ETV Bharat / international

ಕಿಟಕಿ ಮೂಲಕ ಮೊಮ್ಮಗಳ ಮುಖ ನೋಡಲು ಪ್ರತಿದಿನ 6 ಕಿ.ಮೀ ನಡೆಯುತ್ತಾರೆ ಈ ಅಜ್ಜ - ಅಮೆರಿಕ ಕೊರೊನಾ ಅಪ್ಡೇಟ್​

ಅಮೆರಿಕದ ಮಿಚಿಗನ್​ ರಾಜ್ಯದಲ್ಲಿ ಸ್ಟೇ ಹೋಂ(ಮನೆಯಲ್ಲೇ ಇರಿ)ನಿಯಮ ಜಾರಿಯಲ್ಲಿದೆ. ಆದ್ರೆ ಈ ತಾತನಿಗೆ ತಮ್ಮ ಮುದ್ದು ಮೊಮ್ಮಗಳದ್ದೇ ಚಿಂತೆ. ಪ್ರತಿನಿತ್ಯ ತಮ್ಮ ಮೊಮ್ಮಗಳನ್ನ ನೋಡದಿದ್ರೆ ಇವರಿಗೆ ಸಮಾಧಾನವೇ ಆಗಲ್ಲ.

Grandfather Walks 6 Km To See Newborn Granddaughter
ಮೊಮ್ಮಗಳನ್ನು ನೋಡಲು ಪ್ರತಿದಿನ 6 ಕಿ.ಮೀ ನಡೆಯುತ್ತಾರೆ ಈ ಅಜ್ಜ
author img

By

Published : Apr 9, 2020, 5:08 PM IST

ಮಿಚಿಗನ್​(ಯುಎಸ್​ಎ): ತಮ್ಮ ಮುದ್ದಿನ ಮೊಮ್ಮಗಳನ್ನು ನೋಡಲು ಈ ತಾತ ಪ್ರತಿನಿತ್ಯ 6 ಕಿಲೋ ಮೀಟರ್​ ನಡೆದುಕೊಂಡು ಹೋಗಿ ಕಿಟಕಿಯ ಮೂಲಕ ಮೊಮ್ಮಗಳನ್ನು ಕಣ್ತುಂಬಿಕೊಂಡು ಬರುತ್ತಿದ್ದಾರೆ.

ಕೊರೊನಾದಿಂದಾಗಿ ಅಮೆರಿಕ ತತ್ತರಿಸಿರುವುದು ಗೊತ್ತಿರುವ ವಿಚಾರ. ಹೀಗಾಗಿ ಇಲ್ಲಿನ ಮಿಚಿಗನ್​ ರಾಜ್ಯದಲ್ಲಿ ಸ್ಟೇ ಹೋಂ(ಮನೆಯಲ್ಲೇ ಇರಿ)ನಿಯಮ ಕಟ್ಟುನಿಟ್ಟಾಗಿ ಜಾರಿಯಲ್ಲಿದೆ. ಆದ್ರೆ ಈ ತಾತನಿಗೆ ತಮ್ಮ ಮುದ್ದು ಮೊಮ್ಮಗಳದ್ದೇ ಚಿಂತೆ. ಹೀಗಿದ್ದರೂ ಪ್ರತಿನಿತ್ಯ ತಮ್ಮ ಮೊಮ್ಮಗಳ ಮುಖ ನೋಡದಿದ್ರೆ ಇವರಿಗೆ ಸಮಾಧಾನವಾಗಲ್ಲ. ಹೀಗಾಗಿ ಸುಮಾರು 6 ಕಿ.ಮೀ ದೂರದ ತನ್ನ ಮಗನ ಮನೆಗೆ ಪ್ರತಿನಿತ್ಯ ನಡೆದುಕೊಂಡೇ ಹೋಗಿ ಪುಟ್ಟ ಮೊಮ್ಮಗಳನ್ನು ನೋಡಿಕೊಂಡು ಬರುತ್ತಿದ್ದಾರೆ. ಆದ್ರೆ ಕೊರೊನಾ ಸೋಷಿಯಲ್​ ಡಿಸ್ಟೆನ್ಸ್​ನಿಂದಾಗಿ ಅಜ್ಜನಿಗೆ ತಮ್ಮ ಮೊಮ್ಮಗಳನ್ನು ಎತ್ತಿ ಮುದ್ದಾಡೋ ಭಾಗ್ಯವಿಲ್ಲ. ಹೀಗಾಗಿ ಕಿಟಕಿ ಮೂಲಕವೇ ಮೊಮ್ಮಗಳು ಎಲಿಯಾನಾಳನ್ನು ಕಣ್ತುಂಬಿಕೊಳ್ಳುತ್ತಾರೆ.

ಈ ಬಗ್ಗೆ ತಾತನ ಮಗ ಜೋಶುವಾ ಜಿಲೆಟ್ ಫೋಟೋವೊಂದನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದು, ಈ ಫೋಟೋದಲ್ಲಿ ತಾತ ಕಿಟಕಿ ಹೊರಗಿನಿಂದಲೇ ಮಗುವನ್ನು ಖುಷಿಯಿಂದ ನೋಡುವುದನ್ನು ಕಾಣಬಹುದು. ಇದು ನಿತ್ಯ ದಿನಚರಿಯಾಗಿಬಿಟ್ಟಿದೆ. ನನ್ನ ತಂದೆ ಮಗುವನ್ನು ತಮ್ಮ ಕೈಯಿಂದ ಎತ್ತಿ ಮುದ್ದಾಡಲು ಆಗುವುದಿಲ್ಲ ಎಂದು ನನಗೆ ಅತೀವ ನೋವನ್ನುಂಟು ಮಾಡುತ್ತದೆ ಎಂದು ಬರೆದುಕೊಂಡಿದ್ದಾರೆ.

ಕೊರೊನಾ ಸೋಂಕು ತಾತನಿಗೆ ತಮ್ಮ ಮುದ್ದು ಮಗಳನ್ನು ಮಟ್ಟದಂತೆ ಮಾಡಿದ್ದು, ಜೋಶುವಾ ಜಿಲೆಟ್ ಬೇಸರ ತಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.