ಲಂಡನ್: ಇನ್ನು ಮುಂದೆ ಯುನೈಟೆಡ್ ಸ್ಟೇಟ್ಸ್ನಲ್ಲಿರುವ ಜನರು ಗೂಗಲ್ ಪೇ ಮೂಲಕ ಭಾರತ ಮತ್ತು ಸಿಂಗಾಪುರದ ಅಪ್ಲಿಕೇಶನ್ ಬಳಕೆದಾರರಿಗೆ ಹಣವನ್ನು ವರ್ಗಾಯಿಸಬಹುದು.
ವೈಸ್ ಮತ್ತು ವೆಸ್ಟರ್ನ್ ಯೂನಿಯನ್ ಸಂಸ್ಥೆಯ ಸಹಭಾಗಿತ್ವದೊಂದಿಗೆ ಆಲ್ಫಾಬೆಟ್ ಐಎನ್ಸಿ ಗೂಗಲ್ ಈ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಿದೆ. ಸದ್ಯ ಅಮೆರಿಕದ ಬಳಕೆದಾರರು ಎರಡು ರಾಷ್ಟ್ರಗಳಿಗೆ ಮಾತ್ರ ಹಣ ಕಳುಹಿಸುವ ಅವಕಾಶ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ವೈಸ್ ಮೂಲಕ ಲಭ್ಯವಿರುವ 80 ದೇಶಗಳಿಗೆ ಮತ್ತು ವರ್ಷಾಂತ್ಯದಲ್ಲಿ ವೆಸ್ಟರ್ನ್ ಯೂನಿಯನ್ ಮೂಲಕ ಲಭ್ಯವಿರುವ 200 ದೇಶಗಳಿಗೆ ವಿಸ್ತರಿಸುವ ಯೋಜನೆ ಇದೆ.
ಅಂತಾರಾಷ್ಟ್ರೀಯ ಹಣ ವರ್ಗಾವಣೆಯನ್ನು ಅಗ್ಗದ ಮತ್ತು ಸುಲಭವಾಗಿಸುವ ಉದ್ದೇಶದಿಂದ 2011ರಲ್ಲಿ ಲಂಡನ್ ಮೂಲದ ವೈಸ್ ಅನ್ನು ಪ್ರಾರಂಭಿಸಲಾಯಿತು.
40 ದೇಶಗಳಲ್ಲಿ 150 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಗೂಗಲ್ ಪೇ ಅವರೊಂದಿಗಿನ ಸಹಭಾಗಿತ್ವವು ಕೊರೊನಾ ಸಮಯದ ಆನ್‌ಲೈನ್ ಮೂಲಕ ಪಾವತಿ ಮಾಡುವುದನ್ನು ಉತ್ತೇಜಿಸುತ್ತಿದೆ. ವಿಶ್ವಬ್ಯಾಂಕ್‌ನ ಇತ್ತೀಚಿನ ಅಂದಾಜಿನ ಪ್ರಕಾರ, ವಲಸೆ ಕಾರ್ಮಿಕರು ಮನೆಗೆ ಕಳುಹಿಸಿದ ಹಣವು ಆರ್ಥಿಕ ಪರಿಸ್ಥಿತಿಗಳು ಮತ್ತು ವಲಸೆ ಸ್ನೇಹಿ ದೇಶಗಳಲ್ಲಿನ ಉದ್ಯೋಗ ಸಮಸ್ಯೆಗಳಿಂದಾಗಿ 2019 ರಿಂದ ಶೇ 14 ರಷ್ಟು ಕುಸಿದಿದೆ ಅನ್ನೋದು ಒಂದು ಅಂದಾಜು.
ಇನ್ನು ಭಾರತದಿಂದ ಅಮೆರಿಕಗೆ ಅಥವಾ ಬೇರೆ ದೇಶಗಳಿಗೆ ಹಣ ಪಾವತಿಸಲು ಸಾಧ್ಯವಿಲ್ಲ. ಅಮೆರಿಕದಲ್ಲಿನ ಗೂಗಲ್ ಪೇ ಬಳಕೆದಾರರು ಹಣ ಪಾವತಿಸುವ ಸಂದರ್ಭದಲ್ಲಿ ಆ್ಯಪ್ ಮೂಲಕ ವೈಸ್ ಅಥವಾ ವೆಸ್ಟರ್ನ್ ಯೂನಿಯನ್ ಪೇಮೆಂಟ್ ಪ್ರೊವೈಡ್ ಮೂಲಕವೇ? ಎಂಬ ಆಯ್ಕೆಯನ್ನು ಪಡೆಯುತ್ತಾರೆ. ಈ ಆಯ್ಕೆಗಳನ್ನು ಬಳಸಿ ಹಣ ರವಾನಿಸಬಹುದು.