ETV Bharat / international

ಚೀನಾ ತೈವಾನ್​ ಗೆದ್ದುಕೊಂಡರೆ ಎಲ್ಲವೂ ಮುಗಿಯುತ್ತದೆ: ನಿಕ್ಕಿ ಹ್ಯಾಲೆ - china and taiwan

ಚೀನಾದ ಮೇಲೆ ಜಿ-7 ರಾಷ್ಟ್ರಗಳು ಮಾಡಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆ ಆರೋಪ ತುಂಬಾ ದುರ್ಬಲವಾಗಿದೆ. ಇದರ ಬದಲಿಗೆ ತೈವಾನ್ ಬಗ್ಗೆ ಗಮನಹರಿಸಲು ಕ್ರಮ ಕೈಗೊಳ್ಳಬೇಕಿತ್ತು ಎಂದು ಹ್ಯಾಲೆ ಹೇಳಿದ್ದಾರೆ.

If China takes Taiwan, its 'all over': Nikki Haley urges Washington to act 'strongly' against Beijing
ಚೀನಾ ತೈವಾನ್​ ಅನ್ನು ಗೆದ್ದುಕೊಂಡರೆ.. ಎಲ್ಲವೂ ಮುಗಿಯುತ್ತದೆ: ನಿಕ್ಕಿ ಹ್ಯಾಲೆ
author img

By

Published : Jun 17, 2021, 9:16 AM IST

ವಾಷಿಂಗ್ಟನ್, ಅಮೆರಿಕ: ಒಂದು ವೇಳೆ ಚೀನಾ ತನ್ನ ಪಕ್ಕದ ತೈವಾನ್ ಆಕ್ರಮಿಸಿಕೊಂಡರೆ ಬೇರೆಲ್ಲಾ ರಾಷ್ಟ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಷ್ಟು ಬಲಶಾಲಿಯಾಗುತ್ತದೆ ಎಂದು ರಿಪಬ್ಲಿಕನ್ ಪಕ್ಷದ ಭಾರತೀಯ ಮೂಲದ ಅಮೆರಿಕ ರಾಜಕಾರಣಿ ನಿಕ್ಕಿ ಹ್ಯಾಲೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಅಮೆರಿಕದ ಡಿಜಿಟಲ್ ಮಾಧ್ಯಮ ದ ಹಿಲ್ ವರದಿ ಮಾಡಿದೆ.

ಕ್ಯಾಪಿಟಲ್​ನಲ್ಲಿ ನಡೆದ ರಿಪಬ್ಲಿಕ್ ಸ್ಟಡಿ ಕಮಿಟಿ (ಆರ್​ಎಸ್​ಸಿ)ಯ ಸದಸ್ಯರ ಸಭೆಯಲ್ಲಿ ಬುಧವಾರ ಮಾತನಾಡಿದ ನಿಕ್ಕಿ ಹ್ಯಾಲೆ, ಚೀನಾದ ವಿರುದ್ಧ ಅಮೆರಿಕ ಕಠಿಣವಾಗಿರಬೇಕು ಎಂದು ಒತ್ತಾಯಿಸಿದ್ದಾರೆ. ತೈವಾನ್ ಚೀನಾ ಕೈವಶವಾದರೆ ಜಗತ್ತಿನ ಹಲವು ದೇಶಗಳು ಚೀನಾದ ಅಕ್ರಮಣಕ್ಕೆ ಒಳಗಾಗಲಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2022ರ ಚಳಿಗಾಲದ ಒಲಿಂಪಿಕ್ ಚೀನಾದಲ್ಲಿ ನಡೆಯಲಿದ್ದು, ಈ ಒಲಿಂಪಿಕ್ ಅಮೆರಿಕ ಬಹಿಷ್ಕರಿಸಬೇಕು. ಒಂದು ವೇಳೆ ನಾವು ಒಲಿಂಪಿಕ್ ಬಹಿಷ್ಕರಿಸಲು ಕರೆ ನೀಡದಿದರೆ, ಅದು ತಪ್ಪಾಗುತ್ತದೆ. ನನ್ನ ಮಾತನ್ನು ನೆನಪಿಡಿ, ತೈವಾನ್ ಚೀನಾದ ವಶಕ್ಕೆ ಬಂದರೆ ಅದು ಮುಂದಿನ ದಿನಗಳಲ್ಲಿ ಜಗತ್ತಿನ ಎಲ್ಲಿಗೆ ಬೇಕಾದರೂ ತೆರಳಿ, ಯಾವುದೇ ಭೂಪ್ರದೇಶವನ್ನು ಆಕ್ರಮಿಸಿಕೊಳ್ಳಲು ಸನ್ನದ್ಧವಾಗುತ್ತದೆ ಎಂದಿದ್ದಾರೆ.

