ETV Bharat / international

ಕೋವಿಡ್​-19 ವೈರಸ್ ಕೃತಕವಲ್ಲ.. ಅಮೆರಿಕ ಸಾಂಕ್ರಾಮಿಕ ರೋಗಗಳ ತಜ್ಞ ಫೌಸಿ ಸ್ಪಷ್ಟನೆ!! - ನ್ಯಾಷನಲ್ ಜಿಯಾಗ್ರಫಿಕ್​

ಬೇಸಿಗೆ ಮುಗಿಯುವಷ್ಟರಲ್ಲಿ ಅಮೆರಿಕ ವೈರಸ್​ ಹರಡುವಿಕೆಯನ್ನು ತಡೆಗಟ್ಟದಿದ್ದರೆ, ಬರುವ ಮಳೆಗಾಲ ಹಾಗೂ ಚಳಿಗಾಲದಲ್ಲಿ ಎರಡನೇ ಹಂತದ ವೈರಸ್​ ಹರಡುವಿಕೆ ಆರಂಭವಾಗುವ ಅಪಾಯ ಕಾದಿದೆ ಎಂದು ಫೌಸಿ ಕಳವಳ ವ್ಯಕ್ತಪಡಿಸಿದ್ದಾರೆ.

Fauci dismisses theory coronavirus originated in Chinese lab

author img

By

Published : May 6, 2020, 8:24 PM IST

ವಾಶಿಂಗ್ಟನ್​: ಕೋವಿಡ್​-19 ವೈರಸ್‌ನ ಪ್ರಯೋಗಾಲಯದಲ್ಲಿ ಕೃತಕವಾಗಿ ಅಥವಾ ದುರುದ್ದೇಶಪೂರ್ವಕವಾಗಿ ಸೃಷ್ಟಿ ಮಾಡಲಾಗಿಲ್ಲ ಎಂದು ಅಮೆರಿಕದ ಸಾಂಕ್ರಾಮಿಕ ರೋಗಗಳ ಖ್ಯಾತ ತಜ್ಞ ಅಂಥೋನಿ ಫೌಸಿ ಅಭಿಪ್ರಾಯಪಟ್ಟಿದ್ದಾರೆ. ನ್ಯಾಷನಲ್​ ಇನ್​ಸ್ಟಿಟ್ಯೂಟ್​ ಆಫ್ ಅಲರ್ಜಿ ಅಂಡ್ ಇನ್ಫೆಕ್ಷಿಯಸ್​ ಡಿಸೀಸ್​ನ ನಿರ್ದೇಶಕರೂ ಆಗಿರುವ ಫೌಸಿ ಅವರು, ನ್ಯಾಷನಲ್ ಜಿಯಾಗ್ರಫಿಕ್​ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ವೈರಸ್‌ನ ಕೃತಕವಾಗಿ ಸೃಷ್ಟಿಸಲಾಯಿತಾ ಅಥವಾ ಚೀನಾದ ಪ್ರಯೋಗಾಲಯದಲ್ಲಿ ಅಚಾತುರ್ಯದಿಂದ ವೈರಸ್​ ಎಲ್ಲೆಡೆ ಹರಡಿತಾ ಎಂಬ ಪ್ರಶ್ನೆಗೆ ಉತ್ತರಿಸಿದ ಫೌಸಿ, "ಬಾವಲಿಗಳಲ್ಲಿನ ವೈರಸ್​ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಲ್ಲಿ, ಕೋವಿಡ್-19 ವೈರಸ್​ ತಯಾರಿಸಿದ್ದಾಗಲಿ ಅಥವಾ ದುರುದ್ದೇಶಪೂರ್ವಕವಾಗಿ ಮಾರ್ಪಡಿಸಿದ್ದಾಗಲಿ ಎಂದು ಅನಿಸೋದಿಲ್ಲ. ಈ ವೈರಸ್​ ನೈಸರ್ಗಿಕವಾಗಿಯೇ ರೂಪಾಂತರ ಹೊಂದಿದೆ. ಹಲವಾರು ಜೀವಶಾಸ್ತ್ರಜ್ಞರ ಪ್ರಕಾರ ಈ ವೈರಸ್​ ಪ್ರಕೃತಿಯಲ್ಲಿಯೇ ರೂಪಾಂತರ ಹೊಂದಿದ್ದು, ನಂತರ ಜೀವಿಗಳ ಶರೀರ ಸೇರಿಕೊಂಡಿದೆ." ಎಂದಿದ್ದಾರೆ.

ಬೇಸಿಗೆ ಮುಗಿಯುವಷ್ಟರಲ್ಲಿ ಅಮೆರಿಕ ವೈರಸ್​ ಹರಡುವಿಕೆಯನ್ನು ತಡೆಗಟ್ಟದಿದ್ದರೆ, ಬರುವ ಮಳೆಗಾಲ ಹಾಗೂ ಚಳಿಗಾಲದಲ್ಲಿ 2ನೇ ಹಂತದ ವೈರಸ್​ ಹರಡುವಿಕೆ ಆರಂಭವಾಗುವ ಅಪಾಯ ಕಾದಿದೆ ಎಂದು ಫೌಸಿ ಕಳವಳ ವ್ಯಕ್ತಪಡಿಸಿದ್ದಾರೆ. ನಗರಗಳು ಹಾಗೂ ರಾಜ್ಯಗಳಲ್ಲಿ ವೈರಸ್​ ಸೋಂಕಿನ ಪ್ರಮಾಣ ಇಳಿಕೆಯಾಗುವವರೆಗೂ ಸಾಮಾಜಿಕ ಅಂತರದ ನಿಯಮಗಳನ್ನು ಅತ್ಯಂತ ಕಟ್ಟಿನಿಟ್ಟಾಗಿ ಪಾಲಿಸಬೇಕಿದೆ ಎಂದು ಅವರು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.