ETV Bharat / international

'ಐ ಕಾಂಟ್​ ಬ್ರೀದ್'... ಆಫ್ರಿಕನ್-ಅಮೆರಿಕನ್ನರ ಮೇಲಿನ ಶೋಷಣೆ ವಿರುದ್ಧ ಒಕ್ಕೊರಲಿನ ಧ್ವನಿ - ಮಿನ್ನಿಯಾಪೊಲಿಸ್‌ನ ಜನರ ಸಂಕಷ್ಟ

'ಐ ಕಾಂಟ್​ ಬ್ರೀದ್'(ನನಗೆ​ ಉಸಿರಾಡಲಾಗುತ್ತಿಲ್ಲ) ಎಂಬುದು ಆಫ್ರಿಕನ್-ಅಮೆರಿಕನ್ನರ ಘೋಷಣೆಯಾಗಿದೆ. ಇದು ಪೊಲೀಸ್ ಅಧಿಕಾರಿಗಳಿಂದ ಸಾವಿಗೀಡಾದ ಇಬ್ಬರು ಕಪ್ಪು ವರ್ಣಿಯರ ಸಾವಿಗೆ ಸಂಬಂಧಿಸಿದ್ದಾಗಿದೆ. 2014 ರಲ್ಲಿ ಎರಿಕ್ ಗಾರ್ನರ್ ಪೊಲೀಸರ ಅಟ್ಟಹಾಸಕ್ಕೆ ಬಲಿಯಾದರೆ 2020 ರಲ್ಲಿ ಜಾರ್ಜ್ ಫ್ಲಾಯ್ಡ್ ಸಾವನ್ನಪ್ಪಿದ್ದಾನೆ. ಈ ಎರಡೂ ಘಟನೆಗಳು ಯುಎಸ್​ ನಲ್ಲಿ ಪೊಲೀಸ್ ಕ್ರೌರ್ಯದ ವಿರುದ್ಧ ಪ್ರತಿಭಟನೆಗಳನ್ನು ಹುಟ್ಟುಹಾಕಿವೆ.

'I can't breathe' the voice of African americans
'ಐ ಕಾಂಟ್​ ಬ್ರೀದ್' ಆಫ್ರಿಕನ್-ಅಮೇರಿಕನ್ನರ ಮೇಲಿನ ಶೋಷಣೆ ವಿರುದ್ಧದ ಧ್ವನಿ
author img

By

Published : Jun 3, 2020, 3:31 PM IST

ನ್ಯೂಯಾರ್ಕ್(ಅಮೆರಿಕಾ): ಕಪ್ಪು ವರ್ಣಿಯ ಜಾರ್ಜ್​ ಫ್ಲಾಯ್ಡ್ ಸಾವನ್ನಪ್ಪಿದ ಕೆಲವೇ ಗಂಟೆಗಳ ನಂತರ, ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ ಮತ್ತು ಇತರೆ ಮೂವರು ಅಧಿಕಾರಿಗಳನ್ನು ವಜಾ ಮಾಡಲಾಗಿದೆ. ಈ ಕೃತ್ಯವು ಸಾರ್ವಜನಿಕರಲ್ಲಿ ಕೋಪದ ಜೊತೆಗೆ ಮಿನ್ನಿಯಾಪೊಲೀಸ್‌ನ ಜನರ ಸುರಕ್ಷತೆಯ ಕುರಿತು ಪ್ರಶ್ನೆಗಳು ಉದ್ಭವಿಸಿವೆ. ಅದಕ್ಕಿಂತಲೂ ಬಹುಮುಖ್ಯವಾಗಿ, ಇದು ಕಪ್ಪು ಅಮೆರಿಕನ್ನರ ಮೇಲಿನ ಜನಾಂಗೀಯ ದಾಳಿಯ ಕುರಿತ ಮೂಲಭೂತ ಪ್ರಶ್ನೆಯನ್ನು ಹುಟ್ಟುಹಾಕಿದೆ.

