ಫ್ಲೋರಿಡಾ: ಎಷ್ಟೋ ಮಿಲಿಯನ್ ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ಡೈನೋಸಾರ್ ಪ್ರಾಣಿಯನ್ನು ಈಗ ನೋಡಿದ್ದೇನೆ ಎಂದು ಹೇಳಿದರೆ ಯಾರೂ ನಂಬುವುದಿಲ್ಲ. ಆದರೆ ಫ್ಲೋರಿಡಾದ ಮಹಿಳೆಯೊಬ್ಬರು ತಮ್ಮ ಮನೆಯ ಅಂಗಳದಲ್ಲಿ 'ಮರಿ ಡೈನೋಸಾರ್' ಅನ್ನು ಕಂಡಿದ್ದಾಗಿ ಹೇಳಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಏಪ್ರಿಲ್ 15 ರಂದು ಫ್ಲೋರಿಡಾದ ಕ್ರಿಸ್ಟಿನಾ ರಿಯಾನ್ ಎಂಬವರ ಮನೆಯಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ರಾತ್ರಿ ವೇಳೆ ವಿಚಿತ್ರ ಆಕೃತಿಯ ಪ್ರಾಣಿಯೊಂದು ವೇಗವಾಗಿ ಓಡಿಹೋಗುತ್ತಿರುವ ದೃಶ್ಯ ಸೆರೆಯಾಗಿದೆ.
'ಜುರಾಸಿಕ್ ಪಾರ್ಕ್' ಸಿನಿಮಾವನ್ನು ಹಲವು ಬಾರಿ ನೋಡಿದ್ದೇನೆ, ಈಗ ನಾನು ಕಂಡಿದ್ದು ಮರಿ ಡೈನೋಸಾರ್. ಈ ಪ್ರಾಣಿಗೆ ಹಿಂಬದಿ ಕಾಲುಗಳಿರಲಿಲ್ಲ ಎನ್ನುತ್ತಾರೆ ರಿಯಾನ್. ಇವರು ಮಾತ್ರವಲ್ಲ ಸೋಷಿಯಲ್ ಮೀಡಿಯಾದಲ್ಲಿ ಈ ದೃಶ್ಯ ನೋಡಿದ ಅನೇಕರು ಇದು ಡೈನೋಸಾರ್ನಂತೆಯೇ ಕಾಣುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
-
Looks normal to me, we have entered a new era, Welcome to Jurassic World.
— dinoart32 (@dinoart32) April 19, 2021 " class="align-text-top noRightClick twitterSection" data="
">Looks normal to me, we have entered a new era, Welcome to Jurassic World.
— dinoart32 (@dinoart32) April 19, 2021Looks normal to me, we have entered a new era, Welcome to Jurassic World.
— dinoart32 (@dinoart32) April 19, 2021
ಹಲವರು ತಮ್ಮ ಟ್ವಿಟರ್ ಖಾತೆಗಳಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಇಂಟರ್ನೆಟ್ನಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಒಬ್ಬರು "ನಾವು ಹೊಸ ಯುಗಕ್ಕೆ ಕಾಲಿಟ್ಟಿದ್ದು, ಜುರಾಸಿಕ್ ವರ್ಲ್ಡ್ಗೆ ಸ್ವಾಗತ" ಎಂದು ಟ್ವೀಟ್ ಮಾಡಿದ್ದರೆ, ಕೆಲವರು ಇದು ಡ್ರ್ಯಾಗನ್, ನಾಯಿ-ನರಿಯೆಂದೆಲ್ಲಾ ಹೇಳಿದ್ದಾರೆ.