ಕ್ಯಾಲಿಫೋರ್ನಿಯಾ: ಭಾರತದಲ್ಲಿ ಕೊರೊನಾ ಎರಡನೇ ಅಲೆ ಉಲ್ಬಣದಿಂದಾಗಿ ಪ್ರತಿನಿತ್ಯ ಮೂರು ಲಕ್ಷಗಳ ಕೇಸ್ಗಳು ಹಾಗೂ ಎರಡು ಸಾವಿರಕ್ಕೂ ಅಧಿಕ ಸಾವು ವರದಿಯಾಗುತ್ತಿವೆ. ಅಗತ್ಯ ಸೌಲಭ್ಯಗಳಿಲ್ಲದೆ ವೈದ್ಯಕೀಯ ವಲಯ ಸಂಕಷ್ಟದಲ್ಲಿ ಸಿಲುಕಿದೆ. ದೇಶದ ವೈರಸ್ ವಿರುದ್ಧದ ಹೋರಾಟದಲ್ಲಿ ಇದೀಗ ಗೂಗಲ್ ಕೈಜೋಡಿಸಿದ್ದು, 135 ಕೋಟಿ ರೂ. ನೆರವು ಘೋಷಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಗೂಗಲ್ ಸಿಇಒ ಸುಂದರ್ ಪಿಚೈ, ಭಾರತದಲ್ಲಿ ಉಲ್ಬಣಗೊಳ್ಳುತ್ತಿರುವ ಕೋವಿಡ್ ಬಿಕ್ಕಟ್ಟನ್ನು ನೋಡಿ ನಾನು ಕುಸಿದಿದ್ದು, ದೇಶದಲ್ಲಿ ವೈದ್ಯಕೀಯ ಸರಬರಾಜು ಮತ್ತು ತುರ್ತು ಪರಿಸ್ಥಿತಿಯ ಬೆಂಬಲಕ್ಕಾಗಿ 135 ಕೋಟಿ ರೂ. ಯೂನಿಸೆಫ್ (UNICEF) ಹಾಗೂ 'ಗಿವ್ ಇಂಡಿಯಾ' (GiveIndia) ಅಭಿಯಾನದಡಿ 135 ಕೋಟಿ ರೂ. ನೀಡುವುದಾಗಿ ಹೇಳಿದ್ದಾರೆ.
-
Devastated to see the worsening Covid crisis in India. Google & Googlers are providing Rs 135 Crore in funding to @GiveIndia, @UNICEF for medical supplies, orgs supporting high-risk communities, and grants to help spread critical information.https://t.co/OHJ79iEzZH
— Sundar Pichai (@sundarpichai) April 26, 2021 " class="align-text-top noRightClick twitterSection" data="
">Devastated to see the worsening Covid crisis in India. Google & Googlers are providing Rs 135 Crore in funding to @GiveIndia, @UNICEF for medical supplies, orgs supporting high-risk communities, and grants to help spread critical information.https://t.co/OHJ79iEzZH
— Sundar Pichai (@sundarpichai) April 26, 2021Devastated to see the worsening Covid crisis in India. Google & Googlers are providing Rs 135 Crore in funding to @GiveIndia, @UNICEF for medical supplies, orgs supporting high-risk communities, and grants to help spread critical information.https://t.co/OHJ79iEzZH
— Sundar Pichai (@sundarpichai) April 26, 2021
ಇದನ್ನೂ ಓದಿ: ದೇಶದಲ್ಲಿ ಪ್ರತಿ ನಿಮಿಷಕ್ಕೆ 243 ಸೋಂಕಿತರು ಪತ್ತೆ; ಒಂದೇ ದಿನ 2,812 ಮಂದಿ ಸಾವು
ಗೂಗಲ್ ಹಾಗೂ ಅದರ ಅಂಗಸಂಸ್ಥೆಗಳ ಮೂಲಕ ಈ ನೆರವು ನೀಡಲಾಗುತ್ತಿದೆ. ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶವನ್ನು ಬೆಂಬಲಿಸಲು ಕಂಪನಿಯು ಭಾರತದ ಸ್ಥಳೀಯ ಸರ್ಕಾರಗಳೊಂದಿಗೆ ಕೆಲಸ ಮಾಡಲಿದೆ ಎಂದು ಗೂಗಲ್ ಇಂಡಿಯಾದ ಮುಖ್ಯಸ್ಥ ಸಂಜಯ್ ಗುಪ್ತಾ ತಿಳಿಸಿದ್ದಾರೆ.
ಕಳೆದ ವರ್ಷ ಕೂಡ ಸುಂದರ್ ಪಿಚೈ ಅವರು ಜಾಗತಿಕ ಕೋವಿಡ್-19 ನಿರ್ಮೂಲನೆಗಾಗಿ 5,990 ಕೋಟಿ ರೂ. ದೇಣಿಗೆ ನೀಡಿದ್ದರು. ಅಲ್ಲದೇ ಭಾರತದ ದಿನಗೂಲಿ ಕಾರ್ಮಿಕರ ಕುಟುಂಬಗಳಿಗೆ ನೆರವಾಗಲು 5 ಕೋಟಿ ರೂ. ಕೊಟ್ಟಿದ್ದರು.