ETV Bharat / international

ಕುಟುಂಬದ ನಾಲ್ವರು ಸದಸ್ಯರನ್ನು ಗುಂಡಿಕ್ಕಿ ಕೊಂದ ಮಾಜಿ ಗನ್​ಮ್ಯಾನ್​... ಕಾರಣ? - shootout in Athens

ಅಥೆನ್ಸ್​ನ ಜಾರ್ಜಿಯಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಏಳು ಜನರು ಗಾಯಗೊಂಡಿದ್ದು, ವ್ಯಕ್ತಿಯೊರ್ವ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೊಂದೆಡೆ ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ಗನ್​ಮ್ಯಾನ್​ ಆಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿ ತನ್ನ ಕುಟುಂಬದ ನಾಲ್ವರು ಸದಸ್ಯರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.

Florida
ಶೂಟೌಟ್​
author img

By

Published : Sep 6, 2021, 7:01 AM IST

ಫೋರ್ಟ್ ಲಾಡರ್‌ಡೇಲ್( ಅಮೆರಿಕ): ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ಗನ್​ಮ್ಯಾನ್​ ಆಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿ ತನ್ನ ಕುಟುಂಬದ ನಾಲ್ವರು ಸದಸ್ಯರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎಂದು ಪೋಲ್ಕ್ ಕೌಂಟಿ ಶೆರಿಫ್ ಗ್ರೇಡಿ ಜಡ್ಡ್ ಹೇಳಿದ್ದಾರೆ. ಮೂರು ತಿಂಗಳ ಕಂದಮ್ಮ ಸೇರಿ ನಾಲ್ವರು ಈ ಘಟನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

33 ವರ್ಷದ ಬ್ರಿಯಾನ್ ರಿಲೆ ಎಂಬಾತ ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ಗನ್​ಮ್ಯಾನ್​ ಆಗಿ ಸೇವೆ ಸಲ್ಲಿಸುತ್ತಿದ್ದ. ಆದರೆ, ಇತ್ತೀಚಿನ ದಿನಗಳಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಈತ, ತನ್ನ ಗೆಳತಿಯೊಂದಿಗೆ ತಾನು ದೇವರೊಂದಿಗೆ ನೇರವಾಗಿ ಸಂವಹನ ಮಾಡುತ್ತೇನೆ ಎಂದು ಪದೇ ಪದೆ ಹೇಳುತ್ತಿದ್ದನಂತೆ.

ಇನ್ನು ಪೊಲೀಸರು ಆರೋಪಿಯಿಂದ ಗನ್​ ವಶಪಡಿಸಿಕೊಳ್ಳಲು ಗುಂಡಿನ ಚಕಮಕಿ ನಡೆಸಿದ್ದರು. ಆತನನ್ನು ಸೆರೆಹಿಡಿದ ಬಳಿಕ ಸ್ಥಳ ಪರಿಶೀಲನೆ ನಡೆಸಿದ ಪೊಲೀಸರಿಗೆ 11 ವರ್ಷದ ಬಾಲಕಿ, 33 ವರ್ಷದ ಮಹಿಳೆ, 3 ತಿಂಗಳ ಗಂಡು ಮಗು, 62 ವರ್ಷದ ವೃದ್ಧೆಯ ಮೃತದೇಹ ಮನೆಯಲ್ಲಿ ಕಂಡು ಬಂದಿದೆ.

ಅಥೆನ್ಸ್( ಇಟಲಿ)​: ಇನ್ನೊಂದೆಡೆ ಅಥೆನ್ಸ್​ನ ಜಾರ್ಜಿಯಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಏಳು ಜನರು ಗಾಯಗೊಂಡಿದ್ದು, ವ್ಯಕ್ತಿಯೊರ್ವ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಥೆನ್ಸ್​ ಪಟ್ಟಣದಲ್ಲಿ ಭಾನುವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅಥೆನ್ಸ್-ಕ್ಲಾರ್ಕ್ ಕೌಂಟಿ ಪೊಲೀಸರು ತಿಳಿಸಿದ್ದಾರೆ.

ಇನ್ನು ಗಾಯಾಳುಗಳು ಜೀವಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಲೆಫ್ಟಿನೆಂಟ್ ಶಾನ್ ಬಾರ್ನೆಟ್ ಹೇಳಿದ್ದಾರೆ. ಗುಂಡಿನ ದಾಳಿ ನಡೆಸಿದ ಶಂಕಿತ ಯುವಕನನ್ನು ಪೊಲೀಸರು ಹುಡುಕಾಡುತ್ತಿದ್ದಾರೆ. ಇನ್ನು ಆರೋಪಿಯ ಬಗ್ಗೆ ಮಾಹಿತಿ ನೀಡುವರಿಗೆ 1000 ಡಾಲರ್​ ನೀಡುವುದಾಗಿ ಕ್ರೈಮ್ ಸ್ಟಾಪರ್ಸ್ ಘೋಷಿಸಿದ್ದಾರೆ ಎಂದು ಅಥೆನ್ಸ್ ಬ್ಯಾನರ್-ಹೆರಾಲ್ಡ್ ವರದಿ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.