ETV Bharat / international

ಎಪಿಕ್ ಗೇಮ್ಸ್ ಸ್ಟೋರ್​; ಕಳೆದ ವರ್ಷ ಇಷ್ಟೊಂದು ಫ್ರೀ ಗೇಮ್ಸ್ ಪಡೆದ ಆಟಗಾರರು!! - ಎಪಿಕ್ ಗೇಮ್ಸ್ ಸ್ಟೋರ್

ಎಪಿಕ್ ತನ್ನ ದೈನಂದಿನ ಸಕ್ರಿಯ ಬಳಕೆದಾರರ ಸಂಖ್ಯೆಯನ್ನು 31.3 ಮಿಲಿಯನ್​ಗೆ ಏರಿಸಿಕೊಂಡಿದ್ದು, ಕಂಪನಿಯು ಶೇ.192 ಬೂಸ್ಟ್​ ಮಾಡಿಕೊಂಡಿದೆ ಎಂದು ಹೇಳುತ್ತದೆ. ಅಂದ್ರೆ ಗರಿಷ್ಠ ಆಟಗಾರರ ಸಂಖ್ಯೆ 2020ರಲ್ಲಿ 13 ಮಿಲಿಯನ್‌ಗೆ ತಲುಪಿದೆ. ಇದು 2019ರಲ್ಲಿದ್ದ 7 ಮಿಲಿಯನ್ ಆಟಗಾರರನ್ನು ಡಬಲ್​ ಮಾಡಿದೆ..

Epic Games Store
ಎಪಿಕ್ ಗೇಮ್ಸ್
author img

By

Published : Jan 30, 2021, 4:56 PM IST

ಸ್ಯಾನ್ ಫ್ರಾನ್ಸಿಸ್ಕೊ : ಕಳೆದ ವರ್ಷದಲ್ಲಿ ಎಪಿಕ್ ಗೇಮ್ಸ್ ಸ್ಟೋರ್ ಬಳಕೆದಾರರು ಒಟ್ಟು 749 ಮಿಲಿಯನ್ ಉಚಿತ ಆಟಗಳನ್ನು ಪಡೆದಿದ್ದಾರೆ ಎಂದು ಎಪಿಕ್ ಗೇಮ್ಸ್ ಸ್ಟೋರ್ ಪ್ರಕಟಿಸಿದೆ.

ಕಳೆದ ವರ್ಷ 103 ಉಚಿತ ಆಟಗಳಿವೆ ಎಂದು ಕಂಪನಿ ಹೇಳಿತ್ತು. ಆದ್ರೆ, ಗೇಮರ್​ಗಳು 749 ಮಿಲಿಯನ್ ಉಚಿತ ಗೇಮ್ಸ್​ಗಳನ್ನು ಪಡೆದಿದ್ದಾರೆ. ಈ ವರ್ಷವೂ ಅದೇ ಕ್ರಮವನ್ನು ಮುಂದುವರಿಸಲು ಕಂಪನಿಯು ಬದ್ಧ ಎಂದು ಎಪಿಕ್​ ಹೇಳಿದೆ.

ಸದ್ಯ 160 ಮಿಲಿಯನ್​ ಖಾತೆದಾರರನ್ನು ಎಪಿಕ್ ಗೇಮ್ಸ್ ಸ್ಟೋರ್ ಹೊಂದಿದೆ. 2019ರಲ್ಲಿ 108 ಮಂದಿ ಬಳಕೆದಾರರು ಇದರ ಖಾತೆ ಹೊಂದಿದ್ದು, ಇದೀಗ ಅದರ ಪಟ್ಟು ಇನ್ನಷ್ಟು ಹೆಚ್ಚಾಗಿದೆ. ಅಂದರೆ ಸುಮಾರು ದ್ವಿಗುಣ ಮಟ್ಟದಲ್ಲಿ ಇದರ ಆಟಗಾರರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ ಎಂದು ದಿ ವರ್ಜ್​ನ ವರದಿಯು ತಿಳಿಸುತ್ತಿದೆ.

ಎಪಿಕ್ ತನ್ನ ದೈನಂದಿನ ಸಕ್ರಿಯ ಬಳಕೆದಾರರ ಸಂಖ್ಯೆಯನ್ನು 31.3 ಮಿಲಿಯನ್​ಗೆ ಏರಿಸಿಕೊಂಡಿದ್ದು, ಕಂಪನಿಯು ಶೇ.192 ಬೂಸ್ಟ್​ ಮಾಡಿಕೊಂಡಿದೆ ಎಂದು ಹೇಳುತ್ತದೆ. ಅಂದ್ರೆ ಗರಿಷ್ಠ ಆಟಗಾರರ ಸಂಖ್ಯೆ 2020ರಲ್ಲಿ 13 ಮಿಲಿಯನ್‌ಗೆ ತಲುಪಿದೆ. ಇದು 2019ರಲ್ಲಿದ್ದ 7 ಮಿಲಿಯನ್ ಆಟಗಾರರನ್ನು ಡಬಲ್​ ಮಾಡಿದೆ.

ಇನ್ನು, ಎಪಿಕ್​ ತನ್ನ ಬಳಕೆದಾರರಿಗಾಗಿ 2020ರಲ್ಲಿ ಸುಮಾರು 700 ಮಿಲಿಯನ್​ ಡಾಲರ್​ ಖರ್ಚು ಮಾಡಿದೆ. ಇದರಲ್ಲಿ 265 ಮಿಲಿಯನ್ ಕಂಪನಿಯ ಖರ್ಚಾದ್ರೆ ಉಳಿದವುಗಳು ತನ್ನ ಬಳಕೆದಾರರು ಮೂರನೇ​ ಪಾರ್ಟಿಯಿಂದ ಪಡೆದ ಗೇಮ್​ಗಳ ಖರ್ಚಿನ ಸಾಲಿಗೆ ಸೇರುತ್ತದೆ.

ಅಂದ್ರೆ ಇದು ಎಪಿಕ್​ನ ಜೊತೆ ವಿಲೀನವಾದ ಕೆಲ ಗೇಮ್​ಗಳಿಗೆ ಬಳಸುವ ಮೊತ್ತ. ಇದರ ಕೆಲ ಗೇಮ್ಸ್​ಗಳು ಫೋರ್ಟ್‌ನೈಟ್, ಸ್ನೋ ರನ್ನರ್, ಸ್ಯಾಟಿಸ್​ಫ್ಯಾಕ್ಟರಿ, ಗಾಡ್‌ಫಾಲ್, ಬಾರ್ಡರ್ ಲ್ಯಾಂಡ್ಸ್ 3, ಅಸ್ಯಾಸಿನ್ಸ್ ಕ್ರೀಡ್ ವಲ್ಹಲ್ಲಾ, ಜಿಟಿಎ 5 ಮತ್ತು ರೋಗ್ ಕಂಪನಿ ಕಳೆದ ವರ್ಷ ಎಪಿಕ್ ಗೇಮ್ಸ್ ಸ್ಟೋರ್​ನಲ್ಲಿ ಜನಪ್ರಿಯತೆ ಗಳಿಸಿದ ಆಟಗಳು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.