ನ್ಯೂಯಾರ್ಕ್: ಭಾರತದ ನಿವಾಸಿ ದಿನೇಶ್ವರ್ (33) ಮತ್ತು ಡೊಜಾಯ್ (27) ಜೊತೆ ಮದುವೆಯಾಗಿತ್ತು. ಇವರಿಬ್ಬರು ನ್ಯೂಯಾರ್ಕ್ ನಗರದ ಕ್ವಿನ್ಸ್ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದಾರೆ. ಬಾರ್ ಟೆಂಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಡೊಜಾಯ್ಗೆ ಬಾಲಿವುಡ್ ನಟ ಹೃತಿಕ್ ರೋಷನ್ ಅಂದ್ರೆ ಪಂಚ ಪ್ರಾಣ. ಯಾವಾಗ್ಲೂ ಹೃತಿಕ್ ಸಿನಿಮಾ, ಹಾಡುಗಳು ನೋಡುತ್ತಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯೆ ಅನೇಕ ಬಾರಿ ಕಲಹಗಳು ನಡೆಯುತ್ತಿದ್ದವು ಎಂಬ ವಿಷಯವನ್ನ ಡೊಜಾಯ್ ಸ್ನೇಹಿತೆಯರು ಮಾಧ್ಯಮಕ್ಕೆ ತಿಳಿಸಿದ್ದಾರೆ.
2019 ಆಗಸ್ಟ್ನಲ್ಲಿ ಹೃತಿಕ್ ವಿಷಯದಲ್ಲಿ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ಈ ವೇಳೆ ದಿನೇಶ್ವರ್ ಡೊಜಾಯ್ಗೆ ಚಿತ್ರಹಿಂಸೆ ಕೊಟ್ಟು ಹಲ್ಲೆ ಮಾಡಿದ್ದಾನೆ. ಆಕೆಯನ್ನು ತನ್ನ ಕಂಟ್ರೋಲ್ಗೆ ತರಲು ಪ್ರಯತ್ನಿಸಿದ್ದಾನೆ. ಆದ್ರೆ ಡೊಜಾಯ್ ಗಂಡನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆಗಸ್ಟ್ 21ರಂದು ಪೊಲೀಸರು ದಿನೇಶ್ವರ್ನನ್ನು ಬಂಧಿಸಿದ್ದರು. ನಾಲ್ಕು ದಿನಗಳ ಹಿಂದೆ ಅಂದ್ರೆ ಬುಧವಾರ ನ್ಯಾಯಾಲಯದಲ್ಲಿ ತನ್ನ ತಪ್ಪನ್ನು ಸಹ ಒಪ್ಪಿಕೊಂಡಿದ್ದ. ಬಳಿಕ ಗಂಡ ಜೈಲಿನಿಂದ ಕೂಡಾ ಹೊರ ಬಂದಿದ್ದ.
ಶುಕ್ರವಾರ ಜೈಲಿನಿಂದ ಹೊರ ಬಂದ ದಿನೇಶ್ವರ್ ನೇರ ತನ್ನ ಹೆಂಡ್ತಿ ಡೊಜಾಯ್ ತಂಗಿದ್ದ ಅಪಾರ್ಟ್ಮೆಂಟ್ಗೆ ತೆರಳಿ ಮನಬಂದಂತೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಬಳಿಕ ತನ್ನ ಸಹೋದರಿಗೆ ಪತ್ನಿಯನ್ನು ಕೊಲೆ ಮಾಡಿರುವ ಸುದ್ದಿಯನ್ನ ಮೆಸೇಜ್ ಮಾಡಿ ತಿಳಿಸಿದ್ದಾನೆ. ಸಂದೇಶ ಕಳಿಸಿದ ಬಳಿಕ ದಿನೇಶ್ವರ್ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ದಿನೇಶ್ವರ್ ಸಹೋದರಿ ಕೂಡಲೇ ಅಪಾರ್ಟ್ಮೆಂಟ್ಗೆ ತೆರಳಿ ನೋಡಿದಾಗ ಡೊಜಾಯ್ ಕೊಲೆ ಆಗಿರುವುದು ಕನ್ಫರ್ಮ್ ಆಗಿದೆ. ಬಳಿಕ ಪೊಲೀಸರಿಗೆ ಮಾಹಿತಿ ತಿಳಿಸಿದ್ದರು. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.