ನ್ಯೂಯಾರ್ಕ್ (ಅಮೆರಿಕ): ಯಾರೇ ಆಗಲಿ, ಎಲ್ಲಿಯೇ ಆಗಲಿ, ಯಾವುದೇ ಸಮಯದಲ್ಲಾಗಲಿ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಸಬಾರದು. ರಾಸಾಯನಿಕ ಶಸ್ತ್ರಾಸ್ತ್ರಗಳ ಬಳಕೆಯನ್ನು ನಾವು ವಿರೋಧಿಸುತ್ತೇವೆ, ಪ್ರತಿಯೊಬ್ಬರೂ ರಾಸಾಯನಿಕ ಶಸ್ತ್ರಾಸ್ತ್ರಗಳ ನಿಬಂಧನೆಗಳನ್ನು ಅನುಸರಿಸಬೇಕು ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಹೇಳಿದೆ.
ಸಿರಿಯಾ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಡೆಸಿದ ಸಂವಾದದಲ್ಲಿ ಭಾರತದ ಉಪ ಖಾಯಂ ಪ್ರತಿನಿಧಿ - ವಿಶ್ವಸಂಸ್ಥೆಯ ರಾಜಕೀಯ ಸಂಯೋಜಕ ಆರ್.ರವೀಂದ್ರ ಮಾತನಾಡಿದರು. ರಾಸಾಯನಿಕ ಶಸ್ತ್ರಾಸ್ತ್ರ ಸಮಾವೇಶವು (ಸಿಡಬ್ಲ್ಯೂಸಿ) ಒಂದು ವಿಶಿಷ್ಟವಾದ ತಾರತಮ್ಯ ರಹಿತ ನಿಶ್ಯಸ್ತ್ರೀಕರಣವಾಗಿದೆ. ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ (ಡಬ್ಲ್ಯುಎಂಡಿ) ಸಂಪೂರ್ಣ ನಿರ್ಮೂಲನೆಗೆ ಇದು ಒಂದು ಮಾದರಿ ಎಂದರು.
ಇದನ್ನೂ ಓದಿ: ಆಫ್ಘನ್‌ನಲ್ಲಿ ಮನ್ನಣೆಗಾಗಿ ಪ್ರಯತ್ನ: ತಾಲಿಬಾನ್ ವಿರುದ್ಧ ಜಗತ್ತು ಒಗ್ಗಟ್ಟಾಗಿದೆ ಎಂದ ಅಮೆರಿಕ
ಈ ಹಿಂದೆಯೂ ವಿಶ್ವಸಂಸ್ಥೆಯಲ್ಲಿ ರಾಸಾಯನಿಕ ಶಸ್ತ್ರಾಸ್ತ್ರಗಳ ಬಳಕೆ ವಿರುದ್ಧ ಭಾರತ ಧ್ವನಿ ಎತ್ತಿತ್ತು. ಭಯೋತ್ಪಾದಕ ಪಡೆಗಳು ಹಾಗೂ ವ್ಯಕ್ತಿಗಳು ಕೆಮಿಕಲ್ ವೆಪನ್ಸ್ ಪಡೆಯುವ ಬಗ್ಗೆ ಭಾರತ ಪದೇ ಪದೆ ಎಚ್ಚರಿಸುತ್ತಲೇ ಇರುತ್ತದೆ ಎಂದು ವಿಶ್ವಸಂಸ್ಥೆ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ಹೇಳಿದರು.