ನ್ಯೂಯಾರ್ಕ್: ಭಾರತದಲ್ಲಿ ಉತ್ಪಾದನೆಯಾದ ಕೋವಿಶೀಲ್ಡ್(Covishield) ವ್ಯಾಕ್ಸಿನ್ನ ಎರಡೂ ಡೋಸ್ಗಳನ್ನು ತೆಗೆದುಕೊಂಡಿರುವುದಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 76ನೇ ಅಧಿವೇಶನದ ಅಧ್ಯಕ್ಷ ಅಬ್ದುಲ್ಲಾ ಶಾಹೀದ್ ಹೇಳಿದ್ದಾರೆ.
ಶುಕ್ರವಾರ ತಮ್ಮ ಮೊದಲ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕೋವಿಶೀಲ್ಡ್ ವ್ಯಾಕ್ಸಿನ್ಗೆ ಎಷ್ಟು ರಾಷ್ಟ್ರಗಳು ಮಾನ್ಯತೆ ನೀಡಿವೆ ಎಂಬುದು ನನಗೆ ತಿಳಿದಿಲ್ಲ. ಆದರೆ ದೇಶದ ಬಹುಪಾಲು ರಾಷ್ಟ್ರಗಳು ಕೋವಿಶೀಲ್ಡ್ ವ್ಯಾಕ್ಸಿನ್ ಅನ್ನು ಪಡೆದಿವೆ ಎಂದಿದ್ದಾರೆ.
ಯಾವುದೇ ಕೋವಿಡ್ ವ್ಯಾಕ್ಸಿನ್ ಅನ್ನು ಉಪಯೋಗಿಸುವಾಗ ಅದು ಯಾವಾಗ ಮಾನ್ಯತೆ ಪಡೆದಿದೆ ಎಂಬ ಪ್ರಶ್ನೆ ಎದುರಾಗುತ್ತೆ. ಅದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ನೀಡಿದಾಗ ಮಾತ್ರ ಅದು ಮಾನ್ಯತೆಯೇ ಅಥವಾ ಬೇರೊಂದು ಸಂಸ್ಥೆ ಮಾನ್ಯತೆ ನೀಡಬೇಕೆ? ಎಂಬ ಪ್ರಶ್ನೆಗೆ 'ನಾನು ಕೋವಿಶೀಲ್ಡ್ ತೆಗೆದುಕೊಂಡು ಬದುಕಿದ್ದೇನೆ. ಇದು ವೈದ್ಯಕೀಯ ತಜ್ಞರಿಗೆ ಬಿಟ್ಟ ವಿಚಾರ' ಎಂದು ನಗುತ್ತಾ ಉತ್ತರ ನೀಡಿದ್ದಾರೆ.
ಭಾರತವು ಸುಮಾರು 100 ದೇಶಗಳಿಗೆ 66 ಮಿಲಿಯನ್ ಡೋಸ್ ಲಸಿಕೆಯನ್ನು ಸಹಾಯವಾಗಿ, ವ್ಯಾಪಾರದ ಉದ್ದೇಶದಿಂದ ಮತ್ತು ವಿಶ್ವಸಂಸ್ಥೆಯ ಕೋವ್ಯಾಕ್ಸ್ ಯೋಜನೆಯಡಿಯಲ್ಲಿ ರಪ್ತು ಮಾಡಿದೆ. ಜನವರಿ ತಿಂಗಳಲ್ಲಿ 1 ಲಕ್ಷ ಕೋವಿಡ್ ಲಸಿಕೆಯನ್ನು ಶಾಹೀದ್ ಅವರ ದೇಶವಾದ ಮಾಲ್ಡೀವ್ಸ್ಗೆ ಭಾರತ ವ್ಯಾಕ್ಸಿನ್ ಅನ್ನು ರವಾನಿಸಿತ್ತು.
ಒಟ್ಟಾರೆಯಾಗಿ, ಮಾಲ್ಡೀವ್ಸ್ ಈವರೆಗೆ ಭಾರತದಲ್ಲಿ ತಯಾರಿಸಲಾದ 3.12 ಲಕ್ಷ ಡೋಸ್ ಅನ್ನು ಅನುದಾನ, ವ್ಯಾಪಾರ ಮತ್ತು ಕೋವ್ಯಾಕ್ಸ್ ಮೂಲಕ ಪಡೆದಿದೆ. ಮೊದಲಿಗೆ ಬ್ರಿಟನ್ ಕೋವಿಶೀಲ್ಡ್ಗೆ ಮಾನ್ಯತೆ ನೀಡಲು ನಿರಾಕರಿಸಿತ್ತು. ಈಗ ಕೋವಿಶೀಲ್ಡ್ಗೆ ಅನುಮತಿ ನೀಡಿದೆ.
ಕೋವಿಶೀಲ್ಡ್ ಲಸಿಕೆಯನ್ನು ಬ್ರಿಟಿಷ್-ಸ್ವೀಡಿಷ್ ಫಾರ್ಮಾಸ್ಯುಟಿಕಲ್ ಕಂಪನಿಯಾದ ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದ್ದು, ಇದನ್ನು ಭಾರತದಲ್ಲಿ ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ತಯಾರಿಸುತ್ತಿದೆ.
ಇದನ್ನೂ ಓದಿ: ಗಾಂಧಿ ಜಯಂತಿಯಂದೇ ಗೋಡ್ಸೆ ಸ್ಮರಿಸಿದ ಹಿಂದೂ ಮಹಾಸಭಾ!