ವಾಷಿಂಗ್ಟನ್(ಯುಎಸ್): ಚೀನಾ ಸೋಲಿಸಿ ಭಾರತ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ(ECOSOC) ಸದಸ್ಯನಾಗಿ ಹೊರಹೊಮ್ಮಿದೆ.
ಇದಕ್ಕೆ ಸಂಬಂಧಿಸಿದಂತೆ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್ ತಿರುಮೂರ್ತಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಭಾರತವು ಪ್ರತಿಷ್ಠಿತ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಸದಸ್ಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಇದೀಗ ಸಿಎಸ್ಡಬ್ಲ್ಯೂ ಸದಸ್ಯನಾಗಿ ಆಯ್ಕೆಯಾಗಿದೆ. ಇದು ನಮ್ಮೆಲ್ಲರ ಪ್ರಯತ್ನಕ್ಕೆ ಸಿಕ್ಕಿರುವ ಪ್ರಯತ್ನ ಎಂದಿದ್ದಾರೆ.
ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ ಉತ್ತೇಜಿಸುವ ನಮ್ಮ ಬದ್ಧತೆಗೆ ಅನುಮೋದನೆ ಸಿಕ್ಕಿದ್ದು, ಸದಸ್ಯ ರಾಷ್ಟ್ರಗಳ ಬೆಂಬಲಕ್ಕಾಗಿ ಧನ್ಯವಾದ ಎಂದಿದ್ದಾರೆ.
ಭಾರತ, ಅಫ್ಘಾನಿಸ್ತಾನ ಮತ್ತು ಚೀನಾ ಆಯೋಗ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು, 54 ಸದಸ್ಯರಲ್ಲಿ ಭಾರತ ಅಫ್ಘಾನಿಸ್ತಾನ ಮತದಾನದಲ್ಲಿ ಗೆದ್ದಿದ್ದರೂ, ಚೀನಾ ಮತ ಪಡೆಯುವಲ್ಲಿ ವಿಫಲವಾಯಿತು. ಇದೀಗ ಭಾರತ ಸದಸ್ಯನಾಗಿ 2021ರಿಂದ 2025ರವರೆಗೆ ಇರಲಿದೆ.