ETV Bharat / international

ಟಿಕ್‌ಟಾಕ್ ಆ್ಯಪ್ ಖರೀದಿ ರೇಸ್​ನಲ್ಲಿ ಗೂಗಲ್ ಇಲ್ಲ: ಸುಂದರ್ ಪಿಚೈ ಸ್ಪಷ್ಟನೆ

author img

By

Published : Aug 27, 2020, 11:48 AM IST

ಚೀನಾ ಮೂಲದ ಟಿಕ್‌ಟಾಕ್ ಆ್ಯಪ್ ಖರೀದಿಸುವ ಸ್ಪರ್ಧೆಯಲ್ಲಿ ತಮ್ಮ ಕಂಪನಿ ಇಲ್ಲ ಎಂದು ಗೂಗಲ್ ಸಂಸ್ಥೆಯ ಸಿಇಒ ಸುಂದರ್ ಪಿಚೈ ಸ್ಪಷ್ಟಪಡಿಸಿದ್ದಾರೆ.

Sundar Pichai
ಸುಂದರ್ ಪಿಚೈ

ಸ್ಯಾನ್ ಫ್ರಾನ್ಸಿಸ್ಕೋ: ಚೀನಾ ಮೂಲದ ಟಿಕ್‌ಟಾಕ್ ಆ್ಯಪ್ ಖರೀದಿಸುವ ಸ್ಪರ್ಧೆಯಲ್ಲಿ ತಮ್ಮ ಕಂಪನಿ ಇಲ್ಲ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.

ನ್ಯೂಯಾರ್ಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸ್ಕಾಟ್ ಗ್ಯಾಲೋವೇ ಅವರು ಟಿಕ್‌ಟಾಕ್ ಅನ್ನು ಸ್ವಾಧೀನಪಡಿಸಿಕೊಳ್ಳಲು ನಿಮ್ಮ ಕಂಪನಿಯು ಆಸಕ್ತಿ ಹೊಂದಿದೆಯೇ ಎಂದು ಪಿಚೈ ಅವರನ್ನು ಕೇಳಿದರು. ಇದಕ್ಕೆ ಉತ್ತರಿಸಿದ ಪಿಚೈ ಈ ರೇಸ್​ನಲ್ಲಿ ನಾವಿಲ್ಲ ಎಂದು ಹೇಳಿದ್ದಾರೆ.

ಈ ಕಾಲದಲ್ಲಿ ಬಹಳ ಬಲವಾಗಿ ಹೊರಹೊಮ್ಮಿದ ಕಂಪನಿಗಳು ಇವೆ. ದೊಡ್ಡ ಕಂಪನಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ, ನಾನು ಸಾಕಷ್ಟು ಉದಯೋನ್ಮುಖ ಕಂಪನಿಗಳನ್ನು ನೋಡುತ್ತಿದ್ದೇನೆ ಎಂದು ಪಿಚೈ ಹೇಳಿದ್ದಾರೆ.

ಅಮೆರಿಕದಲ್ಲಿ 100 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಟಿಕ್​ಟಾಕ್ ಜೊತೆ ಯಾವುದೇ ವ್ಯವಹಾರ ನಡೆಸದಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಸ್ಟ್ 6 ರಂದು ಕಾರ್ಯಕಾರಿ ಆದೇಶ ಹೊರಡಿಸಿದ್ದಾರೆ. ಆಗಸ್ಟ್ 14 ರಂದು ಟ್ರಂಪ್ ಮತ್ತೊಂದು ಕಾರ್ಯನಿರ್ವಾಹಕ ಆದೇಶವನ್ನು ಹೊರಡಿಸಿದ್ದು, ಅಮೆರಿಕದಲ್ಲಿನಲ್ಲಿ ಟಿಕ್‌ಟಾಕ್ ವ್ಯವಹಾರವನ್ನು 90 ದಿನಗಳಲ್ಲಿ ಬೇರೆಯವರಿಗೆ ವರ್ಗಾಯಿಸುವ ಆಯ್ಕೆಯನ್ನು ಬೈಟ್‌ಡಾನ್ಸ್‌ಗೆ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.