ಮಾಂಟೆಸಿಟೊ (ಕ್ಯಾಲಿಫೋರ್ನಿಯಾ): ಬ್ರಿಟನ್ ಯುವರಾಣಿ ಮೇಘನ್ ಮಾರ್ಕೆಲ್ ಹಾಗೂ ಹ್ಯಾರಿ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು, ಶಿಶುವಿನ ಲಿಂಗವನ್ನು ಬಹಿರಂಗಪಡಿಸಿದ್ದಾರೆ.
ಅಮೆರಿಕದ ಸಂದರ್ಶಕಿ ಓಪ್ರಾ ವಿನ್ಫ್ರೆ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಹ್ಯಾರಿ, "ಹೌದು.. ಇದು ಹೆಣ್ಣು ಮಗು. ಒಬ್ಬ ಗಂಡು ಮಗ ಇದ್ದಾನೆ, ಬಳಿಕ ಹೆಣ್ಣು ಮಗುವನ್ನು ಪಡೆಯುತ್ತಿದ್ದೇವೆ. ನಮ್ಮದೀಗ ನಾಲ್ವರು ಸದಸ್ಯರ ಕುಟುಂಬ" ಎಂದು ಹೇಳಿದ್ದಾರೆ.
ರಾಜಮನೆತನವನ್ನು ತ್ಯಜಿಸಿ ಜನಸಾಮಾನ್ಯರಂತೆ ವಾಸಿಸುತ್ತಿರುವ ಇಂಗ್ಲೆಂಡ್ನ ಯುವರಾಜ ಹ್ಯಾರಿ ಮತ್ತು ಯುವರಾಣಿ ಮೇಘನ್ ಮಾರ್ಕೆಲ್ಗೆ ಗಂಡು ಮಗುವಿದ್ದು, ಮೇ 2ಕ್ಕೆ ಎರಡು ವರ್ಷ ತುಂಬುತ್ತಿದೆ.
ಇದನ್ನೂ ಓದಿ: 73 ವರ್ಷ ಅಜ್ಜನಿಗೆ ಮದುವೆಯಾಗುವ ಆಸೆ.. ವಿವಾಹದ ಹೆಸರಲ್ಲಿ ಕೋಟಿ ಲೂಟಿ ಮಾಡಿ ಮಹಿಳೆ ಎಸ್ಕೇಪ್!
ಪ್ರಿನ್ಸ್ ಹ್ಯಾರಿಯನ್ನು ಮದುವೆಯಾದ ಬಳಿಕ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆಗಳು ತಲೆಗೆ ಬಂದಿದ್ದವು. ರಾಜಮನೆತನಕ್ಕೆ ಸೇರಿದಾಗಿನಿಂದ ಅನುಭವಿಸಿದ ಮಾನಸಿಕ ಯಾತನೆಗಳಿಗೆ ಪರಿಹಾರ ಸಿಕ್ಕಿರಲಿಲ್ಲ. ರಾಜಮನೆತನ ನನ್ನನ್ನು ರಕ್ಷಿಸುವುದಿಲ್ಲ ಎಂಬುದು ತಿಳಿಯಿತು. ಆದರೆ ಹ್ಯಾರಿ ನನ್ನ ಕೈಬಿಡಲಿಲ್ಲ ಎಂದು ಸಂದರ್ಶನದಲ್ಲಿ ಮೇಘನ್ ಮಾರ್ಕೆಲ್ ತಮ್ಮ ನೋವು ಹಂಚಿಕೊಂಡಿದ್ದಾರೆ.