ETV Bharat / international

ಅಲಾಸ್ಕಾ ಬ್ಯಾಕ್‌ಕಂಟ್ರಿ ಹೆಲಿ - ಸ್ಕೈಯಿಂಗ್ ಟ್ರಿಪ್‌ನಲ್ಲಿದ್ದ ಹೆಲಿಕಾಪ್ಟರ್ ಅಪಘಾತ: ಪೈಲೆಟ್​ ಸೇರಿ ಐವರು ಸಾವು - ಅಲಾಸ್ಕಾ ಬ್ಯಾಕ್‌ಕಂಟ್ರಿ ಹೆಲಿ-ಸ್ಕೈಯಿಂಗ್ ಟ್ರಿಪ್‌ನಲ್ಲಿದ್ದ ಹೆಲಿಕಾಪ್ಟರ್ ಅಪಘಾತ

ಅಲಾಸ್ಕಾದ ಬ್ಯಾಕ್‌ಕಂಟ್ರಿಯಲ್ಲಿ ಹೆಲಿ - ಸ್ಕೈಯಿಂಗ್ ಪ್ರವಾಸದಲ್ಲಿ ಗುತ್ತಿಗೆ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು, ಪೈಲಟ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ್ದಾರೆ. ಹೆಲಿಕಾಪ್ಟರ್​ನಲ್ಲಿದ್ದ ಇನ್ನೊಬ್ಬ ವ್ಯಕ್ತಿ ಗಂಭೀರ ಸ್ಥಿತಿಯಲ್ಲಿದ್ದು, ಆಂಕಾರೇಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಐದು ಪ್ರಯಾಣಿಕರಲ್ಲಿ ಟೋರ್ಡ್ರಿಲ್ಲೊ ಮೌಂಟೇನ್ ಲಾಡ್ಜ್‌ನ ಮೂವರು ಅತಿಥಿಗಳು ಮತ್ತು ಇಬ್ಬರು ಗೈಡ್‌ಗಳು ಸೇರಿದ್ದಾರೆ ಎಂದು ಕಂಪನಿಯ ವಕ್ತಾರ ಮೇರಿ ಆನ್ ಪ್ರುಯಿಟ್ ಹೇಳಿದ್ದಾರೆ.

ಅಲಾಸ್ಕಾ ಬ್ಯಾಕ್‌ಕಂಟ್ರಿ ಹೆಲಿ-ಸ್ಕೈಯಿಂಗ್ ಟ್ರಿಪ್‌ನಲ್ಲಿದ್ದ ಹೆಲಿಕಾಪ್ಟರ್ ಅಪಘಾತ

author img

By

Published : Mar 29, 2021, 10:58 AM IST

ಆಂಕಾರೇಜ್ (ಯುಎಸ್): ಅಲಾಸ್ಕಾದ ಬ್ಯಾಕ್‌ಕಂಟ್ರಿಯಲ್ಲಿ ಹೆಲಿ - ಸ್ಕೈಯಿಂಗ್ ಪ್ರವಾಸದಲ್ಲಿ ಲಾಡ್ಜ್‌ನಿಂದ ಮಾರ್ಗದರ್ಶಕರು ಮತ್ತು ಅತಿಥಿಗಳನ್ನು ಕರೆದೊಯ್ಯುವ ಗುತ್ತಿಗೆ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು, ಪೈಲಟ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಲಿಕಾಪ್ಟರ್​ನಲ್ಲಿದ್ದ ಇನ್ನೊಬ್ಬ ವ್ಯಕ್ತಿ ಗಂಭೀರ ಸ್ಥಿತಿಯಲ್ಲಿದ್ದು, ಆಂಕಾರೇಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರ ಅಪಘಾತದಲ್ಲಿ ಮೃತಪಟ್ಟ ಐವರನ್ನು ಕೊಲೊರಾಡೋದ ಗ್ರೆಗೊರಿ ಹಾರ್ಮ್ಸ್ (52), ಜೆಕ್ ಗಣರಾಜ್ಯದ ಪೆಟ್ರ್ ಕೆಲ್ನರ್ (56) ಮತ್ತು ಬೆಂಜಮಿನ್ ಲಾರೊಚೈಕ್ಸ್ (50) ಮತ್ತು ಗಿರ್ಡ್‌ವುಡ್‌ನ 38 ವರ್ಷದ ಸೀನ್ ಮೆಕ್‌ಮನ್ನನಿ ಮತ್ತು ಪೈಲಟ್ ಆಂಕಾರೋಜ್‌ನ 33 ವರ್ಷದ ಜಕಾರಿ ರಸ್ಸೆಲ್ ಎಂದು ಗುರುತಿಸಲಾಗಿದೆ.

ಐದು ಪ್ರಯಾಣಿಕರಲ್ಲಿ ಟೋರ್ಡ್ರಿಲ್ಲೊ ಮೌಂಟೇನ್ ಲಾಡ್ಜ್‌ನ ಮೂವರು ಅತಿಥಿಗಳು ಮತ್ತು ಇಬ್ಬರು ಗೈಡ್‌ಗಳು ಸೇರಿದ್ದಾರೆ ಎಂದು ಕಂಪನಿಯ ವಕ್ತಾರ ಮೇರಿ ಆನ್ ಪ್ರುಯಿಟ್ ಹೇಳಿದ್ದಾರೆ.

ಇದನ್ನೂ ಓದಿ: ಭಾರಿ ಮಳೆ ತಂದ ಅವಾಂತರ: ಪ್ರವಾಹದಲ್ಲಿ ನಾಲ್ವರ ಮೃತದೇಹ ಪತ್ತೆ

ಯುರೋಕಾಪ್ಟರ್ ಎಎಸ್ 50 ಶನಿವಾರ ಸಂಜೆ 6:35 ಕ್ಕೆ ಆಂಕಾರೇಜ್‌ನಿಂದ ಪೂರ್ವಕ್ಕೆ 50 ಮೈಲಿ (80 ಕಿ.ಮೀ) ಚಲಿಸಿ ಅಪಘಾತಕ್ಕಿಡಾಗಿದೆ ಎಂದು ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ಭಾನುವಾರ ತಿಳಿಸಿದೆ. ಕ್ರ್ಯಾಶ್ ಸೈಟ್ ನಿಕ್ ಗ್ಲೇಸಿಯರ್ ಬಳಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.