ಚೀನಾ ತನ್ನನ್ನು ತಾನು ಜಗತ್ತಿಗೆ ಪರಿಚಯಿಸಿಕೊಳ್ಳುತ್ತಿದೆ. ಚಳಿಗಾಲದ ಒಲಿಂಪಿಕ್ ಆಯೋಜಿಸಿ ತಾನು ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದು ಎಂದು ಹೇಳಿಕೊಳ್ಳುತ್ತದೆ ಎಂದು ನಿಕ್ಕಿ ಹ್ಯಾಲೆ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಭಾರತದ ಸಿಖ್ ಯಾತ್ರಿಗಳಿಗೆ ಅನುಮತಿ ನಿರಾಕರಿಸಿದ ಪಾಕ್ ಸರ್ಕಾರ

ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಜಿ-7 ರಾಷ್ಟ್ರಗಳ ಜಂಟಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ನಿಕ್ಕಿ ಹ್ಯಾಲೆ, ಚೀನಾದ ಮೇಲೆ ಜಿ-7 ರಾಷ್ಟ್ರಗಳು ಮಾಡಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆ ಆರೋಪ ತುಂಬಾ ದುರ್ಬಲವಾಗಿದೆ. ಇದರ ಬದಲಿಗೆ ತೈವಾನ್ ಬಗ್ಗೆ ಗಮನಹರಿಸಲು ಕ್ರಮ ಕೈಗೊಳ್ಳಬೇಕಿತ್ತು ಎಂದು ಹ್ಯಾಲೆ ಹೇಳಿದ್ದಾರೆ.

ಚೀನಾ ಮತ್ತು ತೈವಾನ್

ಪೂರ್ವ ಏಷ್ಯಾದ ದ್ವೀಪ ರಾಷ್ಟ್ರವಾಗಿದ್ದು, ತೈವಾನ್​ ಮೇಲೆ ಪೂರ್ಣ ಪರಮಾಧಿಕಾರ ಹೊಂದಿರುವುದಾಗಿ ಹೇಳಿಕೊಳ್ಳುತ್ತಿದೆ. ಈ ರಾಷ್ಟ್ರದಲ್ಲಿ ಸುಮಾರು 24 ಮಿಲಿಯನ್ ಜನಸಂಖ್ಯೆಯಿದ್ದು, ಸುಮಾರು ಏಳು ದಶಕಗಳಿಂದ ಚೀನಾದಿಂದ ಪ್ರತ್ಯೇಕವಾಗಿ ತೈವಾನ್ ತನ್ನದೇ ಆಡಳಿತ ಸ್ಥಾಪಿಸಿಕೊಳ್ಳುತ್ತಿದೆ.

ಚೀನಾ ಇತ್ತೀಚೆಗೆ ನಡೆಸಿದ ಕೆಲವೊಂದು ಮಿಲಿಟರಿ ಕಾರ್ಯಾಚರಣೆಗಳ ಬಗ್ಗೆ ತೈವಾನ್ ಆಕ್ಷೇಪ ವ್ಯಕ್ತಪಡಿಸಿದ್ದು, ತೈವಾನ್ ತನ್ನ ಅಧೀನಕ್ಕೆ ತೆಗೆದುಕೊಳ್ಳಲು ಚೀನಾ ರಾಜಕೀಯ ಮತ್ತು ಮಿಲಿಟರಿ ಬೆದರಿಕೆ ಹಾಕುತ್ತಿದೆ ಎಂದು ಹೇಳಲಾಗುತ್ತಿದೆ.

ತನಗೆ ರಾಷ್ಟ್ರದ ಮಾನ್ಯತೆ ಬೇಕೆಂದು ತೈವಾನ್ ಶ್ರಮಿಸುತ್ತಿದ್ದು, ತೈವಾನ್​ಗೆ ಸ್ವಾತಂತ್ರ್ಯ ಬೇಕಾದರೆ ಯುದ್ಧ ಅನಿವಾರ್ಯ ಎಂದು ಚೀನಾ ಎಚ್ಚರಿಕೆ ನೀಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.