ್ರಗಳ ನಾಯಕರು ಭಾಗಿಯಾಗಿದ್ದರು. ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಸೆಂಟ್ ಲೂಸಿಯಾದ ಪ್ರಧಾನಿ ಹಾಗೂ CARICOMನ ಹಾಲಿ ಅಧ್ಯಕ್ಷ ಅಲ್ಲೆನ್ ಚಾಸ್ಟೆನೆಟ್ ಕೂಡಾ ಭಾಗಿಯಾಗಿದ್ದರು.
ರಾಜಕೀಯ ಹಾಗೂ ಸಾಂಸ್ಥಿಕ ಮಾತುಕತೆ ಪ್ರಕ್ರಿಯೆಗಳನ್ನು ಬಲಪಡಿಸುವುದು, ಆರ್ಥಿಕ ಸಹಕಾರದ ವೃದ್ಧಿ, ವ್ಯಾಪಾರ ಹಾಗೂ ಹೂಡಿಕೆ ಹೆಚ್ಚಿಸುವುದು, ಭಾರತ ಹಾಗೂ CARICOM ರಾಷ್ಟ್ರಗಳ ಜನರ ಸಂಬಂಧ ಇನ್ನಷ್ಟು ಗಟ್ಟಿಗೊಳಿಸುವ ಉದ್ದೇಶದೊಂದಿಗೆ ಈ ಸಭೆ ನಡೆಸಲಾಗಿದೆ.