ETV Bharat / international

ದುರ್ಗಾದೇವಿಯ ವ್ಯಂಗ್ಯ ಚಿತ್ರ ಟ್ವೀಟ್​ ಮಾಡಿದ ಕಮಲಾ ಹ್ಯಾರಿಸ್ ಸೊಸೆ: ಹಿಂದೂ ಸಂಘಟನೆಗಳಿಂದ ಕ್ಷಮೆಯಾಚಿಸಲು ಆಗ್ರಹ

author img

By

Published : Oct 20, 2020, 7:37 PM IST

ದುರ್ಗಾ ದೇವಿಯ ವ್ಯಂಗ್ಯ ಚಿತ್ರವನ್ನು ಟ್ವೀಟ್​ ಮಾಡಿದ್ದಕ್ಕಾಗಿ ಅಮೆರಿಕ ಚುನಾವಣೆಯ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಸೊಸೆ ವಿರುದ್ಧ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

Hindu groups seek apology from Kamala Harris' niece
ಮೀನಾ ಹ್ಯಾರಿಸ್​ ವಿರುದ್ಧ ಹಿಂದೂ ಸಂಘಟನೆಗಳು ಆಕ್ರೋಶ

ವಾಷಿಂಗ್ಟನ್ : ಯುಎಸ್​ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧಿಸಿರುವ ಕಮಲ ಹ್ಯಾರಿಸ್​ 'ದುರ್ಗಾ ದೇವಿ' ಎಂದು ವಿವಾದಾತ್ಮಕ ಟ್ವೀಟ್​ ಮಾಡಿದ್ದಕ್ಕಾಗಿ, ಕಮಲಾ ಹ್ಯಾರಿಸ್​ ಅವರ ಸೊಸೆ ಮೀನಾ ಹ್ಯಾರಿಸ್​ ಕ್ಷಮೆ ಯಾಚಿಸಬೇಕೆಂದು ಯುಎಸ್​ ಹಿಂದೂ ಸಂಘಟನೆಗಳು ಆಗ್ರಹಿಸಿವೆ.

ಮೀನಾ ಹ್ಯಾರಿಸ್​ ಈಗಾಗಲೇ ತನ್ನ ಟ್ವೀಟ್​ ಡಿಲಿಟ್​ ಮಾಡಿದ್ದಾರೆ. 35 ವರ್ಷದ ಮೀನಾ ಹ್ಯಾರಿಸ್ ಮಕ್ಕಳ ಪುಸ್ತಕಗಳ ಲೇಖಕಿ ಮತ್ತು ಸಾಮಾಜಿಕ ಸಂಘಟನೆ ಫಿನಾಮಿನಲ್ ವುಮನ್ ಆ್ಯಕ್ಷನ್ ಕ್ಯಾಂಪೇನ್ ಸ್ಥಾಪಕರಾಗಿದ್ದಾರೆ.

ದುರ್ಗಾ ದೇವಿಯ ವ್ಯಂಗ್ಯ ಚಿತ್ರ ಟ್ವೀಟ್​ ಮಾಡಿದ್ದು, ಜಾಗತಿಕವಾಗಿ ಹಿಂದೂಗಳನ್ನು ಕೆರಳಿಸಿದೆ ಎಂದು ಹಿಂದೂ ಅಮೆರಿಕನ್ ಫೌಂಡೇಶನ್‌ನ ಸುಹಾಗ್ ಎ ಶುಕ್ಲಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಹಿಂದೂ ಅಮೆರಿಕನ್ ಫೌಂಡೇಶನ್, ಧರ್ಮಕ್ಕೆ ಸಂಬಂಧಿಸಿದ ಚಿತ್ರಗಳ ವಾಣಿಜ್ಯ ಬಳಕೆಗಾಗಿ ಮಾರ್ಗಸೂಚಿಯನ್ನು ಹೊರಡಿಸಿದೆ.

ಇನ್ನು, ಈ ವಿವಾದಾತ್ಮಕ ಚಿತ್ರವನ್ನು ಮೀನಾ ಹ್ಯಾರಿಸ್​ ಅಥವಾ ಬಿಡೆನ್ ಅಭಿಯಾನ ತಂಡ ರಚಿಸಿಲ್ಲ. ಅದು ವಾಟ್ಸ್ ಆ್ಯಪ್ ಮೂಲಕ ಹರಿದಾಡುತ್ತಿತ್ತು ಎಂದು ಹಿಂದೂ ಅಮೆರಿಕನ್ ರಾಜಕೀಯ ಕ್ರಿಯಾ ಸಮಿತಿಯ ರಿಷಿ ಭೂತಾಡಾ ಹೇಳಿದ್ದಾರೆ.

ಮೀನಾ ಹ್ಯಾರಿಸ್ ಟ್ವೀಟ್​ ಡಿಲಿಟ್​ ಮಾಡಿದ್ದರೂ, ಅವರು ಹಿಂದೂ ಸಮುದಾಯದ ಕ್ಷಮೆಯನ್ನು ಯಾಚಿಸಲೇ ಬೇಕು. ಬೇರೆ ಯಾರೇ ಈ ರೀತಿ ಮಾಡಿದರೂ ಕ್ಷಮೆ ಯಾಚಿಸಬೇಕು. ಅಮೆರಿಕದ ರಾಜಕೀಯದಲ್ಲಿ ನಮ್ಮ ಧರ್ಮದ ವಿಷಯಗಳನ್ನು ಬಳಸಬಾರದು. ಈ ಹಿಂದೆ, 2018 ರಲ್ಲಿ ಫೋರ್ಟ್ ಬೆಂಡ್ ಕೌಂಟಿ ಜಿಒಪಿ ತನ್ನ ಜಾಹಿರಾತಿನಲ್ಲಿ ಇದೇ ರೀತಿ ಮಾಡಿದಾಗಲೂ ನಾನು ಹೀಗೆ ಎಂದಿದ್ದೆ ಎಂದು ಎಂದು ಭೂತಾಡಾ ತಿಳಿಸಿದ್ದಾರೆ.

ಮೀನಾ ಹ್ಯಾರಿಸ್ ಟ್ವೀಟ್ ಮಾಡಿದ್ದ ವಿವಾದಾತ್ಮಕ ಫೋಟೋದಲ್ಲಿ, ದುರ್ಗಾದೇವಿಯಂತೆ ಚಿತ್ರಿಸಲಾದ ಕಮಲಾ ಹ್ಯಾರಿಸ್​, ರಾಕ್ಷಸ ಮಹಿಷಾಷುರನ ವಾಹನ (ಎಮ್ಮೆ) ವನ್ನು ಕೊಲ್ಲುತ್ತಿರುವುದು ಕಾಣಬಹುದಾಗಿದೆ. ಚಿತ್ರದಲ್ಲಿ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಅವರನ್ನು ದೇವತೆಯ ವಾಹನ ( ಸಿಂಹ ) ಎಂದು ಚಿತ್ರಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.