ನ್ಯೂಯಾರ್ಕ್: ವಿದೇಶಿ ನೇರ ಬಂಡವಾಳ ಹೂಡಿಕೆಯ (ಎಫ್ಡಿಐ) ಅಗ್ರ 20 ರಾಷ್ಟ್ರಗಳಲ್ಲಿ ಭಾರತ ಅತ್ಯಂತ ಆಕರ್ಷಣೀಯ ದೇಶ ಎಂದು ವಿಶ್ವ ಸಂಸ್ಥೆ ವರದಿ ತಿಳಿಸಿದೆ.
2018ರಲ್ಲಿ ಭಾರತಕ್ಕೆ ಶೇ 6ರ ಬೆಳವಣಿಗೆ ದರದಲ್ಲಿ 2.9 ಲಕ್ಷ ಕೋಟಿ (42 ಬಿಲಿಯನ್ ಡಾಲರ್) ಎಫ್ಡಿಐ ಹರಿದುಬಂದಿದೆ. ಇದರಲ್ಲಿ ಉತ್ಪಾದನಾ, ಸಂವಹನ ಹಾಗೂ ಹಣಕಾಸು ವಲಯಗಳಲ್ಲಿ ಅತ್ಯಧಿಕ ಬಂಡವಾಳ ಹೂಡಿಕೆಯಾಗಿದೆ ಎಂದು ವಿಶ್ವ ಸಂಸ್ಥೆ ಸಿದ್ಧಪಡಿಸಿದ 'ಪ್ರಪಂಚದ ಹೂಡಿಕೆ ವರದಿ 2019'ರಲ್ಲಿ ಉಲ್ಲೇಖಿಸಲಾಗಿದೆ.
ಇದೇ ಅವಧಿಯಲ್ಲಿ ಜಾಗತಿಕ ಮಟ್ಟದಲ್ಲಿನ ಬಂಡವಾಳ ಹೂಡಿಕೆ ಪ್ರಮಾಣ ಶೇ 13ರಷ್ಟು ಕುಸಿದಿದೆ. ₹ 10.44 ಲಕ್ಷ ಕೋಟಿ ಇದ್ದದ್ದು ₹ 9.02 ಲಕ್ಷ ಕೋಟಿಗೆ ತಲುಪಿದೆ. ಏಷ್ಯಾದ ಅಭಿವೃದ್ಧಿಶೀಲ ರಾಷ್ಟ್ರಗಳ ಎಫ್ಡಿಎ ಶೇ 3.9ರ ಪ್ರತಿಶತದಲ್ಲಿ ಬೆಳವಣಿಗೆ ದರ ದಾಖಲಿಸಿದೆ.
ಚೀನಾ, ಹಾಂಕಾಂಗ್, ಸಿಂಗಾಪುರ್, ಇಂಡೋನೇಷ್ಯಾ ಮತ್ತು ಇತರ ರಾಷ್ಟ್ರಗಳಿದ್ದು, ಇದರಲ್ಲಿ ಭಾರತ ಮತ್ತು ಟರ್ಕಿ ಅತ್ಯಧಿಕ ಎಫ್ಡಿಐ ಪಾಲು ಸ್ವೀಕರಿಸಿವೆ. ಪ್ರಪಂಚದ ಒಟ್ಟು ಎಫ್ಡಿಐ ಹೂಡಿಕೆಯಲ್ಲಿ ಏಷ್ಯಾ ರಾಷ್ಟ್ರಗಳ ಪಾಲು ಶೇ 39ರಷ್ಟಿದೆ. ಇದರ ಹಿಂದಿನ ವರ್ಷ (2017) ಶೇ 33ರಷ್ಟು ಇದ್ದಿತ್ತು.