'ಐ ಕಾಂಟ್​ ಬ್ರೀದ್'(ನನಗೆ​ ಉಸಿರಾಡಲಾಗುತ್ತಿಲ್ಲ) ಎಂಬುದು ಆಫ್ರಿಕನ್-ಅಮೆರಿಕನ್ನರ ಘೋಷಣೆಯಾಗಿದ್ದು, ಪೊಲೀಸ್ ಅಧಿಕಾರಿಗಳಿಂದ ಸಾವಿಗೀಡಾದ ಇಬ್ಬರು ಕಪ್ಪು ವರ್ಣಿಯ ಪುರುಷರ ಸಾವಿಗೆ ಸಂಬಂಧಿಸಿದ್ದಾಗಿದೆ. 2014 ರಲ್ಲಿ ಎರಿಕ್ ಗಾರ್ನರ್ ಪೊಲೀಸರ ಅಟ್ಟಹಾಸಕ್ಕೆ ಬಲಿಯಾದರೆ, 2020 ರಲ್ಲಿ ಜಾರ್ಜ್ ಫ್ಲಾಯ್ಡ್ ಸಾವನ್ನಪ್ಪಿದ್ದಾರೆ. ಈ ಎರಡೂ ಘಟನೆಗಳು ಯುಎಸ್​ ನಲ್ಲಿ ಪೊಲೀಸ್ ಕ್ರೌರ್ಯದ ವಿರುದ್ಧ ಪ್ರತಿಭಟನೆಗಳಿಗೆ ದಾರಿ ಮಾಡಿಕೊಟ್ಟಿವೆ.

'I can't breathe' the voice of African americans
'ಐ ಕಾಂಟ್​ ಬ್ರೀದ್' ಆಫ್ರಿಕನ್-ಅಮೇರಿಕನ್ನರ ಮೇಲಿನ ಶೋಷಣೆ ವಿರುದ್ಧದ ಧ್ವನಿ

ಫ್ಲಾಯ್ಡ್ ಹಿಂಸಾತ್ಮಕ ಸಾವಿನ ಹಿನ್ನೆಲೆ ನಡೆಯುತ್ತಿರುವ ರಾಷ್ಟ್ರವ್ಯಾಪಿ ಅಶಾಂತಿಯ ಮಧ್ಯೆ, ವನೆಸ್ಸಾ ಬ್ರ್ಯಾಂಟ್, ತನ್ನ ಪತಿ ಕೋಬ್ "ಐ ಕ್ಯಾಂಟ್ ಬ್ರೀದ್​" ಎಂದು ಬರೆದಿರುವ ಕಪ್ಪು ಟಿ-ಶರ್ಟ್ ಧರಿಸಿರುವ ಚಿತ್ರವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಮೇ.2020ರಲ್ಲಿ ಮಿನ್ನಿಯಾಪೊಲೀಸ್ ನ ಪೊಲೀಸ್ ಇಲಾಖೆ ಅಧಿಕಾರಿ ಡೆರೆಕ್ ಚೌವಿನ್, ಜಾರ್ಜ್ ಫ್ಲಾಯ್ಡ್‌ನನ್ನು 8 ನಿಮಿಷ 46 ಸೆಕೆಂಡುಗಳ ಕಾಲ ಕುತ್ತಿಗೆಯ ಹಿಂಭಾಗ ನೆಲಕ್ಕೂರಿಸಿ ಕೊಂದುಹಾಕಿದ ವಿಡಿಯೋ ವೈರಲ್​ ಆಗಿದೆ. ಅದರಲ್ಲಿ ಫ್ಲಾಯ್ಡ್ "ನನಗೆ ಉಸಿರಾಡಲು ಆಗುತ್ತಿಲ್ಲ" ಎಂದು ಅನೇಕ ಬಾರಿ ಹೇಳುವುದು ಕಂಡುಬರುತ್ತದೆ.

ಫ್ಲಾಯ್ಡ್ ಉಸಿರಾಡಲಾಗುತ್ತಿಲ್ಲ ಎಂದು ಪರಿಪರಿಯಾಗಿ ಬೇಡಿಕೊಂಡರೂ ಆ ಅಧಿಕಾರಿಯು ಫ್ಲಾಯ್ಡ್‌ನನ್ನು ಉಸಿರಾಡದಂತೆ ತಡೆದಿದ್ದು ಕೂಡ ವಿಡಿಯೋದಲ್ಲಿ ರೆಕಾರ್ಡ್​ ಆಗಿತ್ತು. ಅಂದಿನಿಂದ "ನನಗೆ ಉಸಿರಾಡಲು ಆಗುತ್ತಿಲ್ಲ" ಎಂಬುದು ರಾಷ್ಟ್ರವ್ಯಾಪಿ ಪ್ರತಿಭಟನೆಯ ಕೂಗಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.