ವಾಷಿಂಗ್ಟನ್: ಕೊರೊನಾ ಲಸಿಕೆಗಳನ್ನು ಅಭಿವೃದ್ಧಿಪಡಿಸಲು ತೆಗೆದುಕೊಂಡ ಅಲ್ಪಾವಧಿಯ ಸಮಯವು "ವೈಜ್ಞಾನಿಕ ತಂತ್ರಜ್ಞಾನದಲ್ಲಿನ ಅಸಾಧಾರಣ ಪ್ರಗತಿಗೆ" ಕಾರಣವಾಗಿದೆ ಎಂದು ಸಾಂಕ್ರಾಮಿಕ ರೋಗಗಳ ತಜ್ಞ ಡಾ. ಅಂಥೋಣಿ ಫೌಸಿ ತಿಳಿಸಿದ್ದಾರೆ.
ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್ ಸ್ಟೇಟ್ ವಿವಿಯಿಂದ ನೀಡಲಾದ ವಿಲಿಯಂ ರಾಂಡೋಲ್ಫ್ ಹರ್ಸ್ಟ್ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಮಾತನಾಡಿದ ಅವರು, ಲಸಿಕೆ ಎಫ್ಡಿಎ ಅನುಮೋದನೆಯನ್ನು ಪಡೆದಾಗ, ಯಾವುದೇ ಹಿಂಜರಿಕೆಯಿಲ್ಲದೆ ಲಸಿಕೆಯನ್ನು ತೆಗೆದುಕೊಂಡೆ ಹಾಗೂ ನನ್ನ ಕುಟುಂಬದ ಸದಸ್ಯರಿಗೂ ಬಳಕೆ ಮಾಡುವಂತೆ ಸೂಚಿಸಿದೆ ಎಂದಿದ್ದಾರೆ.