ವಾಷಿಂಗ್ಟನ್ : ನ್ಯೂಯಾರ್ಕ್ನ ನರ್ಸ್ ಒಬ್ಬರಿಗೆ ಸೋಮವಾರ ಕೋವಿಡ್-19 ಮೊದಲ ಲಸಿಕೆ ನೀಡಲಾಗಿದೆ. ಲಸಿಕೆ ನೀಡಿಕೆ ಆರಂಭವಾಗಿದ್ದರಿಂದ ಅಮೆರಿಕನ್ನರು ನಿಟ್ಟುಸಿರು ಬಿಟ್ಟಿದ್ದಾರೆ.
ನರ್ಸ್ ಸಾಂಡ್ರಾ ಲಿಂಡ್ಸೆ ಎಂಬುವರಿಗೆ ಫೈಝರ್ ತಯಾರಿಸಿದ ಕೊರೊನಾ ಲಸಿಕೆ ನೀಡಲಾಗಿದೆ. ಕ್ವೀನ್ಸ್‌ನ ಲಾಂಗ್ ಐಲ್ಯಾಂಡ್ ಯಹೂದಿ ವೈದ್ಯಕೀಯ ಕೇಂದ್ರದಲ್ಲಿ ಸಾಂಡ್ರಾ ಲಿಂಡ್ಸೆ ಅವರನ್ನು ಕೊರೊನಾ ವ್ಯಾಕ್ಸಿನೇಶನ್ಗೆ ಒಳಪಡಿಸಲಾಯ್ತು.
ಅಮೆರಿಕದ ಹಂಗಾಮಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವಿಟರ್ನಲ್ಲಿ ಈ ಕುರಿತು ಸಂತಸ ಹಂಚಿಕೊಂಡಿದ್ದಾರೆ. ಯುಎಸ್ನಲ್ಲಿ ಮೊದಲ ಕೊರೊನಾ ಲಸಿಕೆ ನೀಡುವಿಕೆ ಶುರುವಾಗಿದೆ. ಅಮೆರಿಕನ್ನರಿಗೆ ವಂದನೆಗಳು, ಜಗತ್ತಿಗೂ ಶುಭಾಶಯಗಳು’ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.
-
First Vaccine Administered. Congratulations USA! Congratulations WORLD!
— Donald J. Trump (@realDonaldTrump) December 14, 2020 " class="align-text-top noRightClick twitterSection" data="
">First Vaccine Administered. Congratulations USA! Congratulations WORLD!
— Donald J. Trump (@realDonaldTrump) December 14, 2020First Vaccine Administered. Congratulations USA! Congratulations WORLD!
— Donald J. Trump (@realDonaldTrump) December 14, 2020
ಮೊದಲ ಕೋವಿಡ್ ಲಸಿಕೆ ನೀಡಿಕೆ ಕುರಿತು ಅಮೆರಿಕ ಚುನಾಯಿತ ಅಧ್ಯಕ್ಷ ಜೋ ಬೈಡನ್ ಟ್ವೀಟ್ ಮಾಡಿದ್ದು, ಆಶಾದಾಯಕವಾಗಿ ಪ್ರಕಾಶಮಾನವಾದ ದಿನಗಳು ಮುಂದೆ ಬರಲಿವೆ ಟ್ವೀಟ್ ಮಾಡಿದ್ದಾರೆ.
ಮಿಚಿಗನ್‌ನ ಲಸಿಕೆ ಫೈಝರ್ ಉತ್ಪಾದನಾ ಘಟಕದಿಂದ ಭಾನುವಾರ 30 ಲಕ್ಷ ಫೈಝರ್ ಡೋಸ್‌ಗಳನ್ನು 636 ಸ್ಥಳಗಳಿಗೆ ಅತಿಕಡಿಮೆ ಉಷ್ಣಾಂಶವುಳ್ಳ ಬಾಕ್ಸ್‌ಗಳಲ್ಲಿ ಸಂರಕ್ಷಿಸಿ, ವಿಮಾನ ಮತ್ತು ಟ್ರಕ್‌ಗಳ ಮೂಲಕ ದೇಶಾದ್ಯಂತದ ಆರೋಗ್ಯ ಕೇಂದ್ರಗಳಿಗೆ ಪೂರೈಸಲಾಗಿದೆ. ಆರೋಗ್ಯ ಇಲಾಖೆ ಕಾರ್ಯಕರ್ತರು, ನರ್ಸ್‌ಗಳು, ತೀವ್ರ ಸೋಂಕಿಗೆ ತುತ್ತಾಗಿರುವವರಿಗೆ ಆರಂಭಿಕ ಹಂತದಲ್ಲಿ ಕೋವಿಡ್ ವ್ಯಾಕ್ಸಿನ್ ನೀಡಲಾಗುತ್ತಿದೆ.
ಅಮೆರಿಕದಲ್ಲಿ ಸುಮಾರು 30 ಸಾವಿರ ಜನರನ್ನು ಬಲಿ ಪಡೆದ ಕೊರೊನಾ ಹೊಡೆದೋಡಿಸಲು ಫೈಝರ್-ಬಯೋಎನ್‌ಟೆಕ್ ತಯಾರಿಸಿದ ಲಸಿಕೆಯ ತುರ್ತು ಬಳಕೆಗೆ ಯುಎಸ್ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಶುಕ್ರವಾರ ಅನುಮತಿ ನೀಡಿತ್ತು.
ಇದನ್ನೂ ಓದಿ:ಗುತ್ತಿಗೆದಾರನ ನಿವಾಸದ ಮೇಲೆ ಐಟಿ ದಾಳಿ: 12 ಕೋಟಿ ನಗದು ವಶ