ಫೀನಿಕ್ಸ್: ಎಲ್ಲಿಯಾದ್ರೂ ಅಪಘಾತ ಸಂಭವಿಸಿದ್ರೆ ಪ್ರಾಣ ಹೋಗುವುದು ಅಥವಾ ಗಾಯವಾಗುವುದು ಸರ್ವೇ ಸಾಮಾನ್ಯ. ಆದ್ರೆ ಅಮೆರಿಕದ ಆರಿಜೋನಾ ರಾಜ್ಯದ ರಾಜಧಾನಿ ಫೀನಿಕ್ಸ್ನಲ್ಲಿ ಸಂಭವಿಸಿದ ರಸ್ತೆ ಅಪಘಾತಯಲ್ಲಿ ಮೂವರು ಪ್ರಾಣ ಉಳಿದಿವೆ. ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ವೈರಲ್ ಆಗ್ತಿರುವ ವಿಡಿಯೋದಲ್ಲಿ ಒಂದು ಕಡೆಯಿಂದ ಕಾರು ವೇಗವಾಗಿ ಬರುತ್ತಿದೆ. ಸಿಗ್ನಲ್ ಬಿದ್ದಿದ್ದರೂ ಸಹ ಚಾಲಕ ಕಾರನ್ನು ವೇಗವಾಗಿ ಓಡಿಸುತ್ತಿದ್ದ. ಇನ್ನೊಂದು ಮಗುವನ್ನು ಹಿಡಿದುಕೊಂಡು ದಂಪತಿ ರಸ್ತೆ ದಾಟುತ್ತಿದ್ದರು. ಇನ್ನೇನೂ ಆ ಮೂವರಿಗೆ ಕಾರು ಡಿಕ್ಕಿ ಹೊಡೆಯಬೇಕು ಅನ್ನುವಷ್ಟರಲ್ಲಿ ಯಾರೋ ಕಳುಹಿಸಿದಂತೆ ಮತ್ತೊಂದು ಕಾರು ಆ ಕಾರಿಗೆ ಡಿಕ್ಕಿ ಹೊಡೆದಿದೆ.
-
An angel in the form of a Chevy Cruz may have saved the lives of a couple pushing a stroller through a Phoenix crosswalk at 53rd Ave & Indian School.
— Phoenix Police Department (@phoenixpolice) October 23, 2019 " class="align-text-top noRightClick twitterSection" data="
The innocent driver will be OK. The red-light runner was arrested for DUI. pic.twitter.com/Ypz8AQZrmi
">An angel in the form of a Chevy Cruz may have saved the lives of a couple pushing a stroller through a Phoenix crosswalk at 53rd Ave & Indian School.
— Phoenix Police Department (@phoenixpolice) October 23, 2019
The innocent driver will be OK. The red-light runner was arrested for DUI. pic.twitter.com/Ypz8AQZrmiAn angel in the form of a Chevy Cruz may have saved the lives of a couple pushing a stroller through a Phoenix crosswalk at 53rd Ave & Indian School.
— Phoenix Police Department (@phoenixpolice) October 23, 2019
The innocent driver will be OK. The red-light runner was arrested for DUI. pic.twitter.com/Ypz8AQZrmi
ಡಿಕ್ಕಿ ರಭಸಕ್ಕೆ ಎರಡು ಕಾರುಗಳು ರಸ್ತೆ ಪಕ್ಕಕ್ಕೆ ಸರಿದವು. ಈ ಘಟನೆಯಿಂದ ಮಗುವಿನ ಜೊತೆ ರಸ್ತೆ ದಾಟುತ್ತಿದ್ದ ದಂಪತಿಯ ಪ್ರಾಣ ಉಳಿಯಿತು. ಇಲ್ಲವಾದಲ್ಲಿ ಮೂವರು ರಸ್ತೆ ಅಪಘಾತಕ್ಕೆ ಬಲಿಯಾಗುವ ಸಾಧ್ಯತೆ ಹೆಚ್ಚಾಗಿತ್ತು. ಇನ್ನು ಈ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇನ್ನು ವೇಗವಾಗಿ ಚಲಿಸುತ್ತಿದ್ದ ಕಾರಿನ ಚಾಲಕ ಕುಡಿದ ಮತ್ತಿನಲ್ಲಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ಆ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
ಅಪಘಾತದ ವಿಡಿಯೋ ಫಿನಿಕ್ಸ್ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ‘ಬಹುಶ: ಚೆವೀ ಕ್ರೂಜ್ ಕಾರಿನ ರೂಪದಲ್ಲಿ ದೇವದೂತನೊಬ್ಬ ಇಂಡಿಯನ್ ಸ್ಕೂಲ್ ರಿಂಗ್ರೋಡ್ ಬಳಿ ಮಗುವಿನ ಜೊತೆ ರಸ್ತೆ ದಾಟುತ್ತಿದ್ದ ದಂಪತಿಯ ಪ್ರಾಣ ಕಾಪಾಡಿರಬಹುದು’ ಎಂದು ಪೊಲೀಸರು ಪೋಸ್ಟ್ ಹಾಕಿದ್ದಾರೆ. ಪೊಲೀಸರ ಪೋಸ್ಟ್ಗೆ ನೆಟ್ಟಿಗರು ಫಿದಾ ಆಗಿದ್ದಾರೆ.